ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಷಾರ್, ನೈಸ್ ರಸ್ತೆಯಲ್ಲಿ ಕ್ಯಾಮರಾ ಹದ್ದಿನಗಣ್ಣು

By Rajendra
|
Google Oneindia Kannada News

ಬೆಂಗಳೂರು, ಅ.19: ಬೆಂಗಳೂರು ನಗರ ಎಂದರೆ ಮೊದಲಿಗೆ ನೆನಪಾಗುವುದು ವಾಹನಗಳ ದಟ್ಟ ಸಂಚಾರ. ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಚಲಾಯಿಸುವ ವಾಹನ ಸವಾರರು. ಇದೀಗ ವಾಹನ ಸವಾರರು ತಮ್ಮ ವಾಹನಗಳನ್ನು ಮನಬಂದಂತೆ ಚಾಲನೆ ಮಾಡುವಂತಿಲ್ಲ. ಅದರಲ್ಲೂ ಸಿಗ್ನಲ್ ಗಳಲ್ಲಂತೂ ಸಂಚಾರ ನಿಯಮ ಉಲ್ಲಂಘಿಸುವಂತಿಲ್ಲ.

ಒಂದು ವೇಳೆ ಹಾಗೇನಾದರೂ ಸಂಚಾರಿ ನಿಯಮ ಬದಿಗೊತ್ತಿ ತಮ್ಮ ವಾಹನಗಳನ್ನು ಚಾಲನೆ ಮಾಡಿದರೆ ದಂಡ ತೆರಲೇಬೇಕು. ಇಷ್ಟಕ್ಕೂ ಈ ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ಪತ್ತೆಹಚ್ಚುವುದು ಸಂಚಾರಿ ಪೋಲೀಸರಲ್ಲ, ಕ್ಯಾಮೆರಾ ಕಣ್ಣುಗಳು. ಈಗಂತೂ ಬೃಹತ್ ವೃತ್ತಗಳಲ್ಲಿರುವ ಪ್ರಮುಖ ಸಿಗ್ನಲ್ ಗಳಲ್ಲಿ ದಿನದ 24 ಗಂಟೆಯೂ ಕ್ಯಾಮೆರಾ ಕಣ್ಣುಗಳು ತೆರೆದುಕೊಂಡೇ ಇರುತ್ತವೆ. ಹಾಗಾಗಿ ಸಂಚಾರಿ ನಿಯಮದಲ್ಲಿ ಒಂದಿಷ್ಟರಮಟ್ಟಿಗೆ ಮಾತ್ರ ಬದಲಾವಣೆ.

ಈಗ ಇಂಥದ್ದೇ ಕ್ಯಾಮೆರಾ ಕಣ್ಣುಗಳು "ನೈಸ್" ರಸ್ತೆಯಲ್ಲೂ ಕಾವಲು ಕಾಯುತ್ತಿವೆ. ಅದೇನೇ ವಿರೋಧವಿದ್ದರೂ "ನೈಸ್" ಆಗಿಯೇ ತನ್ನ ಸೇವೆಯಲ್ಲಿ ತೊಡಗಿರುವ ನೈಸ್ ರಸ್ತೆ ಟೋಲ್ ಗಳಲ್ಲಿ ಹೊಸದಾಗಿ ವೀಡಿಯೋ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಪ್ರತಿಯೊಂದು ಕ್ಯಾಮೆರಾಗಳು ಹದ್ದಿನ ಕಣ್ಣಿಟ್ಟಿವೆ.

ಇತ್ತೀಚೆಗಿನ ದಿನಗಳಲ್ಲಿ ಈ ರಸ್ತೆಗಳಲ್ಲಿ ರಾತ್ರಿವೇಳೆ ಹಲವು ದುಷ್ಕೃತ್ಯಗಳು ನಡೆಯುತ್ತಿದ್ದರಿಂದ ಇದೀಗ ಕ್ಯಾಮೆರಾಗಳು ಅಂತಹವರ ಮೇಲೆ ದೃಷ್ಟಿ ಬೀರಿವೆ. ಪ್ರತಿಯೊಂದು ಟೋಲ್ ಗಳಲ್ಲಿ ಸುಮಾರು 15 ರಿಂದ 20 ವೀಡಿಯೋ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

CCTV cameras at NICE road

ಇದರಿಂದ ಟೋಲ್ ವಸೂಲಿಗೂ ಅನುಕೂಲವಾಗಿದೆ. ಜೊತೆಗೆ ದುಷ್ಕರ್ಮಿಗಳನ್ನು ಸೆರೆ ಹಿಡಿಯಲು ಕೂಡಾ. ಸಿಟಿ ಸಿಗ್ನಲ್ ಗಳಲ್ಲಿ ಮಾತ್ರ ಅಳವಡಿಕೆಯಾಗಿದ್ದ ಕ್ಯಾಮೆರಾಗಳು ಇದೀಗ ನೈಸ್ ರಸ್ತೆಗೂ ಬಂದಿರುವುದು ವಿಶೇಷ. (ಒನ್ಇಂಡಿಯಾ ಕನ್ನಡ)
English summary
Around 15 to 20 CCTV cameras are installed at the toll gates on the Mysore-Bangalore NICE road to manage traffic, surveillance and safety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X