ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಚ್ಚಿನ ಬೆಲೆಗೆ ಕಾರು ಮಾರಾಟ ಹೆಸರಿನಲ್ಲಿ ವಂಚಿಸುತ್ತಿದ್ದ ಮೂವರ ಸೆರೆ!

|
Google Oneindia Kannada News

ಬೆಂಗಳೂರು, ಜು. 14: ಅಪರಿಚಿತರಿಗೆ ಕಾರು ಮಾರಾಟ ಮಾಡುವಾಗ ಹುಷಾರ್! ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಡುವ ಆಸೆ ತೋರಿಸಿ ತೆಗೆದುಕೊಂಡು ಹೋಗುವ ಕಾರನ್ನು ಅಡವಿಟ್ಟು ನಾಮ ಹಾಕುವ ಗ್ಯಾಂಗ್ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ದುಬಾರಿ ಬೆಲೆಗೆ ಕಾರಾಟ ಮಾರಿ ಕೊಡುವುದಾಗಿ ನಂಬಿಸಿ ಅನೇಕರಿಂದ ಕಾರು ಪಡೆದು ಅಡವಿಟ್ಟು ಮೋಸ ಮಾಡುವ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ.

ಐಷಾರಾಮಿ ಕಾರುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ಕಾರುಗಳನ್ನು ಪಡೆದು ಅಡವಿಟ್ಟು ಮೋಸ ಮಾಡುತ್ತಿದ್ದ ಗ್ಯಾಂಗ್ ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೂವರು ವಂಚಕರಿಂದ ಬರೋಬ್ಬರಿ 3 ಕೋಟಿ ರೂ. ಮೌಲ್ಯದ 19 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ನಸೀಬ್, ಮಹಮದ್ ಆಜಂ, ಮಹೀರ್ ಖಾನ್ ಬಂಧಿತರು. ಚಿತ್ರದುರ್ಗ, ದಾವಣಗೆರೆ, ಮೈಸೂರು ಸೇರಿದಂತೆ ವಿವಿಧ ಕಡೆ ಅಡವಿಟ್ಟಿದ್ದ ಎಂಡೀವರ್, ಕಿಯಾ, ಫಾರ್ಚುನರ್, ಸ್ಕೋಡಾ, ಕ್ಯಾರಾವೆಲ್ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಜ್ಞಾನ ಭಾರತಿ, ಪುಲಿಕೇಶಿನಗರ, ವಯ್ಯಾಲಿಕಾವಲ್, ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೇಸು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

CCB Police Busted Second Hand car sale cheating gang in Bengaluru

ಸಾಮಾಜಿಕ ಜಾಲ ತಾಣದಲ್ಲಿ ಐಷಾರಾಮಿ ಕಾರುಗಳನ್ನು ಮಾರಾಟ ಮಾಡಲು ಹಾಕುವ ಜಾಹಿರಾತು ನೋಡಿ ಸಂಪರ್ಕಿಸುತ್ತಿದ್ದರು. ನೀವು ಹೇಳಿದ ಬೆಲೆಗಿಂತಲೂ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿಕೊಡುವುದಾಗಿ ಮಾತುಕತೆ ಮಾಡುತ್ತಿದ್ದರು. ಹೀಗೆ ನಂಬಿಸಿ ದಾಖಲೆ ಪಡೆದು ಕಾರುಗಳನ್ನು ಸಹ ಪಡೆಯುತ್ತಿದ್ದರು. ಆನಂತರ ಕಾರು ಅಗತ್ಯ ಇರುವರನ್ನು ನೋಡಿ ಅಡವಿಟ್ಟು ಪರಾರಿಯಾಗುತ್ತಿದ್ದರು.

CCB Police Busted Second Hand car sale cheating gang in Bengaluru

Recommended Video

ಸುಮಲತಾ ಹೀಗೆಲ್ಲಾ ಹೇಳೋದು ಸರಿ ಅಲ್ಲ ಎಂದ ಬಿಸಿ ಪಾಟಿಲ್ | Oneindia Kannada

ಮೂಲ ಮಾಲೀಕರು ಕಾರು ಅಥವಾ ಹಣ ಕೇಳಿದರೆ ಹೆದರಿಸುತ್ತಿದ್ದರು. ಈ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗಿದ್ದವರು ದೂರು ನೀಡಿದರೂ, ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿರಲಿಲ್ಲ. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆವರ ನಿರ್ದೇಶನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮೂವರು ವಂಚಕರ ಜಾಲವನ್ನು ಪತ್ತೆ ಮಾಡಿ, 19 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

English summary
CCB police have arrested three people for cheating a second-hand car believed to be for sale high price know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X