ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆದಿತ್ಯ ಆಳ್ವ ನಿವಾಸದಲ್ಲಿ ಮಾದಕ ವಸ್ತು ಪತ್ತೆ; ಸಿಸಿಬಿ ಪೊಲೀಸ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19 : ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಸಿಸಿಬಿ ಪೊಲೀಸರು ಆದಿತ್ಯ ಆಳ್ವಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಈ ಪ್ರಕರಣದಲ್ಲಿ ತಮ್ಮ ಹೆಸರು ಕೈ ಬಿಡುವಂತೆ ಆದಿತ್ಯ ಆಳ್ವ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸಿಸಿಬಿ ಪೊಲೀಸರು ಆದಿತ್ಯ ಆಳ್ವ ಅರ್ಜಿಗೆ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ. ಪೊಲೀಸರು ಸೆಪ್ಟೆಂಬರ್ 15ರಂದು ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವ ಒಡೆತನದ 'ಹೌಸ್ ಆಫ್ ಲೈಫ್' ರೆಸಾರ್ಟ್‌ ಮೇಲೆ ದಾಳಿ ನಡೆಸಿದ್ದರು.

ಆದಿತ್ಯ ಆಳ್ವಾ, ಶಿವಪ್ರಕಾಶ್‌ ಬಂಧನಕ್ಕಾಗಿ ಲುಕ್ ಔಟ್ ನೋಟಿಸ್ ಆದಿತ್ಯ ಆಳ್ವಾ, ಶಿವಪ್ರಕಾಶ್‌ ಬಂಧನಕ್ಕಾಗಿ ಲುಕ್ ಔಟ್ ನೋಟಿಸ್

ಆದಿತ್ಯ ಆಳ್ವ ನಿವಾಸದ ಮೇಲೆ ದಾಳಿ ಮಾಡಿದಾಗ ಮಾತ್ರೆ, ಗಾಂಜಾ ಸೇರಿದಂತೆ ಮಾದಕ ವಸ್ತಗಳು ದೊರೆತಿವೆ ಎಂದು ಆಕ್ಷೇಪಣೆಯಲ್ಲಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿದೆ.

ಎಂಥಾ ಅಪ್ಪನಿಗೆ ಎಂಥಾ ಮಗ, ಜೀವರಾಜನ ಪುತ್ರ ಆದಿತ್ಯ ಎಂಥಾ ಅಪ್ಪನಿಗೆ ಎಂಥಾ ಮಗ, ಜೀವರಾಜನ ಪುತ್ರ ಆದಿತ್ಯ

CCB Police Found Drugs In Aditya Alvas House

ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆದಿತ್ಯ ಆಳ್ವ 6ನೇ ಆರೋಪಿ. ಸೆಪ್ಟೆಂಬರ್ 4ರಿಂದ ಅವರು ತಲೆಮರೆಸಿಕೊಂಡಿದ್ದಾರೆ. ಮುಂಬೈನಲ್ಲಿ ಆದಿತ್ಯ ಆಳ್ವ ಸಂಬಂಧಿ, ನಟ ವಿವೇಕ್ ಓಬೆರಾಯ್ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಹುಡುಕಾಟ ನಡೆಸಿದ್ದಾರೆ.

ಡ್ರಗ್ ಪ್ರಕರಣ; ಆದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ದಾಳಿ ಡ್ರಗ್ ಪ್ರಕರಣ; ಆದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ದಾಳಿ

ಬೆಂಗಳೂರಿನ ಹೆಬ್ಬಾಳದಲ್ಲಿರುವ 'ಹೌಸ್ ಆಫ್ ಲೈಫ್' ರೆಸಾರ್ಟ್‌ನಲ್ಲಿ ಪಾರ್ಟಿಗಳು ನಡೆಯುತ್ತಿದ್ದವು. ಬಿಬಿಎಂಪಿ ವ್ಯಾಪ್ತಿಗೆ ಬರುವ ಈ ಪ್ರದೇಶದ ಲೈಸೆನ್ಸ್ ಅವಧಿ 2018ರಲ್ಲಿಯೇ ಮುಗಿದಿತ್ತು. ಆದರೂ ಅದನ್ನು ನವೀಕರಣ ಮಾಡದೆ ಪಾರ್ಟಿ ಮಾಡಲಾಗುತಿತ್ತು.

Recommended Video

Super over ಐಪಿಎಲ್ ಇತಿಹಾಸದಲ್ಲಿ ಏನೇನೆಲ್ಲಾ ನಡೆದಿದೆ | Oneindia Kannada

ಎಫ್‌ಐಆರ್‌ನಲ್ಲಿ ಪೊಲೀಸರು ಆದಿತ್ಯ ಆಳ್ವ ಹೆಸರು ಸೇರಿಸಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆಳ್ವ, "ನಾನು ಲಂಡನ್‌ನಲ್ಲಿ ಕಾನೂನು ಪದವಿ ಪಡೆದಿದ್ದೇನೆ. ಕುಟುಂಬಕ್ಕೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಆಧಾರ ರಹಿತವಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ"ಎಂದು ತಿಳಿಸಿದ್ದಾರೆ.

English summary
CCB police found drugs during search at Aditya Alva's House of Life resort near Hebbal, Bengaluru on September 15. Aditya Alva is 6th accused in drug case and police searching for him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X