ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಸಿಬಿ ಪೊಲೀಸರ ದಾಳಿ: ಕಟ್ಟಡ ಹಾರಿ ಪರಾರಿಯಾದ ರೌಡಿ ಕುಣಿಗಲ್ ಗಿರಿ

|
Google Oneindia Kannada News

ಬೆಂಗಳೂರು, ಜೂನ್ 15: ಕುಖ್ಯಾತ ರೌಡಿ ಕುಣಿಗಲ್ ಗಿರಿ ಯನ್ನು ಬಂಧಿಸುವ ಸಲುವಾಗಿ ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ನಗರದ ಪಬ್‌ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಪೊಲೀಸರಿಗೆ ಹೆದರಿ ಗಿರಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ತಪ್ಪಿಸಿಕೊಂಡಿದ್ದಾನೆ.

ನಿನ್ನೆ ಕುಣಿಗಲ್ ಗಿರಿಯ ಹುಟ್ಟುಹಬ್ಬ ಇತ್ತು, ರೆಸಿಡೆನ್ಸಿ ರಸ್ತೆಯ ಟೈಮ್ಸ್‌ ಬಿಲ್ಡಿಂಗ್‌ನಲ್ಲಿರುವ ಪಬ್‌ನಲ್ಲಿ 150 ಡಾನ್ಸರ್‌ಗಳನ್ನು ಕರೆಸಿ ಭಾರಿ ಜೋರಾಗಿ ಬರ್ತ್‌ ಡೇ ಪಾರ್ಟಿ ಆಚರಿಸುತ್ತಿದ್ದ. ವಿಷಯ ತಿಳಿದ ಸಿಸಿಬಿ ಪೊಲೀಸರು ಗಿರೀಶ್‌ ಅವರ ನೇತೃತ್ವದಲ್ಲಿ ದಿಢೀರನೆ ದಾಳಿ ನಡೆಸಿದರು.

ಮಂಗಳೂರಿನ ರೌಡಿ ಶೀಟರ್ ಉಮರ್ ಫಾರುಕ್‌ಗೆ ಪೊಲೀಸರ ಗುಂಡೇಟು ಮಂಗಳೂರಿನ ರೌಡಿ ಶೀಟರ್ ಉಮರ್ ಫಾರುಕ್‌ಗೆ ಪೊಲೀಸರ ಗುಂಡೇಟು

ಸಿಸಿಬಿ ಪೊಲೀಸರ ದಾಳಿ ಆಗಿದ್ದು ಗೊತ್ತಾಗುತ್ತಿದ್ದಂತೆ, ಕಟ್ಟಡ ಮೇಲ್ಭಾಗಕ್ಕೆ ಹೋಗಿ ಅಲ್ಲಿಂದ ಪಕ್ಕದ ಕಟ್ಟಡದ ಮೇಲೆ ಹಾರಿ ಕುಣಿಗಲ್ ಗಿರಿ ತಪ್ಪಿಸಿಕೊಂಡಿದ್ದಾನೆ. ತನ್ನ ಇನ್ನೋವಾ ವಾಹನವನ್ನು ಅಲ್ಲಿಯೇ ಬಿಟ್ಟು ಆತ ಪರಾರಿಯಾಗಿದ್ದಾನೆ.

CCB police attacked rowdy sheeter Kunigal Ravi, he escaped cinematicly

ಟೈಮ್ಸ್‌ ಬಿಲ್ಡಿಂಗ್ ಒಂದರಲ್ಲೇ ಐದು ಪಬ್ ಮತ್ತು ಲೈವ್ ಬಾಂಡ್‌ಗಳು ಇದ್ದು, ಎಲ್ಲದರ ಮೇಲೂ ಸಿಸಿಬಿ ಪೊಲೀಸರು ದಾಳಿ ನಡೆಸಿ ಸುಮಾರು 250 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಜೊತೆಗೆ 300 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಕುಣಿಗಲ್ ಗಿರಿಯ ಆಪ್ತರು ಹಲವರಿದ್ದಾರೆ. ಎಲ್ಲರ ವಿಚಾರಣೆ ನಡೆಸಲಾಗುತ್ತಿದೆ.

ಕಾರಿಗಾಗಿ ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ಆರೋಪಿ ಮೇಲೆ ಫೈರಿಂಗ್ ಕಾರಿಗಾಗಿ ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ಆರೋಪಿ ಮೇಲೆ ಫೈರಿಂಗ್

ಲೈವ್ ಬ್ಯಾಂಡ್‌ನಲ್ಲಿ ವಶಕ್ಕೆ ಪಡೆದ ಯುವತಿಯರಲ್ಲಿ ಹಲವರು ಹೊರ ರಾಜ್ಯದವರಾಗಿದ್ದಾರೆ. ದಾಳಿ ವೇಳೆ ಐದು ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. ಲೈವ್ ಬ್ಯಾಂಡ್ ಮಾಲೀಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

CCB police attacked rowdy sheeter Kunigal Ravi, he escaped cinematicly

ಮಂಡ್ಯದಿಂದ 16 ಮಂದಿ ರೌಡಿಶೀಟರ್‌ಗಳ ಗಡಿಪಾರುಮಂಡ್ಯದಿಂದ 16 ಮಂದಿ ರೌಡಿಶೀಟರ್‌ಗಳ ಗಡಿಪಾರು

ರೌಡಿ ಶೀಟರ್‌ ಕುಣಿಗಲ್ ರವಿಗೆ ಕೆಲವು ದಿನಗಳ ಹಿಂದೆಯಷ್ಟೆ ಸಿಸಿಬಿ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದರು. ಈ ಹಿಂದೆ ಆತನನ್ನು ಗೌರಿ ಹತ್ಯೆ ಪ್ರಕರಣದಲ್ಲೂ ವಿಚಾರಣೆಗೆ ಒಳಪಡಿಸಲಾಗಿತ್ತು, ಅಲ್ಲದೆ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಿಡುಗಡೆ ಆದಾಗ ತಾನು ಊರಿಗೆ ಹೋಗಿ ಕೃಷಿ ಮಾಡುತ್ತೇನೆ ಎಂದಿದ್ದ ರವಿ ಮತ್ತೆ ಪಾತಕ ಲೋಕದಲ್ಲಿಯೇ ಮುಂದುವರೆದಿದ್ದ.

English summary
CCB police yesterday night raid on pub in residence road in search of rowdy sheeter Kunigal Ravi. He saw CCB police attacked building, he jumped to another building and escaped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X