ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿ ಸೇರಿ ಹಲವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಬಹುಕೋಟಿ ವಂಚನೆಯ ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಫರೀದ್ ಎಂಬಾತ ಆಂಬಿಡೆಂಟ್ ಸಂಸ್ಥೆ ಸ್ಥಾಪಿಸಿ ಅಧಿಕ ಬಡ್ಡಿ ನೀಡುವುದಾಗಿ ನಂಬಿಸಿ ನೂರಾರು ಜನರಿಂದ 600 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದ. ಈ ಪ್ರಕರಣವನ್ನು ಸಿಸಿಬಿ ತನಿಖೆ ನಡೆಸುತ್ತಿತ್ತು.

ನನ್ನ 'ಪಾರಿಜಾತ' ಜಪ್ತಿಯಾಗಿಲ್ಲ, ಮನೆ ಮಾರಾಟಕ್ಕಿಲ್ಲ : ಗಾಲಿ ರೆಡ್ಡಿ ನನ್ನ 'ಪಾರಿಜಾತ' ಜಪ್ತಿಯಾಗಿಲ್ಲ, ಮನೆ ಮಾರಾಟಕ್ಕಿಲ್ಲ : ಗಾಲಿ ರೆಡ್ಡಿ

ಈ ಪ್ರಕರಣದಲ್ಲಿ ಫರೀದ್‌ನನ್ನು ಇಡಿ ಅಧಿಕಾರಿಗಳ ತನಿಖೆಯಿಂದ ಬಚಾವ್ ಮಾಡುತ್ತೇನೆ ಎಂದು ಫರೀದ್‌ನಿಂದ 20 ಕೋಟಿ ಹಣ ಪಡೆದಿದ್ದರು ಎನ್ನಲಾಗಿತ್ತು. ಸಿಸಿಬಿಯು ಜನಾರ್ದನ ರೆಡ್ಡಿ ಅವರನ್ನು ವಿಚಾರಣೆ ಕೂಡ ನಡೆಸಿತ್ತು. ಆಗ ಈ ಪ್ರಕರಣವು ರಾಜಕೀಯ ವಲಯದಲ್ಲಿಯೂ ಬಹು ಚರ್ಚೆಗೆ ಸಿಲುಕಿತ್ತು.

CCB police submit charge sheet of Ambident case

ಅಕ್ರಮ ಗಣಿಗಾರಿಕೆ : ಜನಾರ್ದನ ರೆಡ್ಡಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್ ಅಕ್ರಮ ಗಣಿಗಾರಿಕೆ : ಜನಾರ್ದನ ರೆಡ್ಡಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್

ಇದೀಗ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು 4000 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಡೀಲ್‌ಬಗ್ಗೆ ಜನಾರ್ದನ ರೆಡ್ಡಿ, ಫರೀದ್ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದ್ದ ತಾಜ್ ವೆಸ್ಟೆಂಡ್ ಹೋಟೆಲ್ ನ ನೌಕರರು, ಜನಾರ್ದನ ರೆಡ್ಡಿ ಮನೆಗೆಲದವರು, ಇನ್ನೂ ಹಲವರನ್ನು ತನಿಖೆಗೊಳಪಡಿಸಿ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ.

English summary
CCB police submit 4000 pages charge sheet of Ambident case to the court. charge sheet includes report of Janardhan Reddy interrogation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X