ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ RT-PCR ಪರೀಕ್ಷಾ ನೆಗಟೀವ್ ವರದಿ ನೀಡುವ ದಂಧೆ ಶುರು!

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಕೊರೊನಾ ಸೊಂಕು ಭಯವನ್ನೇ ಬಂಡವಾಳ ಮಾಡಿಕೊಂಡು ನಾನಾ ದಂಧೆಗಳು ತಲೆಯೆತ್ತಿವೆ. ಎರಡು ದಿನದ ಹಿಂದಷ್ಟೇ ಸರ್ಕಾರದ ಕೋಟಾದಡಿ ಬೆಡ್ ಕೊಡುವ ಆಸೆ ಹುಟ್ಟಿಸಿ ಹಣ ಪಡೆದು ಮೋಸ ಮಾಡಿ ಸಿಕ್ಕಿಬಿದ್ದಿದ್ದ. ರೆಮ್‌ಡೆಸಿವಿರ್ ಚುಚ್ಚು ಮದ್ದು ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ದುಡ್ಡು ಮಾಡಿ ಸಿಕ್ಕಿಬಿದ್ದದ್ದರು. ಈ ಸಾಲಿಗೆ ಇನ್ನೊಂದು ದಂಧೆ ಸೇರ್ಪಡೆಯಾಗಿದೆ.

ಇದು ವಿಚಿತ್ರ ದಂಧೆ. ಅಗತ್ಯ ಇರುವರಿಗೆ ಆರ್‌ಟಿ-ಪಿಸಿಆರ್ ಮತ್ತು ಆಂಟಿಜನ್ ಪರೀಕ್ಷೆಯ ನಕಲಿ ನೆಗಟಿವ್ ವರದಿ ನೀಡುವ ದಂಧೆ ಆರಂಭಿಸಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಮುಖೇಶ್ ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಹಳ್ಳಿ ನಿವಾಸಿ ನಾಗರಾಜ ಬಂಧಿತ ಆರೋಪಿಗಳು. ಇವರಿಂದ ಆರು ನಕಲಿ ಆರ್‌ಟಿ- ಪಿಸಿಆರ್ ಪರೀಕ್ಷಾ ವರದಿ ಹಾಗೂ ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ವರ್ತೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

CCB police busted Fake RT-PCR Test report scam in Bengaluru

Recommended Video

ಗೆಳೆಯನ ಬೆಂಬಲಕ್ಕೆ ನಿಂತ ರಷ್ಯಾ ಅಧ್ಯಕ್ಷ ಪುಟಿನ್ | Oneindia Kannada

ಸರ್ಜಾಪುರ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ಈ ಕಿರಾತಕರು ದೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಸರಿನಲ್ಲಿ ಅಗತ್ಯ ಇರುವರಿಗೆ ನಕಲಿ ಆರ್‌ಟಿ-ಪಿಸಿಅರ್ ವರದಿ ನೀಡುತ್ತಿದ್ದರು. ನೆಗಟಿವ್ ವರದಿ ಬಯಸುವರಿಗೆ ಈ ನಕಲಿ ವರದಿ ನೀಡಿ ಪ್ರತಿಯೊಬ್ಬರಿಂದ 700 ರೂ. ಹಣ ವಸೂಲಿ ಮಾಡುತ್ತಿದ್ದರು. ಕೊರೊನಾ ಪರೀಕ್ಷೆ ಮಾಡಬೇಕಾದರೆ ರೋಗಿಗಳ ಸ್ವಾಬ್ ಸಂಗ್ರಹಿಸಬೇಕು. ಇದ್ಯಾವುದನ್ನು ಮಾಡದೇ ಹಣಕ್ಕಾಗಿ ನಕಲಿ ವರದಿ ನೀಡುತ್ತಿದ್ದ ಇವರ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಕೆಲವರು ಅಗತ್ಯಕ್ಕೆ ಬಳಸಲು ನೆಗಟಿವ್ ವರದಿಗಾಗಿ ದಂಬಾಲು ಬಿದ್ದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಹಣ ಪಡೆದು ನಕಲಿ ವರದಿ ನೀಡುತ್ತಿದ್ದರು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರ ಬಳಿ ಐದು ನಕಲಿ ಆರ್‌ಟಿ-ಪಿಸಿಆರ್ ರಿಪೋರ್ಟ್ ಸಿಕ್ಕಿದ್ದು, ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

English summary
CCB police have been arrested two accused who providing fake RT-PCR negative reports public. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X