ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಐಟಿ ತನಿಖೆಯಲ್ಲಿ ಸಾಬೀತಾಯಿತೇ "ಹನಿಟ್ರ್ಯಾಪ್" ಆರೋಪ ?

|
Google Oneindia Kannada News

ಬೆಂಗಳೂರು, ಮೇ. 25: ಕೊರೊನಾ ಅಲೆಯ ಅಬ್ಬರದಲ್ಲಿ ಸುದ್ದಿ ಕೇಂದ್ರದಿಂದ ಕಣ್ಮರೆಯಾಗಿದ್ದ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ತನಿಖೆ ಬಹುತೇಕ ಮುಗಿದಿದೆ. " ಸಿಡಿಯಲ್ಲಿರುವ ಯುವತಿ ಜತೆ ಇರುವುದು ನಾನೇ. ಆಕೆಯ ಸಹಮತದೊಂದಿಗೆ ನಾನು ಲೈಂಗಿಕ ಕ್ರಿಯೆ ನಡೆಸಿದ್ದೇನೆ" ಎಂಬ ಹೇಳಿಕೆಯನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ಐಟಿ ಅಧಿಕಾರಿಗಳ ಮುಂದೆ ದಾಖಲಿಸಿದ್ದಾರೆ ಎನ್ನಲಾಗಿದೆ.

ವೈದ್ಯಕೀಯ ಪರೀಕ್ಷೆಗೂ ಒಳಗಾಗುವ ಮೂಲಕ ಜಾರಕಿಹೊಳಿ ಅಂತಿಮವಾಗಿ "ಸತ್ಯ" ದಾಖಲಿಸಿ ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದ್ದಾರೆ. ಕೆಲವೇ ದಿನಗಳಲ್ಲಿ"ಅಶ್ಲೀಲ ಸಿಡಿ ಪ್ರಕರಣ" ಸಂಬಂಧ ಸಂತ್ರಸ್ತ ಯುವತಿ ದಾಖಲಿಸಿರುವ ಪ್ರಕರಣ ಸಂಬಂಧ ಅಂತಿಮ ವರದಿಯನ್ನು ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಲು ತಯಾರಿ ನಡೆದಿದೆ. ಎಸ್ಐಟಿ ತನಿಖೆಯಲ್ಲಿ ಇದು ಹನಿಟ್ರ್ಯಾಪ್ ಎಂಬುದು ಸಾಬೀತಾಗಿದೆ ಎನ್ನಲಾಗಿದೆ.

ಸಿಡಿ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ರಮೇಶ್ ಜಾರಕಿಹೊಳಿಸಿಡಿ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ರಮೇಶ್ ಜಾರಕಿಹೊಳಿ

ಕೊರೊನಾವೈರಸ್ ಸೋಂಕು ಹೆಚ್ಚಳದ ಬೆನ್ನಲ್ಲೇ ಎಸ್ಐಟಿ ವಿಚಾರಣೆಗೆ ಹಾಜರಾಗದೇ ಗೈರು ಹಾಗಿದ್ದ ಜಾರಕಿಹೊಳಿ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪರಾಕಾಷ್ಠೆಗೆ ತಲುಪಿತು. ಬ್ಲಾಕ್ ಮೇಲ್ ಆರೋಪ ಕೇಳಿ ಬಂದ ಬೆನ್ನಲ್ಲೇ ಶಂಕಿತ ನರೇಶ್ ಮತ್ತು ಶ್ರವಣ್ ತಲೆಮರೆಸಿಕೊಂಡ ಬಳಕ ಇಡೀ ಪ್ರಕರಣವೂ ಸಹ ಸುದ್ದಿ ಕೇಂದ್ರದಿಂದ ತೆರೆ ಮರೆಗೆ ಸರಿದಿತ್ತು. ಮುಂದೆ ಓದಿ...

 ಆಸ್ಪತ್ರೆಗೆ ದಾಖಲಾಗಿದ್ದ ಜಾರಕಿಹೊಳಿ ದಿಢೀರ್ ಹೇಳಿಕೆ

ಆಸ್ಪತ್ರೆಗೆ ದಾಖಲಾಗಿದ್ದ ಜಾರಕಿಹೊಳಿ ದಿಢೀರ್ ಹೇಳಿಕೆ

ಕೊರೊನಾವೈರಸ್ ಅಬ್ಬರದ ಅಲೆ ನಡುವೆ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಆರಂಭದಲ್ಲಿ ನಾನವನಲ್ಲ ಎಂದೇ ವಾದ ಮಂಡಿಸುತ್ತಿದ್ದ ರಮೇಶ್ ಜಾರಕಿಹೊಳಿ ಎದುರು ಎಸ್ಐಟಿ ಮುಂದಿಟ್ಟ ಸಾಕ್ಷಗಳನ್ನು ಒಪ್ಪಿಕೊಳ್ಳದೇ ಅಲ್ಲಗಳೆಯುವಂತಿಲ್ಲ. ನಾನವಲ್ಲ ಎಂದಿದ್ದ ರಮೇಶ್ ಜಾರಕಿಹೊಳಿ ಕೊನೆಗೂ ಸಿಡಿ ವೃತ್ತಾಂತವನ್ನು ಬಾಯಿ ಬಿಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.

ಆಕೆ ಜತೆ ಅದು ಮಾಡಿದ್ದು ನಿಜ

ಆಕೆ ಜತೆ ಅದು ಮಾಡಿದ್ದು ನಿಜ

ಸಿಡಿಯಲ್ಲಿರುವ ಯುವತಿ ನನಗೆ ಗೊತ್ತು. ಆಕೆ ನನಗೆ ಮೊದಲಿನಿಂದಲೂ ಪರಿಚಯವಿದ್ದಳು. ಡ್ರೋನ್ ಪ್ರಾಜೆಕ್ಟ್ ಹೆಸರಿನಲ್ಲಿ ಬಂದು ನನಗೆ ಪರಿಚಯವಾಗುತ್ತಿದ್ದಳು. ಮಲ್ಲೇಶ್ವರದ ಮಂತ್ರಿ ಗ್ರೀನ್ಸ್ ನಲ್ಲಿರುವ ಅಪಾರ್ಟ್ ಮೆಂಟ್ ಗೂ ಬಂದು ಭೇಟಿ ಮಾಡುತ್ತಿದ್ದಳು. ಅವಳೇ ನನ್ನನ್ನು ಲೈಂಗಿಕವಾಗಿ ಹನಿಟ್ರ್ಯಾಪ್ ಮಾಡುವ ಉದ್ದೇಶದಿಂದ ಪುಸಲಾಯಿಸುತ್ತಿದ್ದಳು. ಆಕೆಯೇ ವಿಡಿಯೋ ಕರೆ ಮಾಡಿ ಅಂಗಾಂಗ ತೋರಿಸುತ್ತಿದ್ದಳು. ಆಕೆಯ ಪ್ರಚೋದನೆಗೆ ಒಳಗಾಗಿ ನಾನು ಲೈಂಗಿಕ ಕ್ರಿಯೆ ನಡೆಸಿರುವುದು ನಿಜ. ಸಿಡಿಯಲ್ಲಿರುವ ಸಂತ್ರಸ್ತ ಯುವತಿಯ ಜತೆ ಇರುವುದು ನಾನೇ. ಇದು ಅತ್ಯಾಚಾರವಲ್ಲ ಇಬ್ಬರು ಪರಸ್ಪರ ಒಪ್ಪಿಯೇ ಮಾಡಿದ್ದೇವೆ. ಆಕೆ ಇದನ್ನು ರೆಕಾರ್ಡ್ ಮಾಡುವ ಬಗ್ಗೆ ನನ್ನ ಅರಿವಿಗೆ ಬಂದಿಲ್ಲ. ನನ್ನನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದಲೇ ರೆಕಾರ್ಡ್ ಮಾಡಿಕೊಂಡಿದ್ದು, ಇದರ ಹಿಂದೆ ಷಡ್ಯಂತ್ರ ನಡೆದಿದ್ದು, ತನಿಖೆ ನಡೆಸಿ ಎಂದು ಜಾರಕಿಹೊಳಿ ತನಿಖಾಧಿಕಾರಿಗಳ ಮುಂದೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಡೆಡ್ ಲೈನ್ ಮುಕ್ತಾಯ

ಡೆಡ್ ಲೈನ್ ಮುಕ್ತಾಯ

ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಸಂಬಂಧ ನ್ಯಾಯಾಲಯ ವಿಧಿಸಿರುವ ಗಡುವು ಸಮೀಪಿಸಿರುವ ಹಿನ್ನೆಲೆಯಲ್ಲಿ ಮೇ. ತಿಂಗಳಾಂತ್ಯದೊಳಗೆ ವರದಿ ಸಲ್ಲಿಸಲು ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ತನಿಖಾಧಿಕಾರಿ ಕವಿತಾ ಮತ್ತು ಅವರು ತಂಡ ಹಗಲಿರುಳು ಶ್ರಮ ವಹಿಸಿ ತನಿಖಾ ವರದಿ ಸಿದ್ದಪಡಿಸಿದೆ. ಈ ವರದಿಯನ್ನು ತನಿಖಾ ತಂಡದ ಪ್ರಮುಖ ಅಧಿಕಾರಿಗಳಾದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಅಪರಾಧ ವಿಭಾಗದ ಡಿಸಿಪಿ ಕೆ.ಪಿ. ರವಿಕುಮಾರ್, ಸೌಮೇಂದು ಮುಖರ್ಜಿ, ಅನುಚೇತ್ ಅವರು ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲರ ಪರಿಶೀಲನೆ ಬಳಿಕ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಒಮ್ಮೆ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬಳಿಕ ಪ್ರಕರಣದ ಮತ್ತಷ್ಟು ಸತ್ಯಾಂಶಗಳು ಬಯಲಿಗೆ ಬರಲಿವೆ.

ವೈದ್ಯಕೀಯ ಪರೀಕ್ಷೆ

ವೈದ್ಯಕೀಯ ಪರೀಕ್ಷೆ

ರಮೇಶ್ ಜಾರಕಿಹೊಳಿ ವಿರುದ್ದ ಇರುವುದು ಗಂಭೀರ ಆರೋಪ ಪ್ರಕರಣ. ಹೀಗಾಗಿ ಅವರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮೂಲಕ ಸಿಡಿ ಸಂತ್ರಸ್ತ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಅಮಿಷವೊಡ್ಡಿ ಲೈಂಗಿಕ ದುರ್ಬಳಕೆ ಮಾಡಿಕೊಂಡ ಆರೋಪ ಕುರಿತ ಪ್ರಕರಣದ ತನಿಖೆ ಮುಕ್ತಾಯಗೊಂಡಂತಾಗಿದೆ. ಅಂತಿಮ ವರದಿ ಸಲ್ಲಿಕೆಯಾದ ಕೂಡಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬ್ಲಾಕ್ ಮೇಲ್ ಪ್ರಕರಣದ ತನಿಖೆಯನ್ನು ಎಸ್ಐಟಿ ಕೈಗೆತ್ತಿಕೊಳ್ಳುವ ಸಾಧ್ತತೆಯಿದೆ.

Recommended Video

Ramesh jaarkiholi ಲೈಂಗಿಕ ಪ್ರಕರಣಕ್ಕೆ ಹೊಸ ಟ್ವಿಸ್ಟ್! | Ramesh Jarkiholi | Oneindia Kannada
ಜಾರಕಿ ಹೋಳಿ ವಿಚಾರಣೆ ಅಪಸ್ವರ

ಜಾರಕಿ ಹೋಳಿ ವಿಚಾರಣೆ ಅಪಸ್ವರ

ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಗಿರುವುದು ಗಂಭೀರ ಸ್ವರೂಪದ ಪ್ರಕರಣ. ಈ ಪ್ರಕರಣದಲ್ಲಿ ಅವರನ್ನು ಬಂಧನಕ್ಕೆ ಒಳಪಡಿಸಿ ಹೇಳಿಕೆ ದಾಖಲಿಸಬೇಕು. ಆನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿತ್ತು. ಆದರೆ, ಅಶ್ಲೀಲ ಸಿಡಿ ಪ್ರಕರಣದಲ್ಲಿ ಜಾರಕಿಹೊಳಿಯನ್ನು ಬಂಧಿಸದೇ ವಿಚಾರಣೆ ನಡೆಸಿ ಬಿಟ್ಟು ಕಳಿಸಲಾಗಿದೆ. ಅವರು ಈಗ ಸತ್ಯ ಒಪ್ಪಿಕೊಳ್ಳಲಿ, ಒಪ್ಪಕೊಳ್ಳದಿದರಲಿ, ಇದು ಅತ್ಯಾಚಾರವೇ ? ಇಲ್ಲವೇ ಹನಿಟ್ರ್ಯಾಪ್ ಎಂಬುದರ ಬಗ್ಗೆ ಪೊಲೀಸರು ತನಿಖೆಯಲ್ಲಿ ಹೇಳಲಿಕ್ಕೆ ಆಗದು. ಅದು ನ್ಯಾಯಾಲಯ ವಿಚಾರಣೆ ಬಳಿಕ ತೀರ್ಮಾನಿಸುತ್ತದೆ. ಜಾರಕಿಹೊಳಿ ಸಿಡಿ ಪ್ರಕರಣ ಖಾಸಗಿ ವಿಚಾರ ಆಧಾರಿತ ಅಪರಾಧ. ಹೀಗಾಗಿ ಅವರನ್ನು ಎಸ್ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿತ್ತು. ರಾಷ್ಟ್ರಪತಿಗಳಗೆ ಮಾತ್ರ ಕಾನೂನಿನಲ್ಲಿ ವಿಶೇಷ ಅವಕಾಶ ನೀಡಲಾಗಿದೆ. ಒಂದು ವೇಳೆ ಈಗಾಗಲೇ ರಮೇಶ್ ಜಾರಕಿಹೊಳಿ ನಿರೀಕ್ಷಣಾ ಜಾಮೀನು ಪಡೆದಿದ್ದಲ್ಲಿ, ಅವರನ್ನು ವಿಚಾರಣೆ ನಡೆಸಿ ಬಿಟ್ಟುಕಳಿಸಿರುವುದರಲ್ಲಿ ಎಸ್ಐಟಿ ಕ್ರಮದಲ್ಲಿ ಯಾವುದೇ ತಪ್ಪಿಲ್ಲ ಎಂದು ಹಿರಿಯ ವಕೀಲ ಬಿ. ಸಿದ್ದೇಶ್ವರ ಕಾನೂನಿನ ಆಗು ಹೋಗುಗಳ ಬಗ್ಗೆ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

English summary
Ramesh Jarkiholi cd case: The sexual harassment case filed against Ramesh jarkiholi has proved to be a Honey trap in SIT investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X