ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಳಯಾಂತಕ ಶ್ರೀಕಿಯ ಬಿಟ್‌ ಕಾಯಿನ್ ಸಂಪತ್ತು ಬಯಲಿಗೆ !

|
Google Oneindia Kannada News

ಬೆಂಗಳೂರು, ಜನವರಿ 15: ಹ್ಯಾಕರ್ ಶ್ರೀಕಿ ಪ್ರಳಯಾಂತಕ ಎಂಬುದು ಮತ್ತೆ ಸಾಬೀತಾಗಿದೆ. ಬಿಟ್ ಕಾಯಿನ್ ವೆಬ್ ತಾಣಗಳನ್ನು ಹ್ಯಾಕಿಂಗ್ ಮಾಡಿ ಕೂಡಿಟ್ಟಿದ್ದ 9 ಕೋಟಿ ಮೌಲ್ಯದ ಬಿಟ್ ಕಾಯಿನ್ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂರು ಬಿಟ್ ಕಾಯಿನ್ ಎಕ್ಸ್ ಚೇಂಜಸ್, ಹತ್ತು ಪೋಕರ್ ವೆಬ್ ಸೈಟ್‌, ಮೂರು ಮಾಲ್ವೇರ್ ವೆಬ್ ತಾಣಗಳನ್ನು ಹ್ಯಾಕ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಡ್ರಗ್ ಜಾಲ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಶ್ರೀಕಿಯನ್ನು ಸಿಸಿಬಿ ಪೊಲೀಸರು ನಿರಂತರ ವಿಚಾರಣೆ ಮುಂದುವರೆಸಿದ್ದರು. ವಿದೇಶದಲ್ಲಿ ಓದಿದ್ದ ಶ್ರೀಕಿ ಮೊಬೈಲ್ ಕೂಡ ಬಳಕೆ ಮಾಡುತ್ತಿರಲಿಲ್ಲ. ಜಯನಗರದಲ್ಲಿ ನೆಲೆಸಿದ್ದ ಶ್ರೀಕಿ ಹ್ಯಾಕಿಂಗ್ ನಲ್ಲಿ ರಷ್ಯಾದ ಹ್ಯಾಕರ್ ಗಳ ಮಟ್ಟಕ್ಕೆ ನಿಲ್ಲುವವ. ಸುನೀಷ್ ಹೆಗ್ಡೆ, ಪ್ರಸಿದ್ ಶೆಟ್ಟಿ, ಸುಜಯ್ ಮತ್ತು ಹೇಮಂತ್ ಮುದ್ಧಪ್ಪ ಇತರರ ಪರಿಚಯ ಸಿಕ್ಕಿದ್ದ ಶ್ರೀಕಿ ಅಂತಾರಾಷ್ಟ್ರೀಯ ಮಟ್ಟದ ವೆಬ್ ತಾಣಗಳನ್ನು ಹ್ಯಾಕಿಂಗ್ ಮಾಡಿ ಅಕ್ರಮ ಲಾಭ ಪಡೆದುಕೊಂಡಿದ್ದ.

ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್, ವೈಎಫ್ ಐ, ಇಥೆರಿಯಂ ಕರೆಸ್ಸಿ ಎಕ್ಸ್‌ ಚೇಂಜ್ ವೆಬ್ ತಾಣಗಳನ್ನು ಹ್ಯಾಕಿಂಗ್ ಮಾಡಿ 9 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆಸಿ ಹೊಂದಿದ್ದ. ಇದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

CCB Seized Rs 9 crore worth Bitcoin from Hacker Sriki

ಕಳೆದ 2019 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಇ ಪ್ರೊಕ್ಯೂಟ್ ಮೆಂಟ್ ಸೈಟ್ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಹಣವನ್ನು ತನ್ನ ಸಹಚರರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದ. ಐಶರಾಮಿ ಹೋಟೆಲ್ ಗಳಲ್ಲಿ ತಂಗುತ್ತಿದ್ದ ಈತ ವೆಬ್ ತಾಣಗಳನ್ನು ಹ್ಯಾಕ್ ಮಾಡುತ್ತಿದ್ದ. ಬಿಟ್ ಕಾಯಿನ್ ಎಕ್ಸ್ ಚೇಂಜ್ ನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ಕಳುವು ಮಾಡುತ್ತಿದ್ದ. ಬಿಟ್ ಕಾಯಿನ್ ನನ್ನು ತನ್ನ ಸಹಚರರ ಖಾತೆಗೆ ವರ್ಗಾವಣೆ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದ. ಶ್ರೀಕಿ ಡ್ರಗ್ ಜಾಲದ ಪೊರಕಿಗಳ ಜತೆ ಸೇರಿ ಮಾದಕ ಲೋಕಕ್ಕೂ ಎಂಟ್ರಿಯಾಗಿದ್ದ.

ಶ್ರೀಕಿ ಅಲಿಯಾಸ್ ಶ್ರೀಕೃಷ್ಣ , ನಲಪಾಡ್ ಜತೆ ಸೇರಿ ವಿದ್ವತ್ ಮೇಲೆ ಕೂಡ ಹಲ್ಲೆ ಮಾಡಿದ್ದ. ಆದರೆ, ಅಂದಿನಿಂದ ಪೊಲೀಸರ ಕೈಗೆ ಸಿಗದೇ ಮೊಬೈಲ್ ಬಳಸದೇ ಹೋಟೆಲ್ ಗಳಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ.

ಪೊಲೀಸರೇ ಶಾಕ್: ಇನ್ನು ಶ್ರೀಕಿಯ ಹ್ಯಾಂಕಿಂಗ್ ಜ್ಞಾನ ನೋಡಿ ಸಿಸಿಬಿ ಪೊಲೀಸರೇ ದಂಗಾಗಿದ್ದಾರೆ. ಶ್ರೀಕಿ ತನ್ನ ವಿದ್ಯೆಯನ್ನು ಸಮಾಜದ ಒಳಿತಿಗಾಗಿ ಬಳಿಸಿದ್ದರೆ ಇಡೀ ದೇಶಕ್ಕೆ ಅನುಕೂಲಕರ ಕೆಲಸ ಮಾಡಬಹುದು. ಆದರೆ, ಡ್ರಗ್ ಜಾಲದ ಕ್ರಿಮಿಗಳ ಜತೆ ಸೇರಿ ಅಪರಾಧ ಕೃತ್ಯ ಎಸಗಿ ಸಿಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಆಂಧ್ರ ಪ್ರದೇಶದ ಕೋಟ್ಯಂತರ ರೂಪಾಯಿ ಟೆಂಡರ್ ಗುತ್ತಿಗೆ ಎಂಎಡಿ ಮೊತ್ತವನ್ನೇ ಶ್ರೀಕಿ ಎಗರಿಸಿದ್ದಾನೆ ಎಂಬ ಮಾತು ಕೇಳಿ ಬರುತ್ತಿದೆ. ಈ ಕುರಿತು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
CCB police have seized rs 9 cr worth Bitcoin from Hacker Srikrishna Alis Sriki. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X