ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚರಾಜ್ಯ ಬಾರ್‌ಗರ್ಲ್ಸ್ ಡ್ಯಾನ್ಸ: 9 ಜನರ ಬಂಧನ

|
Google Oneindia Kannada News

ಬೆಂಗಳೂರು, ಮಾ. 10: ಅಲ್ಲಿ ಎಂಟು ಗಂಟೆಯಾದರೆ ಸಾಕು ತುಂಡು ಉಡುಗೆ ತೊಟ್ಟ ಮಾನನಿಯರು ಕುಣಿದು ಕುಪ್ಪಳಿಸುತ್ತಿದ್ದರು..! ಮದ್ಯದ ನಶೆಯಲ್ಲಿ ತೇಲಾಡಿ ಹುಡುಗಿಯರ ಮೇಲೆ ಐದು ನೂರು ನೋಟುಗಳನ್ನು ಎಸೆಯುತ್ತಿದ್ದರು. ಪ್ರತಿ ನಿತ್ಯವೂ ಅಲ್ಲಿ ಮದ್ಯದ ಸಮಾರಾಧನೆ, ಮಾನಿನಿಯರ ಪ್ರಚೋದಕ ನೃತ್ಯ ನಡೆಯುತ್ತಿತ್ತು!

ಬುಧವಾರ ರಾತ್ರಿ ಎಂಟು ಗಂಟೆ ಆಗಿತ್ತು. ಪಂಜಾಬಿನ ಅರಗಿಣಿಯರು ನೃತ್ಯ ಮಾಡುತ್ತಿದ್ದರು. ಪಶ್ಚಿಮ ಬಂಗಾಳದ ಮಾಡಲ್‌ಗಳು ಕುಣಿದು ಕುಪ್ಪಳಿಸುತ್ತಿದ್ದರು. ತುಂಡುಗೆ ತೊಟ್ಟ ಕರ್ನಾಟಕ ದೆಹಲಿಯ ಹುಡುಗಿಯರ ನೃತ್ಯ ನಶೆಗೆ ಮತ್ತಷ್ಟು ಅಮಲೇರಿಸಿತ್ತು. ಡಿ.ಜೆ ಸಾಂಗ್ ಗಳಿಗೆ ಕುಣಿದು ಕುಪ್ಪಳಿಸುತ್ತಿದ್ದರು. ಮತ್ತಿನ ನಶೆ ಹಾಗೂ ಮಾನನಿಯರ ನೃತ್ಯದಲ್ಲಿ ತೇಲಾಡುತ್ತಿದ್ದವರಿಗೆ ಕೆಲವೇ ಕ್ಷಣಗಳಲ್ಲಿ ಮತ್ತು ಇಳಿದು ಹೋಗಿತ್ತು! ನೃತ್ಯ ಮಾಡಿ ಬಂದಿದ್ದ ಬೆವರು ಕೆಲವೇ ಕ್ಷಣಗಲ್ಲಿ ಹಾರಿ ಹೋಗಿತ್ತು! ಕಿರುಚಾಟ, ಓಡಿ ಹೋಗಿ ತಪ್ಪಿಸಿಕೊಳ್ಳುವ ದಾವಂತ. ಅಷ್ಟರಲ್ಲಿ ಇಡೀ ನಶೆ ಲೋಕದ ಸೆಂಟರ್ ಆಕ್ ಆಗಿಬಿಟ್ಟಿತು.

ಈ ಘಟನೆ ನಡೆದಿದ್ದು ಗಾಂಧಿನಗರದಲ್ಲಿ. ಬುಧವಾರ ರಾತ್ರಿ ಬೆಂಗಳೂರಿನ ಗಾಂಧಿನಗರದ ಐದನೇ ಮೈನ್ ನಲ್ಲಿರುವ ಮೂಡ್ ಬಾರ್‌ನಲ್ಲಿ ಮುಂಬಯಿನ ಎಂಟು ಬಾರ್ ಗರ್ಲ್, ದೆಹಲಿಯ ಆರು ಮಾಡಲ್‌ಗಳು ಪಂಜಾಬ್ - ರಾಜಸ್ತಾನದಿಂದ 21 ಹುಡುಗಿಯರು, ಉತ್ತರಾಖಂಡದ ಇಬ್ಬರು, ಉತ್ತರ ಪ್ರದೇಶದ ಐವರು, ಕರ್ನಾಟಕದ 17 ಬಾರ್ ಗರ್ಲ್‌ಗಳು ಅರೆನಗ್ನ ಉಡುಪು ಧರಿಸಿ ಕುಣಿಯುತ್ತಿದ್ದರು. ಮತ್ತಿನ ನಶೆಯಲ್ಲಿ ಈ ಬಾರ್‌ ಗರ್ಲ್ ನೃತ್ಯದಿಂದ ಮತ್ತಷ್ಟು ಮತ್ತು ಮೈಗೇರಿಸಿಕೊಂಡು ಕುಣಿದಾಡುತ್ತಿದ್ದರು. ಮಾನಿನಿಯರ ಮೇಲೆ ಐದು ನೂರು ನೋಟುಗಳನ್ನು ಹೊಡೆದು ಸ್ವರ್ಗ ಲೋಕದ ಸುಖ ಅನುಭವಿಸುತ್ತಿದ್ದರು. ಅಕ್ರಮವಾಗಿ ಹೆಣ್ಣು ಮಕ್ಕಳಿಂದ ಪ್ರಚೋದನಾತ್ಮಕ ನೃತ್ಯ ಮಾಡಿಸುತ್ತಿದ್ದ ಮೂಡ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ನಶೆಯಲ್ಲಿ ಮುಳುಗಿದ್ದ 74 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಹೊರ ರಾಜ್ಯಗಳಿಂದ ಕರೆ ತಂದಿದ್ದ ಬಾರ್ ಗರ್ಲ್ಗಳನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿ ಮಹಿಳಾ ಪರಿಹಾರ ಕೇಂದ್ರಕ್ಕೆ ರವಾನಿಸಿದ್ದಾರೆ.

Bengaluru: CCB Sleuths Raid Dance Bar In Gandhinagar; 59 Women Rescued, 9 Held

ಮನರಂಜನೆ ನಡಸುವ ಸ್ಥಳ ಸಂಬಂಧ ರಾಜ್ಯ ಸರ್ಕಾರ ನಡೆಸುವ ಸಂಬಂಧ ಸರ್ಕಾರ ಹೊರಡಿಸಿರುವ ನಿಯಮಗಳನ್ನು ಉಲ್ಲಂಘಿಸಿ ಮೂಡ್ ಬಾರ್‌ನಲ್ಲಿ ಅಶ್ಲೀಲ ನೃತ್ಯಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈ ಸಂಬಂಧ ಬಾರ್ ಮಾಲೀಕರು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ. ಮೂವರು ಕೆಲಸಗಾರರನ್ನು ಬಂಧಿಸಿ 1.32 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಎಣ್ಣೆ ಹೊಡೆದು ನೃತ್ಯ ಮಾಡುತ್ತಿದ್ದ 74 ಗಿರಾಕಿಗಳಿಗೆ ಬುದ್ಧಿವಾದ ಹೇಳಿ ಬಿಟ್ಟು ಕಳಿಸಲಾಗಿದೆ. ಮೂಡ್ ಬಾರ್ ಅಂಡ್ ರೆಸ್ಟೋರೆಂಟ್‌ನ ಅಕ್ರಮ ಚಟುವಟಿಕೆ ವಿರುದ್ಧ ಸಿಸಿಬಿ ಪೊಲೀಸರು ಉಪ್ಪಾರಪೇಟೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಲ್ಲದೇ ಮೂಡ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ನೀಡಿದ್ದ ಪರವಾನಗಿಯನ್ನು ರದ್ದು ಮಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಕೇವಲ ಮೂಡ್ ಬಾರ್ ಅಂಡ್ ರೆಸ್ಟೊರೆಂಟ್ ಅಶ್ಲೀಲ ನೃತ್ಯ ನಡೆಸುತ್ತಿಲ್ಲ. ಇಂತಹ ಅನೇಕ ಡಾನ್ಸ್ ಬಾರ್‌ಗಳು ಅಕ್ರಮವಾಗಿ ಬೆಂಗಳೂರಿನಲ್ಲಿ ತಲೆಯೆತ್ತಿವೆ. ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಡಾನ್ಸ್ ಬಾರ್ ನಡೆಸುವ ಗುತ್ತಿಗೆಯನ್ನು ಕೆಲವರಿಗೆ ನೀಡಿರುತ್ತಾರೆ. ದಿನಕ್ಕೆ ಇಂತಿಷ್ಟು ಪಾವತಿ ಮಾಡಿ ಈ ಡಾನ್ಸ್ ಬರ್ ನಡೆಸುವ ಹೊಸ ವಹಿವಾಟಿನ ವರ್ಗ ಹುಟ್ಟುಕೊಂಡಿದೆ. ಇವರು ದೆಹಲಿ, ಪಂಚಾಬ್, ಸೇರಿದಂತೆ ಉತ್ತರ ಭಾರತದಿಂದ ಹೆಣ್ಣು ಮಕ್ಕಳನ್ನು ಕರೆತಂದು ನೃತ್ಯ ಮಾಡಿಸಿ ನಶೆಯಲ್ಲಿ ತೇಲಾಡಿಸುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Bengaluru: CCB Sleuths Raid Dance Bar In Gandhinagar; 59 Women Rescued, 9 Held

Recommended Video

Rohit Sharma ಬಗ್ಗೆ Ashwin ಹೇಳಿದ್ದೇನು? | Oneindia Kannada

ಕೆಲವಡೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ ಏನೂ ಕ್ರಮ ಜರುಗಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅದರಲ್ಲೂ ಕರೊನಾ ಲಾಕ್ ಡೌನ್ ನಿಯಮ ಸಂಪೂರ್ಣ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಇಂದಿರಾನಗರ, ಕೋರಮಂಗಲ, ಎಚ್‌ಎಸ್ಆರ್ ಬಡಾವಣೆ, ಕಮ್ಮನಹಳ್ಳಿ, ಗಾಂಧಿನಗರ ಎಂ.ಜಿ. ರಸ್ತೆಯಲ್ಲಿ ಈ ಅಕ್ರಮ ಡಾನ್ಸ್ ಬಾರ್ ಗಳು ತಲೆಯೆತ್ತಿವೆ. ಪ್ರತಿ ನಿತ್ಯ ಮತ್ತಿನ ಹಾಗೂ ಮಾನಿನಿಯರ ಪ್ರಚೋದನಾತ್ಮಕ ನಶೆ ಉಣಬಿಡಿಸಿ ಹಣ ಗಳಿಸುತ್ತಿದ್ದಾರೆ.

English summary
Bengaluru: CCB Sleuths Raid Dance Bar In Gandhinagar 5th main road; 59 Women Rescued, 74 customers detained and enquired. 9 including bar owner arrested seized Rs 1.32 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X