ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

90 ಲಕ್ಷ ಡ್ರಗ್ಸ್ ವಶ, 10 ಪೆಡ್ಲರ್ಸ್ ಬಂಧಿಸಿದ ಸಿಸಿಬಿ ಬೆಂಗಳೂರು

|
Google Oneindia Kannada News

ಬೆಂಗಳೂರು, ನ.2: ವಿದೇಶಗಳಿಂದ Dark Net ಮುಖಾಂತರ ಮಾದಕ ವಸ್ತುಗಳನ್ನು ಅಕ್ರಮವಾಗಿ ಸರಬರಾಜು ಮಾಡಿಕೊಂಡು ನಗರದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಒಬ್ಬ ನೈಜೀರಿಯಾ ಪ್ರಜೆ ಸೇರಿ 10 ಜನ ಕುಖ್ಯಾತ ಡ್ರಗ್ ಪೆಡ್ಲರ್ಸ್ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. 8 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 90 ಲಕ್ಷ ಮೌಲ್ಯದ ಡ್ರಗ್ಸ್ ವಶ ಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು,

ಈ ಆರೋಪಿಗಳ ವಿರುದ್ದ ಮೇಲ್ಕಂಡ 8 ಪೊಲೀಸ್ ಠಾಣೆಗಳಲ್ಲಿ ಎನ್‍ಡಿಪಿಎಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಆರೋಪಿಗಳ ವಿಚಾರಣೆಯಿಂದ ಆರೋಪಿಗಳು ಟಾರ್ ಬ್ರೌಸರ್ ಸರ್ಚ್ ಎಂಜಿನ್ ಉಪಯೋಗಿಸಿ, ಡಾರ್ಕ್ ವೆಬ್ ಮುಖಾಂತರ ಎಂಪೈರ್ ಮಾರ್ಕೆಟ್ ಸೈಟ್‍ಗಳಿಂದ ವಿವಿಧ ರೀತಿಯ ಮಾದಕ ವಸ್ತುಗಳನ್ನು ಬುಕ್ ಮಾಡಿ, ಗಿಪ್ಟ್ ರೂಪದಲ್ಲಿ ಪ್ಯಾಕ್ ಮಾಡಿಸಿ ಇಂಡಿಯಾ ಪೋಸ್ಟ್ ಮುಖಾಂತರ ಮಾದಕ ವಸ್ತುಗಳನ್ನು ಆಮದು ಮಾಡಿಕೊಂಡು ಬೆಂಗಳೂರಿನ ಪ್ರತಿಷ್ಟಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿರುವುದು ತಿಳಿದುಬಂದಿರುತ್ತೆ. ಆರೋಪಿಗಳ ಜಾಲದ ಬಗ್ಗೆ ತನಿಖೆ ಮುಂದುವರೆಸಿಲಾಗಿದೆ ಎಂದರು.

ಬಿಟ್ ಕಾಯಿನ್ ಮುಖಾಂತರ ಹಣ ಸಂದಾಯ

ಬಿಟ್ ಕಾಯಿನ್ ಮುಖಾಂತರ ಹಣ ಸಂದಾಯ

ಟಾರ್ (TOR) ಎಂಬ ಸರ್ಚ್ ಇಂಜಿನ್ ಬಳಸಿ ಡಾರ್ಕ್ ವೆಬ್ (Dark Net) ಮುಖಾಂತರ ಎಂಪೈರ್ ಮಾರ್ಕೆಟ್, ಸಿಲ್ಕ್ ರೂಟ್, ಡ್ರಗ್ ಬೋರ್ಡ್ ಇತ್ಯಾದಿ ವೆಬ್ ಸೈಟ್‍ಗಳಿಂದ ವಿವಿಧ ರೀತಿಯ ನಿಷೇಧಿತವಾಗಿರುವ ಮಾದಕ ವಸ್ತುಗಳು ಮತ್ತು ನಿದ್ರಾಜನಕ ವಸ್ತುಗಳನ್ನು ಬುಕ್ ಮಾಡಿ ಬಿಟ್ ಕಾಯಿನ್ (Bitcoin) ಮುಖಾಂತರ ಹಣ ಸಂದಾಯ ಮಾಡಿ, ಮಾದಕ ವಸ್ತುಗಳನ್ನು ಪೋಸ್ಟ್ ಮುಖಾಂತರ ಆಮದು ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವ್ಯವಸ್ಥಿತ ಜಾಲದ ಪತ್ತೆಗೆ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಬೆಂಗಳೂರು ನಗರ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.

08 ಸ್ಥಳಗಳಲ್ಲಿ ದಾಳಿ ನಡೆಸಿ ಆರೋಪಿಗಳ ಸೆರೆ

08 ಸ್ಥಳಗಳಲ್ಲಿ ದಾಳಿ ನಡೆಸಿ ಆರೋಪಿಗಳ ಸೆರೆ

ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಅಧಿಕಾರಿಗಳ ತಂಡವು ಕಳೆದ ವಾರ ಡ್ರಗ್ಸ್ ಪೆಡ್ಲರ್ ಗಳ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ, ಬೆಂಗಳೂರು ನಗರದ ಹೆಚ್.ಎಸ್.ಆರ್ ಲೇಔಟ್, ವಿಜಯನಗರ, ಮಹಾಲಕ್ಷ್ಮಿಪುರಂ, ಹಲಸೂರು, ಕೆ.ಜಿ.ಹಳ್ಳಿ ಇಂದಿರಾನಗರ, ಎಚ್.ಎ.ಎಲ್ ಮತ್ತು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 08 ಸ್ಥಳಗಳಲ್ಲಿ ದಾಳಿ ನಡೆಸಿ ಡಾರ್ಕ್ ನೆಟ್ ಮುಖಾಂತರ ಡ್ರಗ್ಸ್ ಸಂಗ್ರಹಿಸಿ ಮಾರಾಟ ಮಾಡುವ ಅಕ್ರಮಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

1) ಸಾರ್ಥಕ್ ಆರ್ಯ ಬಿನ್ ರಾಕೇಶ್ ಆರ್ಯ, 31 ವರ್ಷ, ಎಚ್.ಎಸ್.ಆರ್ ಲೇಔಟ್, ಬೆಂಗಳೂರು.
2) ನಿತೀನ್ ಬಿನ್ ಪುರುಶೋತ್ತಮ್, 24 ವರ್ಷ, ವಿಜಯನಗರ, ಬೆಂಗಳೂರು.
3) ಕಾರ್ತಿಕ್‍ಗೌಡ ಬಿನ್ ಸಿದ್ದೇಗೌಡ, 25 ವರ್ಷ, ಜೆ.ಸಿ.ನಗರ, ಬೆಂಗಳೂರು.
4) ಝಮಾನ್ ಹಂಜಾಮಿನಾ, ಬಿನ್ ಅಕ್ಬರ್, 25 ವರ್ಷ, ಹಲಸೂರು, ಬೆಂಗಳೂರು.
5) ಮಹಮದ್ ಆಲಿ ಆಲಿತೂಜರಿ ಬಿನ್ ಮಹಮದ್ ತೂಜರಿ, 29 ವರ್ಷ, ಹೆಚ್‍ಬಿಆರ್ ಲೇಔಟ್,
6) ಅಮಲ್ ಬೈಜು ಬಿನ್ ಬೈಜು 20 ವರ್ಷ ಚೆಂಗನ್ಚೆರೀ ಕೇರಳ ರಾಜ್ಯ
7) ಫೀನಿಕ್ಸ್ ಡಿಸೋಜಾ ಬಿನ್ ಜೆರೋಮ್ 24 ವರ್ಷ, ತ್ರಿವೇಂಡ್ರಂ ಜಿಲ್ಲೆ ಕೇರಳ
8) ಶೋನ್ ಶಾಝಿ ಮಾರತ್ ಹಳ್ಳಿ ಬೆಂಗಳೂರು
9) ಪಾಲಡುಗ ವೆಂಕಟ ವರುಣ್ ಬಿನ್ ಪಾಲಡುಗ ಶಿವಶಂಕರ್, 33 ವರ್ಷ, ಇಂದಿರಾನಗರ, ಬೆಂ.
10) ಸನ್ನೀ ಓ ಇನೋಶೇಂಟ್ 26 ವರ್ಷ, ಬೆನ್ನಿಗಾನಹಳ್ಳಿ ನೈಝೀರಿಯಾ ಪ್ರಜೆ

90 ಲಕ್ಷ ಬೆಲೆ ಬಾಳುವ ಮಾದಕ ವಸ್ತು

90 ಲಕ್ಷ ಬೆಲೆ ಬಾಳುವ ಮಾದಕ ವಸ್ತು

ದಸ್ತಗಿರಿ ಮಾಡಿದ ಆರೋಪಿಗಳ ವಶದಿಂದ ಸುಮಾರು 90 ಲಕ್ಷ ಬೆಲೆ ಬಾಳುವ ಮಾದಕ ವಸ್ತುಗಳಾದ 660 ಎಲ್.ಎಸ್.ಡಿ ಪೇಪರ್ ಗಳನ್ನು 386 ಎಂ.ಡಿ.ಎಂ.ಎ, 180 ಎಕ್ಸ್ ಟೆಸಿ ಮಾತ್ರೆಗಳು, 12 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್, 10 ಗ್ರಾಂ ಕೋಕೇನ್ ಪುಡಿಯನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 12 ಮೊಬೈಲ್ ಪೋನ್, 3 ಲ್ಯಾಪ್ಟಾಪ್, 2 ದ್ವಿಚಕ್ರ ವಾಹನಗಳನ್ನು ಪೋಸ್ಟಲ್ ಕವರ್ ಗಳನ್ನು ವಶಕ್ಕೆ ಪಡೆದು ಅಮಾನತ್ತುಪಡಿಸಿಕೊಂಡಿರುತ್ತೆ.

ಸಂದೀಪ್ ಪಾಟೀಲ್ ನೇತೃತ್ವದ ತಂಡ

ಸಂದೀಪ್ ಪಾಟೀಲ್ ನೇತೃತ್ವದ ತಂಡ

ಈ ಕಾರ್ಯಚರಣೆಯನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಉಪ ಪೊಲೀಸ್ ಆಯುಕ್ತರಾದ ಕೆ.ಪಿ.ರವಿಕುಮಾರ್ ರವರ ಮಾರ್ಗದರ್ಶನಲ್ಲಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತರವರುಗಳಾದ ಕೆ.ಸಿ.ಗೌತಮ್, ಹನುಮಂತರಾಯ ರವರ ಉಸ್ತುವಾರಿಯಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ರವರುಗಳಾದ ಜಿ ಲಕ್ಷ್ಮಿಕಾಂತಯ್ಯ, ಎಂ.ಎಸ್.ಬೋಳೆತ್ತಿನ, ವಿರೂಪಾಕ್ಷಸ್ವಾಮಿ, ಶ್ರೀಧರ್ ಕೆ ಪೂಜಾರ, ಅಂಜನ್ ಕುಮಾರ್, ಮಹಾನಂದ್, ಹೆಚ್ ಎಸ್ ಜಗದೀಶ್, ಕುಮಾರ್, ಪ್ರಕಾಶ್,ತಿಮ್ಮೇಗೌಡ, ರವಿಪಾಟೀಲ್, ಹಜರೇಷ್, ಪಿಎಸ್‍ಐ ಲಕ್ಷ್ಮಿನರಸಿಂಹಯ್ಯ, ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

English summary
CCB police Seize Drugs worth Rs 90 Lakh, arrested 10 accused. All peddlers used Dark net and Tor browser to operate and transacted money via bitcoin said city police commissioner Kamal panth
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X