ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಷಾರಾಮಿ ಕಾರಿನಲ್ಲಿ ಬಂದು ಹೈಟೆಕ್ ಕಳ್ಳತನ ಮಾಡುತ್ತಿದ್ದ ಜಂಗ್ಲಿ ಸೆರೆ

|
Google Oneindia Kannada News

ಬೆಂಗಳೂರು, ಜೂನ್. 30: ಇವನನ್ನು ಶೋಕಿಲಾಲ ಅನ್ನಬೇಕೋ, ರಿಯಲ್ ರೋಮಿಯೋ ಅನ್ನಬೇಕು ಪೊಲೀಸರಿಗೆ ಗೊತ್ತಾಗುತ್ತಿಲ್ಲ. ಇಡೀ ಜೀವನವನ್ನೇ ಕಳ್ಳತನಕ್ಕೆ ಮುಡಿಪಾಗಿಟ್ಟಿದ್ದ. ಎಲ್ಲವೂ ಮಾಡಿದ್ದು ಆನು ಪ್ರೀತಿಸುತ್ತಿದ್ದ ಲವ್ವರ್ ಗಾಗಿ ಮಾತ್ರ ಅಷ್ಟೇ !

ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಐಷಾರಾಮಿ ಕಳ್ಳ ಬಸವರಾಜ್ ಅಲಿಯಾಸ್ ಜಗ್ಲಿಯ ರೋಚಕನ ಕಹಾನಿ. ಈತನೊಬ್ಬ ನಟೋರಿಯಸ್ ಕಳ್ಳ. ನಗರದಲ್ಲಿ ವಿಪರೀತ ಹಾವಳಿ ಇಟ್ಟಿದ್ದ. ಕಾರು ಎತ್ತಿಕೊಂಡು ಫೀಲ್ಡ್ ಗೆ ಇಳಿದಿರೆ ಒಂದಲ್ಲಾ ಒಂದು ಮನೆಯ ಲಾಕ್ ಮುರಿದು ದೋಚುತ್ತಿದ್ದ. ಸತತ ಎಂಟು ವರ್ಷದಿಂದ ಕಳ್ಳತನ ಮಾಡಿ ಐಶರಾಮಿ ಜೀವನ ಮಾಡುತ್ತಿದ್ದ ಕಳ್ಳ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಈತನಿಂದ 80 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ. ಚಿನ್ನ ಹಾಗೂ ಎರಡೂ ಕಾರು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಇನ್‌ಸ್ಪೆಕ್ಟರ್ ಹಜರೇಶ್ ಮತ್ತು ತಂಡ ಜಂಗ್ಲಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ.

CCB police arrests Basavaraj, the thief who started stealing to fund his luxurious life

ದಶಕದಿಂದ ಕಳ್ಳತನ: ವಿಪರೀತ ಶೋಕಿಲಾಲನಾಗಿದ್ದ 2013 ರಲ್ಲಿ ಒಂದು ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಜಂಗ್ಲಿ ಮದುವೆಗೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಇಬ್ಬರೂ ಮದುವೆಯಾಗಿದ್ದರು. ನಿನ್ನನ್ನು ರಾಯಲ್ ಆಗಿ ಸಾಕ್ತೀನಿ ಎಂದಿದ್ದ ಜಂಗ್ಲಿ ತನ್ನ ಲವ್ವರ್ ಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮೈತುಂಬಾ ಸಾಲ ಮಾಡಿಕೊಂಡಿದ್ದ.

ಮಾಡಿದ್ದ ಸಾಲ ತೀರಿಸಲು ಮೊದಲು ಸಣ್ಣಪುಟ್ಟ ಕಳ್ಳತನಕ್ಕೆ ಇಳಿದಿದ್ದ. ಪೊಲೀಸರ ಕೈಗೆ ಸಿಗುತ್ತಿರಲಿಲ್ಲ. ಕೊನೆಗೆ ಇದನ್ನೇ ಮುಂದುವರೆಸಿದ. ಮೊದಲು ಕುಟುಂಬ ನಿರ್ವಹಣೆಗೆ ಕದಿಯುತ್ತಿದ್ದವನು ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರು. ಅನಂತರ ಅಂತರ ರಾಜ್ಯ ಕಳ್ಳನಾಗಿ ಪರಿವರ್ತನೆಯಾದ.

CCB police arrests Basavaraj, the thief who started stealing to fund his luxurious life

ಕಾರಿನಲ್ಲೇ ಬಂದು ಕಳ್ಳತನ :
ಬಿಡದಿ ,ವಿಜಯನಗರ ,ಕೊಡಿಗೇಹಳ್ಳಿ ಸೇರಿದಂತೆ ನಗರದ ಒಟ್ಟು 11 ಕಡೆ ಕಳ್ಳತನ ಮಾಡಿದ್ದ. ಈತನ ಕದಿಯುವ ಸಂದರ್ಭದಲ್ಲಿ ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ. ಪೊಲೀಸರು ನೆಟ್ವರ್ಕ್ ಬೇಸ್ ಮೇಲೆ ಫಾಲೋ ಮಾಡಬಹುದೇನೋ ಎಂಬ ಆತಂಕದಲ್ಲಿ ಒಂದು ಕಡೆ ಕಳ್ಳತನ ಮಾಡಿದ್ರೆ ತಪ್ಪಿಸಿಕೊಳ್ಳೊದಕ್ಕೆ ಊರೆಲ್ಲಾ ತಿರುಗಿ ಪೊಲೀಸರಿಗೆ ದಾರಿ ತಪ್ಪಿಸುತ್ತಿದ್ದ. ಇನ್ನು ಐಶರಾಮಿ ಕಾರಿನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ. ಬೇರೆಯವರ ಹೆಸರಿನಲ್ಲಿ ಖರೀದಿಸಿ ಸಾಕ್ಷಿಯೇ ಸಿಗದ ರೀತಿಯಲ್ಲಿ ಮಾಡುತ್ತಿದ್ದ.

ಹೊಸ ಕಾರಿನಲ್ಲಿ ಬಂದು ಕದಿಯುತ್ತಿದ್ದರಿಂದ ಈತನ ಕಾರನ್ನು ಯಾರೂ ಮುಟ್ಟುತ್ತಿರಲಿಲ್ಲ. ಹೀಗೆ ಬೆಂಗಳೂರಿನಲ್ಲಿ ಅಪರಾಧ ಕೃತ್ಯ ಎಸಗಿ ಹೈದರಾಬಾದ್ ಗೆ ಪರಾರಿಯಾಗುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಹೆಬ್ಬಾಳದ ಬಳಿ ಚೇಸಿಂಗ್ ಮಾಡಿ ಬಂಧಿಸಿದ್ದಾರೆ.

Recommended Video

Kumaraswamy ಸಿಎಂ ಆಗ್ತಾರೆ ಅಂತ ಯಾರಿಗೂ ಗೊತ್ತಿರ್ಲಿಲ್ಲ | Devegowda | Oneindia Kannada

ಬಂಧಿತನಿಂದ ಎರಡು ಕಾರು ಮತ್ತು 80 ಕೆ.ಜಿ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈತ ಹೈದರಾಬಾದ್ ನಲ್ಲಿ ಇಟ್ಟಿರುವ ಕಾರುಗಳನ್ನು ಜಪ್ತಿ ಮಾಡಲು ಮುಂದಾಗಿದ್ದಾರೆ. ಅಂತೂ ಒಂದು ದಶಕದಿಂದ ಕಳ್ಳತನ ಮಾಡಿದ್ದ ಜಂಗ್ಲಿ ಇದೀಗ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

English summary
CCB police arrests Basavaraj alias Jugli, the thief who started stealing to fund his luxurious life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X