ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ದಾಳಿ, 66 ಮಹಿಳೆಯರ ರಕ್ಷಣೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 09: ಕಲಾಸಿಪಾಳ್ಯ ಪೊಲೀಸ್ ಠಾಣಾ ಸರಹದ್ದಿನ ಲಾಲ್ ಬಾಗ್ ಪೋರ್ಟ್ ರಸ್ತೆ, ಕೋಸ್ಟರಿಕಾ ಬಾರ್ ಅಂಡ್ ರೆಸ್ಟೋರೆಂಟ್‍ನ 1 ಮತ್ತು 2ನೇ ಮಹಡಿಯಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಪರವಾನಗಿ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದವರ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿ.ಸಿ.ಬಿ) ಪೊಲೀಸರು ದಾಳಿ ನಡೆಸಿದ್ದಾರೆ.

ಸಿಸಿಬಿ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಕ್ರಮ ಡ್ಯಾನ್ಸ್ ಬಾರ್ ನಡೆಸುತ್ತಿದ್ದ 7 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಡಾನ್ಸ್ ಬಾರ್ ನಲ್ಲಿದ್ದ 17 ಜನ ಗಿರಾಕಿಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ. ಡ್ಯಾನ್ಸ್ ಬಾರ್ ನಲ್ಲಿದ್ದ ಗಿರಾಕಿಗಳ ಮುಂದೆ ಅರೆಬರೆ ಉಡುಗೆಗಳನ್ನು ತೊಟ್ಟು ಅಶ್ಲೀಲ ಡ್ಯಾನ್ಸ್ ಮಾಡಲು ಪ್ರೇರೆಪಿಸಿ ಕರೆತಂದಿದ್ದ ಬೇರೆ ಬೇರೆ ರಾಜ್ಯದ 26 ಮಹಿಳೆಯರನ್ನು ಸಂರಕ್ಷಣೆ ಮಾಡಲಾಗಿರುತ್ತದೆ.

'ಮುಂಬೈನಲ್ಲಿ ಡ್ಯಾನ್ಸ್ ಬಾರ್ ಓಪನ್ ಮಾಡಲು ಅನುಮತಿ''ಮುಂಬೈನಲ್ಲಿ ಡ್ಯಾನ್ಸ್ ಬಾರ್ ಓಪನ್ ಮಾಡಲು ಅನುಮತಿ'

ಡ್ಯಾನ್ಸ್ ಬಾರ್ ನಲ್ಲಿ ಮಹಿಳೆಯರ ಮೇಲೆ ಎಸೆದಿದ್ದ ಹಾಗೂ ಗ್ರಾಹಕರಿಂದ ಸಂಗ್ರಹಿಸಿದ್ದ 78,230/- ರೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿರುತ್ತದೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

CCB police raids 3 Dance bars, illgeal restuarant recued 66 women

ಇನ್ನೊಂದೆಡೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ಸರಹದ್ದಿನ ಬೆಂಗಳೂರು ನಗರ , ರೆಸಿಡೆನ್ಸಿ ರಸ್ತೆಯಲ್ಲಿರುವ ಗೋಲ್ಡನ್ ಟವರ್ ಕಟ್ಟಡದ 4ನೇ ಮಹಡಿಯಲ್ಲಿರುವ ತೋಪೇಜ್ ಬಾರ್ & ರೆಸ್ಟೋರೆಂಟ್ ಎಂಬಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಪರವಾನಗಿ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ (ಸಿ.ಸಿ.ಬಿ) ಪೊಲೀಸರು ಫೆಬ್ರವರಿ 09ರಂದು ಮೇಲ್ಕಂಡ ಸ್ಥಳದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಕ್ರಮ ಡ್ಯಾನ್ಸ್ ಬಾರ್ ನಡೆಸುತ್ತಿದ್ದ 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಡ್ಯಾನ್ಸ್ ಬಾರ್ ನಲ್ಲಿದ್ದ 20 ಜನ ಗಿರಾಕಿಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ.

ಬೇರೆ ಬೇರೆ ರಾಜ್ಯದ 40 ಮಹಿಳೆಯರನ್ನು ಸಂರಕ್ಷಣೆ ಮಾಡಿ ಆರೋಪಿಗಳ ವಶದಲ್ಲಿದ್ದ ರೂ. 23,550/- ನಗದು ಹಣವನ್ನು ವಶಕ್ಕೆ ಪಡೆದಿರುತ್ತದೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

CCB police raids 3 Dance bars, illgeal restuarant recued 66 women

ಅದೇ ರೀತಿ ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣಾ ಸರಹದ್ದಿನ ಸಿಟಿ ಸೆಂಟರ್ ಹೊಟೇಲ್ ಕಟ್ಟಡದ ಸೆಲ್ಲಾರ್ ನ ಬಿ ಹಾಲ್‍ನಲ್ಲಿರುವ ಬಾರ್ & ರೆಸ್ಟೋರೆಂಟ್ ಎಂಬಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಪರವಾನಗಿ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಸ್ಥಳದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಕ್ರಮ ಡ್ಯಾನ್ಸ್ ಬಾರ್ ನಡೆಸುತ್ತಿದ್ದ 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತದೆ. ಡ್ಯಾನ್ಸ್ ಬಾರ್ ನಲ್ಲಿ ಗಿರಾಕಿಗಳ ಜೊತೆ ಡ್ಯಾನ್ಸ್ ಮಾಡಲು ಕಳುಹಿಸಿಕೊಡಲು ಇರಿಸಿಕೊಂಡಿದ್ದ ಬೇರೆ ಬೇರೆ ರಾಜ್ಯದ 8 ಮಹಿಳೆಯರನ್ನು ಸಂರಕ್ಷಣೆ ಮಾಡಿ ಆರೋಪಿಗಳ ವಶದಿಂದ ರೂ. 22,600/- ನಗದು ಹಣವನ್ನು ವಶಕ್ಕೆ ಪಡೆದಿರುತ್ತದೆ. ಈ ಸಂಬಂಧ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಕಾರ್ಯಚರಣೆಗಳನ್ನು ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್‍ಪಾಟೀಲ್, ಐ.ಪಿ.ಎಸ್. ಮತ್ತು ಉಪ ಪೊಲೀಸ್ ಆಯುಕ್ತ ಕುಲದೀಪ್‍ಕುಮಾರ್ ಜೈನ್, ಐ.ಪಿ.ಎಸ್, ರವರ ಮಾರ್ಗದರ್ಶನದಲ್ಲಿ, ಸಿಸಿಬಿ ಘಟಕದ ಸಹಾಯಕ ಪೊಲೀಸ್ ಆಯುಕ್ತರುಗಳಾದ ಡಿ.ಟಿ.ವಿರೂಪಾಕ್ಷಪ್ಪ, ಮುದವಿ, ಪ್ರಭುಶಂಕರ್ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ & ಸಿಬ್ಬಂದಿಗಳನ್ನೊಳಗೊಂಡ ಸಿಬ್ಬಂದಿಗಳ ಪ್ರತ್ಯೇಕ ತಂಡಗಳು ನಿರ್ವಹಿಸಿರುತ್ತವೆ.

English summary
CCB police of Bengaluru raid on 3 illegal Bar and restaurant in Kalasipalya police station limits, arrested, 14 arrested, 66 women rescued, over Rs 1,24,380 cash seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X