ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೇಜಾನ್ ಟೇಪ್, ಡುಂಜೋ ಬೈಕ್ ಬಳಸಿ ಡ್ರಗ್ ಮಾರಾಟ

|
Google Oneindia Kannada News

ಬೆಂಗಳೂರು, ಜೂ.23: ಬೆಂಗಳೂರಿನ ಪ್ರತಿಷ್ಠಿತ ಈಸ್‌ ವೆಸ್ಟ್ ಕಾಲೇಜಿನ ಸಮೀಪದ ಖಾಸಗಿ ಪಿಜಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಡ್ರಗ್ ಜಾಲ ಬಯಲಿಗೆ ಎಳೆದಿದ್ದಾರೆ. ಬ್ಯಾಡರಹಳ್ಳಿ ಸಮೀಪದ ಈಸ್ಟ್ ವೆಸ್ಟ್ ಕಾಲೇಜಿನ ಸಮೀಪದಲ್ಲೇ ಇರುವ ಪ್ರಸಿದ್ಧಿ ಪಿಜಿಯಲ್ಲಿ ಡ್ರಗ್ ಜಾಲ ನಡೆಸುತ್ತಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 30 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಕಣ್ಣು ತಪ್ಪಿಸಿ ಬಂಧಿತ ಆರೋಪಿಗಳು ನಡೆಸುತ್ತಿದ್ದ ಡ್ರಗ್ ಜಾಲ ಪೊಲೀಸರನ್ನೇ ಗಾಬರಿಗೊಳಿಸಿದೆ. ಯಾರಿಗೂ ಅನುಮಾನ ಬಾರದಂತೆ ಗಾಂಜಾ, ಹಶಿ‍ಷ್ ಮತ್ತು ಎಲ್ ಎಸ್ ಡಿ ಸ್ಟ್ರಿಪ್ಸ್ ಗಳನ್ನು ಅಮೆಜಾನ್ ಪಾರ್ಸಲ್ ಮಾದರಿ ಪ್ಯಾಕ್ ಮಾಡುತ್ತಿದ್ದರು. ಅದಕ್ಕೆ ಅಮೆಜಾನ್ ಕಂಪನಿಯ ಟೇಪ್‌ನ್ನು ಬಳಸುತ್ತಿದ್ದರು. ಡುಂಜೋ ಬೈಕ್ ಬಳಸಿ ಮಾದಕ ವ್ಯಸನಿಗಳಿಗೆ ಪೂರೈಕೆ ಮಾಡುತ್ತಿದ್ದರು. ಡ್ರಗ್ ಪಡೆದ ಗಿರಾಕಿಗಳು ಗೂಗಲ್ ಪೇ ಮೂಲಕ ಹಣ ರವಾನೆ ಮಾಡುತ್ತಿದ್ದರು. ಈ ಡ್ರಗ್ ಜಾಲಕ್ಕೆ ಸಂಬಂಧಿಸಿದಂತೆ ಐವರು ಬಂಧನಕ್ಕೆ ಒಳಗಾಗಿದ್ದು, ಮೂವರು ತಲೆ ಮರೆಸಿಕೊಂಡಿದ್ದಾರೆ.

 CCB police Busted Drug Racket In Private PG In Bengaluru

ಹಿಮಾಚಲ ಪ್ರದೇಶದಲ್ಲಿ ಕಿಂಗ್ ಪಿನ್ ಗಳು: ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳು ಹಿಮಾಚಲ ಪ್ರದೇಶದಲ್ಲಿ ತಂಗಿದ್ದಾರೆ. ಡಾರ್ಕ್ ವೆಬ್ ತಾಣದ ಮೂಲಕ ಡ್ರಗ್‌ನ್ನು ಖರೀದಿಸುತ್ತಿದ್ದರು. ಬಿಟ್ ಕಾಯಿನ್ ಮೂಲಕ ಕಡಿಮೆ ಬೆಲೆಗೆ ಎಕ್ಸಟೆಸಿ ಮಾತ್ರೆ, ಎಂಡಿಎಂಎ ಸ್ಟ್ರಿಪ್ಸ್, ಎಲ್ ಎಸ್ ಡಿ ಸ್ಟ್ರಿಪ್ಸನ್ನು ಖರೀದಿಸಿ ಅದು ತಮ್ಮ ಸಂಪರ್ಕದಲ್ಲಿರುವ ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ಕಳುಹಿಸುತ್ತಿದ್ದರು. ಅವರು ಡುಂಜೋ ಬೈಕ್, ಅಮೇಜಾನ್ ಟೇಪ್ ಬಳಕೆ ಮಾಡಿ ಯಾರಿಗೂ ಅನುಮಾನ ಬಾರದಂತೆ ಡ್ರಗ್ ಜಾಲ ವಿಸ್ತರಿಸಿದ್ದರು.

 CCB police Busted Drug Racket In Private PG In Bengaluru

Recommended Video

Americaದಿಂದ ಭಾರತಕ್ಕೆ ಬಂದ ಲಸಿಕೆ ಎಷ್ಟು ಗೋತ್ತಾ | Oneindia Kannada

ಐಟಿ ಉದ್ಯೋಗಿಗಳ ಜತೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಕೂಡ ಮಾದಕ ವಸ್ತು ಪೂರೈಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಆಧರಿಸಿ ಬ್ಯಾಡರಹಳ್ಳಿಯಲ್ಲಿರುವ ಪ್ರಸಿದ್ಧಿ ಪಿಜಿ ಮೇಲೆ ದಾಳಿ ನಡೆಸಿದಾಗ ಇಬ್ಬರು ಐಟಿ ಉದ್ಯೋಗಿಗಳು ಹಾಗೂ ಒಬ್ಬ ಕಾನೂನು ಪದವೀಧರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ನೀಡಿದ ಮಾಹಿತಿ ಮೇರೆಗೆ ಹಿಮಾಚಲ ಪ್ರದೇಶದಲ್ಲಿ ತಲೆ ಮರೆಸಿಕೊಂಡಿರುವ ಮೂವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಎಸಿಪಿ ಕೆ.ಸಿ. ಗೌತಮ್ ನೇತೃತ್ವದಲ್ಲಿ ಸಿಸಿಬಿ ಮಾದಕ ವಸ್ತು ನಿಯಂತ್ರಣ ಘಟಕದ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

English summary
Arrested drug Drug peddlers have using Amazon Tape and Dunzo Bike for drug delivery to customers know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X