• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂಟಿ ಮಹಿಳೆ ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸಿದ ಚೋಟು ಬಂಧನ

|

ಜೆಸಿನಗರ, ಅ. 28: ಮುಂಜಾನೆ ವಾಯುವಿಹಾರಕ್ಕಾಗಿ ಮನೆಯಿಂದ ಹೊರ ಹೋಗುತ್ತಿದ್ದ ಒಂಟಿ ಮಹಿಳೆಯನ್ನು ಅಟ್ಟಗಟ್ಟಿ ಅಸಭ್ಯವಾಗಿ ವರ್ತಿಸಿ, ಪ್ಯಾಂಟ್ ಬಿಚ್ಚಲು ಯತ್ನಿಸಿದ್ದ ಆರೋಪಿಯನ್ನು ಜೆಸಿ ನಗರ ಪೊಲೀಸರು ಬಂಧಿಸಿದ್ದಾರೆ.

ಜೆಸಿ ನಗರದ ಮೋದಿ ಗಾರ್ಡನ್ ಸಮೀಪ ಇಕ್ಕಟ್ಟಾದ ರಸ್ತೆಯಲ್ಲಿ ಮಹಿಳೆಯೊಬ್ಬರು ಬೆಳಗ್ಗೆ ವಾಕಿಂಗ್ ಹೋಗುವುದನ್ನು ನೋಡಿದ ಆರೋಪಿ 20 ವರ್ಷ ವಯಸ್ಸಿನ ಟಾಟಾ ದತ್ತು ಅಲಿಯಾಸ್ ಚೋಟು ಅವರನ್ನು ಅಟ್ಟಗಟ್ಟಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಪ್ಯಾಂಟ್ ಬಿಚ್ಚಿ ಲೈಂಗಿಕ ಶೋಷಣೆ ಮಾಡಲು ಯತ್ನಿಸಿದ್ದಾನೆ.

ಇದ್ದಕ್ಕಿದ್ದಂತೆ ನಡೆದ ಘಟನೆಯಿಂದ ವಿಚಲಿತರಾದರೂ ಆ ಮಹಿಳೆ ಜೋರಾಗಿ ಕೂಗಾಡಿದ್ದಾರೆ. ಚಪ್ಪಲಿ ತೆಗೆದು ಆರೋಪಿಗೆ ಬಾರಿಸಿದ್ದಾರೆ. ಘಟನಾ ಸ್ಥಳದ ಬಳಿ ಇದ್ದ ಮನೆಗಳಲ್ಲಿ ಲೈಟ್ ಆನ್ ಆಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ.

CCTV footage shows 20 year old man flashing, sexually assaulting woman in Bengaluru

ಜೆಸಿ ನಗರ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ಮಂಗಳವಾರದಂದು ದೂರು ದಾಖಲಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಬಗ್ಗೆ ಮಾಹಿತಿ ಪಡೆಯಲು ಡಿಜೆ ಹಳ್ಳಿ ಠಾಣೆಗೆ ವಾಟ್ಸಾಪ್ ಮಾಡಲಾಗಿದೆ. ಅಲ್ಲಿನ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಯಲ್ಲಿ ಮಾಸ್ಕ್ ಧರಿಸಿದ್ದರೂ ಚೋಟುವನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಸುಲಭವಾಗಿ ಚೋಟು ಟ್ರ್ಯಾಕ್ ಮಾಡಿ ಬಂಧಿಸಲಾಗಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

CCTV footage shows 20 year old man flashing, sexually assaulting woman in Bengaluru
   ನಿಮ್ ಆಟ ನಡಿಯಲ್ಲಾ!! | NO MORE STUNTS!!! | Oneindia Kannada

   ''ಮಂಗಳವಾರ ಬೆಳಗ್ಗೆ 5.05 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಧ್ಯಾಹ್ನ ನಮ್ಮ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ನೀಡಿದ ಒಂದು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಡಿಜೆ ಹಳ್ಳಿ ಗಲಭೆ ವೇಳೆ ಚೋಟು ಕಾಣಿಸಿಕೊಂಡಿದ್ದ ಹಾಗೂ ಹಲವು ರಾಬರಿ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದ. ಆ ಠಾಣೆಯವರು ಸುಲಭವಾಗಿ ಗುರುತಿಸಿ ನಮ್ಮ ತನಿಖಾಧಿಕಾರಿಗಳಿಗೆ ನೆರವಾದರು. ಘಟನಾ ಸ್ಥಳದಿಂದ ತನ್ನ ಮನೆಗೆ ಚೋಟು ಓಡಿ ಹೋಗುವ ದೃಶ್ಯವನ್ನು ವಿವಿಧ ಸಿಸಿಟಿವಿಯಲ್ಲಿ ಗುರುತಿಸಿ ಆತನನ್ನು ಹಿಂಬಾಲಿಸಿ ಬಂಧಿಸಲಾಗಿದೆ. ಬಂಧಿತನ ಮೇಲೆ ಐಪಿಸಿ ಸೆಕ್ಷನ್ 354, 354ಎ ಅನ್ವಯ ದೂರು ದಾಖಲಿಸಲಾಗಿದೆ'' ಎಂದು ಜೆಸಿನಗರ ಠಾಣಾಧಿಕಾರಿ ಹೇಳಿದ್ದಾರೆ.

   English summary
   A CCTV footage shows 20 year old man flashing, sexually assaulting woman near Modi garden,DJ Halli in JC Nagar, Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X