ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಹೊಸ ತಂತ್ರ

|
Google Oneindia Kannada News

ಬೆಂಗಳೂರು, ಫೆಬ್ರವರಿ 26: ಬಿಬಿಎಂಪಿ ಕಚೇರಿ ಸಿಬ್ಬಂದಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಹೊಸ ತಂತ್ರ ಅನುಸರಿಸಲು ತಯಾರಿ ನಡೆದಿದೆ.

ಭ್ರಷ್ಟಾಚಾರ ಸೇರಿದಂತೆ, ತಡವಾಗಿ ಆಗಮಿಸುವುದು, ಕೆಲಸದ ಸಮಯದಲ್ಲಿ ಬೇರೆ ಕಾರ್ಯದಲ್ಲಿ ತೊಡಗಿಕೊಳ್ಳುವುದು ಸೇರಿದಂತೆ ಸಿಬ್ಬಂದಿಯ ಕರ್ತವ್ಯ ವಿಮುಖತೆ ತಡೆಯಲು ಬಿಬಿಎಂಪಿಯ ಎಲ್ಲಾ ಕಚೇರಿಗಳಿಗೆ ಸಿಸಿಟಿವಿ ಕ್ಯಾಮೆರಾ ಹಾಕಲು ಯೋಜನೆ ಸಿದ್ಧವಾಗಿದೆ.

ಬಿಬಿಎಂಪಿ ಆಯುಕ್ತರು ಈ ನಿರ್ಣಯವನ್ನು ತೆಗೆದುಕೊಂಡಿದ್ದು, ಬಿಬಿಎಂಪಿ ಕಾರ್ಯದಲ್ಲಿ ಪಾರದರ್ಶಕತೆ ತರಲು ಸಹ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸಹಕಾರಿಯಾಗಲಿದೆ.

CCTV Cameras Will Be Installed To All BBMP Office

ಬಿಬಿಎಂಪಿ ಕಚೇರಿಗಳ ಹೊರಗೆ ಮತ್ತು ಒಳಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಸಿಸಿಟಿವಿ ವಿಡಿಯೋ ದಾಖಲಿಸಿಡುವಂತೆ ಆಯುಕ್ತ ಅನಿಲ್‌ ಕುಮಾರ್ ಸೂಚಿಸಿದ್ದಾರೆ.

ವಾರಕ್ಕೊಮ್ಮೆ ವಿಡಿಯೋ ಪರಿಶೀಲಿಸಿ ವರದಿ ನೀಡಬೇಕೆಂದು ಸಹ ಅವರು ಸೂಚಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ನಂತರ ಕೆಲವು ಬದಲಾವಣೆಗಳನ್ನು ಸೂಚಿಸಿದ್ದು ಸಂಜೆ 7 ಗಂಟೆ ನಂತರ ಯಾರಿಗೂ ಪಾಲಿಕೆ ಆವರಣದಲ್ಲಿ ಇರಲು ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.

English summary
CCTV cameras will be installed to all BBMP offices soon to curb corruption. BBMP commissioner Anil Kumar took the decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X