ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮುದ್ರದಲ್ಲಿ ತೇಲುವ ಈ ಅಂಬರ್ ಗ್ರಿಸ್ ಒಂದು ಕೆ.ಜಿ. ಬೆಲೆ 1 ಕೋಟಿ ರೂ. !

|
Google Oneindia Kannada News

ಬೆಂಗಳೂರು, ಆ. 10: ಬೆಲೆಯಲ್ಲಿ ಚಿನ್ನವನ್ನು ಮೀರಿಸುವ ತಿಮಿಂಗಲದ ವೀರ್ಯ ಅಂಬರ್ ಗ್ರಿಸ್ ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಐವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 80 ಕೋಟಿ ಮೌಲ್ಯದ ಅಂಬರ್ ಗ್ರಿಸ್ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿ. ಒಂದು ಕೋಟಿ ರೂ. ಬೆಲೆ ಇರುವ ಅಂಬರ್ ಗ್ರಿಸ್ ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. 80 ಕೋಟಿ ಮೌಲ್ಯದ 80 ಕೆ.ಜಿ. ಅಂಬರ್ ಗ್ರಿಸ್‌ನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಐವರು ಪೊಲೀಸರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿ ತನಿಖಾ ತಂಡಕ್ಕೆ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದರು.

ಬೆಂಗಳೂರಿನ ಮಜೀದ್ ಪಾಷಾ, ಮಹಮದ್ ಮುನ್ನಾ, ಗುಲಾಬ್ ಚಂದ್, ಸಂತೋಷ್, ರಾಯಚೂರು ಮೂಲದ ಜಗನ್ನಾಥಾಚಾರ್ ಬಂಧಿತ ಆರೋಪಿಗಳು. ಇವರಿಂದ 80 ಕೆ.ಜಿ. ಮೌಲ್ಯದ ಅಂಬರ್ ಗ್ರಿಸ್ ಗಟ್ಟಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ರೆಡ್ ಮರ್ಕೈರಿ ತಾಮ್ರದ ಬಾಟಲಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪುರಾತನವಾದ ಸ್ಟೀಮ್ ಫ್ಯಾನ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಾಚರಣೆ ಹೇಗೆ ?

ಕಾರ್ಯಾಚರಣೆ ಹೇಗೆ ?

ಸುಂಗಂಧ ದ್ರವ್ಯಕ್ಕೆ ಬಳಸುವ ಅಂಬರ್ ಗ್ರಿಸ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತಿ ದುಬಾರಿ ಬೆಲೆ. ಒಂದು ಕೆ.ಜಿ ಅಂಬರ್ ಗ್ರಿಸ್ ಒಂದು ಕೋಟಿ ರೂ.ಗೆ ಬೆಲೆಯಿದೆ. ಅದೇ ಚಿನ್ನ ಒಂದು ಕೆ.ಜಿ. 40 ರಿಂದ 50 ಲಕ್ಷ ರೂ. ಹೀಗಾಗಿ ಇದನ್ನು ಫ್ಲೋಟಿಂಗ್ ಗೋಲ್ಡ್ ಎಂದೇ ಕರೆಯುತ್ತಾರೆ. ಇದನ್ನು ಅಕ್ರಮವಾಗಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡಲು ಯತ್ನಿಸಿದ ಖಚಿತ ಮಾಹಿತಿ ಆಧರಿಸಿ ಡಿಸಿಪಿ ಕೆ.ಪಿ. ರವಿಕುಮಾರ್ ಮಾರ್ಗದರ್ಶನದಲ್ಲಿ ವಿಶೇಷ ವಿಚಾರಣಾ ದಳ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಐವರು ಆರೋಪಿಗಳು ಸಿಕ್ಕಿಬಿದ್ದಿದ್ದು ಅವರಿಂದ 80 ಕೋಟಿ ರೂ. ಮೌಲ್ಯದ ಅಂಬರ್ ಗ್ರಿಸ್ ವಶಪಡಿಸಿಕೊಳ್ಳಲಾಗಿದೆ.

ಕೆ.ಜಿ. ಹಳ್ಳಿ ಪೊಲೀಸರ ಮೊದಲ ಕಾರ್ಯಾಚರಣೆ: ಕೆ.ಜಿ. ಹಳ್ಳಿ ಪೊಲೀಸರು ಕರ್ನಾಟಕದಲ್ಲಿ ಮೊದಲ ಬಾರಿಗೆ ಅಂಬರ್ ಗ್ರಿಸ್ ಜಾಲವನ್ನು ಪತ್ತೆ ಮಾಡಿದ್ದರು. ಮಾಗಡಿ ಮುಖ್ಯ ರಸ್ತೆಯ ಸಯ್ಯದ್ ತಜ್ಮುಲ್ ಪಾಷಾ, ಪ್ಯಾಲೇಸ್ ಗುಟ್ಟಹಳ್ಳಿ ನಿವಾಸಿ ಸಲೀಂಪಾಷಾ, ಜೆ.ಪಿ.ನಗರ ನಿವಾಸಿ ರಫೀ ಉಲ್ಲಾ, ಹಾಗೂ ನಾಸೀರ್ ಪಾಷಾ ಎಂಬುವರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದರು.

ಏನಿದು ಅಂಬರ್ ಗ್ರಿಸ್

ಏನಿದು ಅಂಬರ್ ಗ್ರಿಸ್

ಅಂಬರ್ ಗ್ರಿಸ್ ಎಂಬುದು ತಿಮಿಂಗಲದ ವೀರ್ಯ. ಇದು ಘನ ಮೇಣದ ವಾಸನೆಯಿಂದ ಕೂಡಿರುತ್ತದೆ. ಜಗತ್ತಿನಲ್ಲಿಯೇ ಅತಿ ದುಬಾರಿ ಬೆಲೆ ಬಾಳುವ ಸುಗಂಧ ದ್ರವ್ಯಕ್ಕೆ ಇದನ್ನು ಬಳಸುತ್ತಾರೆ. ಇದನ್ನು ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಅರಬ್ ಹಾಗೂ ಚೀನಾ ದೇಶಗಳಲ್ಲಿ ಈ ಅಂಬಗ್ರಿಸ್‌ಗೆ ತುಂಬಾ ಬೇಡಿಕೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಅಂಬರ್ ಗ್ರಿಸ್ ಬೆಲೆ ಒಂದು ಕೋಟಿ ರೂ.ಗೂ ಅಧಿಕ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮೊದಲ ಪ್ರಕರಣ

ಕರ್ನಾಟಕದಲ್ಲಿ ಮೊದಲ ಪ್ರಕರಣ

ಕೋಲಾರ ಮೂಲದ ವ್ಯಕ್ತಿಯಿಂದ ವ್ಯವಹಾರ ಕುದುರಿಸಿ ತಂದಿದ್ದ ಸುಮಾರು ಎಂಟು ಕೋಟಿ ಮೌಲ್ಯದ 6.7 ಕೆ.ಜಿ. ತೂಕದ ಅಂಬರ್ ಗ್ರಿಸ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಪ್ರಕರಣ ದಾಖಲಿಸಿರುವುದು ಇದೇ ಮೊದಲು. ಅಂಬರ್ ಗ್ರಿಸ್ ಮಾರಾಟ ನಿಷೇಧವಾಗಿರುವ ಹಿನ್ನೆಲೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿ ಆರೋಪಿಗಳ ವಿರುದ್ಧ ಕೇಸು ದಾಖಲಿಸಿದ್ದರು. ಇದೀಗ ಸಿಸಿಬಿ ಪೊಲೀಸರು 80 ಕೋಟಿ ರೂ. ಮೌಲ್ಯದ ಅಂಬರ್ ಗ್ರಿಸ್ ಮಾರಾಟ ಜಾಲ ಪತ್ತೆ ಮಾಡಿದ್ದಾರೆ.

Recommended Video

Preetham Gowda ಅವರಿಗೆ ಬುದ್ಧಿ ಮಾತು ಹೇಳಿದ Somanna | Oneindia Kannada
ಯಾಕಿಷ್ಟು ಅಂಬರ್ ಗ್ರಿಸ್‌ಗೆ ಬೆಲೆ

ಯಾಕಿಷ್ಟು ಅಂಬರ್ ಗ್ರಿಸ್‌ಗೆ ಬೆಲೆ

ತಿಮಿಂಗಲ ಸಾಮಾನ್ಯವಾಗಿ ಮೀನುಗಳನ್ನು ತಿನ್ನುತ್ತದೆ. ಸ್ಪರ್ಮ್ ವೇಲ್ ಪ್ರಬೇಧದ ತಿಮಿಂಗಳು ಅಂಬರ್ ಗ್ರಿಸ್ ದ್ರವ್ಯವನ್ನು ಹೊರ ಹಾಕುತ್ತವೆ. ಕ್ರಮೇಣ ಅದ ಕಲ್ಲಿನಂತಾಗುತ್ತದೆ. ಈ ತಿಮಿಂಗಲ ತಿನ್ನುವ ಮೀನುಗಳು ಕೆಲವು ತಿಂಗಳು ಹೊಟ್ಟೆಯಲ್ಲಿ ಇರುವುದರಿಂದ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗಿ ಅದು ಮೇಣದಂತಾಗುತ್ತದೆ. ಸುಗಂಧಿತವಾಗಿ ಪರಿವರ್ತನೆಯಗುವ ವೇಳೆಗೆ ಅದನ್ನು ವಾಂತಿ ಮಾಡುವ ಮೂಲಕ ಹೊರ ಹಾಕುತ್ತವೆ. ಇದು ಹಗುರವಾಗಿರುವ ಕಾರಣ ಸಮುದ್ರದಲ್ಲಿ ತೇಲಾಡುತ್ತದೆ. ಇದನ್ನೇ ಅಂಬರ್ ಗ್ರಿಸ್ ಎಂದು ಕರೆಯುತ್ತಾರೆ. ಸಮುದ್ರ ತೀರದಲ್ಲಿ ಈ ಅಪರೂದಪ ಅಂಬರ್ ಗ್ರಿಸ್ ಸಿಗುತ್ತದೆ. ಇದನ್ನು ಕಾನೂನು ಪ್ರಕಾರ ಕೊಳ್ಳುವುದು, ಮಾರುವುದು ಅಪರಾಧ. ಆದರೆ ವೈದ್ಯಕೀಯ ಸಂಶೋಧನೆಗೆ ಬಳಸಲಾಗುತ್ತದೆ. ಇಂತಹ ಅಪರೂಪದ ಅಂಬರ್ ಗ್ರಿಸ್ ಮಾರಾಟ ಮಾಡುವ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ.

English summary
CCB Police Busted Ambergris racket in Bengaluru: Why ambergris costly then Gold ? CCB police seized 80 Crore worth Ambergris know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X