ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಸಿಬಿ ತನಿಖೆಯಲ್ಲಿ ಹೊರಬಿದ್ದ ಬಿಜೆಪಿ ನಾಯಕನ ಹನಿಟ್ರ್ಯಾಪ್ ಕಥೆ!

|
Google Oneindia Kannada News

ಬೆಂಗಳೂರು, ನವೆಂಬರ್ 28 : ಕರ್ನಾಟಕ ಬಿಜೆಪಿ ನಾಯಕ, ಮಾಜಿ ಸಚಿವರೊಬ್ಬರ ಖಾಸಗಿ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ. ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಹನಿಟ್ರ್ಯಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪಿ ರಾಘವೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮಾಜಿ ಸಚಿವರ ವಿಡಿಯೋ ಇಟ್ಟುಕೊಂಡು ಆರೋಪಿ ರಾಘವೇಂದ್ರ ಒಂದು ವರ್ಷದಿಂದ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಆರೋಪಿಗಳಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ. ಪ್ರಮುಖ ಆರೋಪಿ ರಾಘವೇಂದ್ರ ಇಡೀ ಪ್ರಕರಣದ ಮಾಸ್ಟರ್ ಮೈಂಡ್.

ಕರ್ನಾಟಕ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ವೈರಲ್ಕರ್ನಾಟಕ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ವೈರಲ್

ಬಿಜೆಪಿ ನಾಯಕನಿಗೆ ಮೊದಲು ವಿಡಿಯೋ ಕಳಿಸಿದ್ದ ರಾಘವೇಂದ್ರ 50 ಕೋಟಿಗೆ ಬೇಡಿಕೆ ಇಟ್ಟಿದ್ದ. ಶಾಸಕರು ಅಷ್ಟು ಹಣ ಕೊಡುವುದಿಲ್ಲ ಎಂಬುದು ತಿಳಿದ ಬಳಿಕ ಹನಿಟ್ಯ್ರಾಪ್‌ನಲ್ಲಿ ಪಾಲ್ಗೊಂಡಿದ್ದ ಯುವತಿ ಶಾಸಕರ ಬಳಿ 10 ಕೋಟಿಗೆ ಬೇಡಿಕೆ ಇಟ್ಟಿದ್ದಳು.

ವಿಡಿಯೋ: ಚುನಾವಣಾ ಅಭ್ಯರ್ಥಿಗೆ ಒದ್ದ ವಿಪಕ್ಷದ ಕಾರ್ಯಕರ್ತರುವಿಡಿಯೋ: ಚುನಾವಣಾ ಅಭ್ಯರ್ಥಿಗೆ ಒದ್ದ ವಿಪಕ್ಷದ ಕಾರ್ಯಕರ್ತರು

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹನಿಟ್ರ್ಯಾಪ್ ವಿಡಿಯೋ, ಬ್ಲ್ಯಾಕ್ ಮೇಲ್ ವಿಚಾರ ಗೃಹ ಸಚಿವರ ತನಕ ತಲುಪಿತ್ತು. ತನಿಖೆ ನಡೆಸಲು ಅವರು ಸೂಚನೆ ಕೊಟ್ಟಿದ್ದರು. ಸಿಸಿಬಿ ಅಪರಾಧ ವಿಭಾಗದ ಡಿಸಿಪಿ ಕೆ. ಪಿ. ರವಿಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೊಂಡು ಆರೋಪಿ ಬಂಧಿಸಲಾಗಿದೆ.

ಅಪೆಕ್ಸ್ ಬ್ಯಾಂಕ್ 2 ಸಾವಿರ ಕೋಟಿ ಹಗರಣ; ತನಿಖೆ ಆರಂಭ?ಅಪೆಕ್ಸ್ ಬ್ಯಾಂಕ್ 2 ಸಾವಿರ ಕೋಟಿ ಹಗರಣ; ತನಿಖೆ ಆರಂಭ?

ಶಿವಮೊಗ್ಗ ಮೂಲದ ಆರೋಪಿ

ಶಿವಮೊಗ್ಗ ಮೂಲದ ಆರೋಪಿ

ಆರೋಪಿ ರಾಘವೇಂದ್ರ ಶಿವಮೊಗ್ಗ ಮೂಲದವನು. ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಯಿಯ ಜೊತೆ ವಾಸವಾಗಿದ್ದ. ಸೈಬರ್ ಕ್ರೈಂ ಬಗ್ಗೆ ಆರೋಪಿಗೆ ಹೆಚ್ಚು ಆಸಕ್ತಿ. ಹನಿಟ್ರ್ಯಾಪ್ ವಿಡಿಯೋ ಮಾಡಿ ರಾಜಕಾರಣಿಗಳು, ಉದ್ಯಮಿಗಳಿಂದ ಹಣ ಸುಲಿಗೆ ಮಾಡುವ ಸಂಚಿನ ಮಾಸ್ಟರ್ ಮೈಂಡ್. ಹನಿಟ್ರ್ಯಾಪ್ ವಿಡಿಯೋದಲ್ಲಿರುವುದು ಇತನ ಗೆಳತಿ.

ಕೆಲಸ ಹುಡುಕುತ್ತಿದ್ದ

ಕೆಲಸ ಹುಡುಕುತ್ತಿದ್ದ

ರಾಘವೇಂದ್ರ ಮೊಬೈಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲವು ದಿನಗಳ ಹಿಂದೆ ಕೆಲಸ ಬಿಟ್ಟು ಬೇರೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ರಾಘವೇಂದ್ರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೆಮೋರಿ ಕಾರ್ಡ್, ಪೆನ್ ಡ್ರೈವ್ ವಶಕ್ಕೆ ಪಡೆದುಕೊಂಡು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಾಮಾಜಿಕ ತಾಲತಾಣದಲ್ಲಿ ವೈರಲ್ ಅಗಿರುವ ವಿಡಿಯೋ 2017ರಲ್ಲಿ ಚಿತ್ರೀಕರಣ ಮಾಡಿದ್ದಾಗಿದೆ. ರಾಘವೇಂದ್ರ ಮನೆಯಲ್ಲಿ ಹಣವೂ ಪೊಲೀಸರಿಗೆ ಸಿಕ್ಕಿದೆ.

10ಕ್ಕೂ ಹೆಚ್ಚು ವಿಡಿಯೋಗಳಿವೆ

10ಕ್ಕೂ ಹೆಚ್ಚು ವಿಡಿಯೋಗಳಿವೆ

ರಾಘವೇಂದ್ರ ತನ್ನ ಸ್ನೇಹಿತ ಮಂಜುನಾಥ್, ಆತನ ಗೆಳತಿಯ ಜೊತೆ ಸೇರಿಕೊಂಡು ಹನಿಟ್ರ್ಯಾಪ್ ವಿಡಿಯೋ ಸಂಚನ್ನು ರೂಪಿಸಿದ್ದರು. ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ 10ಕ್ಕೂ ಹೆಚ್ಚು ವಿಡಿಯೋಗಳಿದ್ದು ಮೈಸೂರಿನ ಉದ್ಯಮಿಯೊಬ್ಬರಿಗೆ ವಿಡಿಯೋ ತೋರಿಸಿ ಹಣವನ್ನು ಸಹ ಪಡೆದಿದ್ದರು ಎಂಬ ಮಾಹಿತಿ ಸಿಕ್ಕಿದೆ. ಸಿಸಿಬಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಹಲವು ಪ್ರಕರಣಗಳು

ಹಲವು ಪ್ರಕರಣಗಳು

ಆರೋಪಿ ರಾಘವೇಂದ್ರ ವಿರುದ್ಧ ಬೆಂಗಳೂರು, ಮೈಸೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳು ದಾಖಲಾಗಿವೆ. ಇವರ ಹನಿಟ್ರ್ಯಾಪ್ ವಿಡಿಯೋ ಸಂಚಿನ ಗ್ಯಾಂಗ್‌ನಲ್ಲಿ ಇನ್ನೂ ಮೂವರು ಇದ್ದು ಅವರು ನಾಪತ್ತೆಯಾಗಿದ್ದಾರೆ. ಸಿಸಿಬಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

English summary
Central Crime Branch (CCB) police probing the viral video case of Karnataka BJP leader and former minister. Police arrested main accused Ragavendra and searching for other 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X