• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಟ್ ಕಾಯಿನ್ ಮೂಲಕ ಡ್ರಗ್ ವ್ಯವಹಾರ ಮಾಡುತ್ತಿದ್ದ ಗ್ಯಾಂಗ್ ಅಂದರ್

|
Google Oneindia Kannada News

ಬೆಂಗಳೂರು, ಮೇ. 29: ಲಾಕ್ ಡೌನ್ ನಿಯಮ ಜಾರಿಯಿಂದ ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಗೆ ಬೆಂಗಳೂರಿನಲ್ಲಿ ಭಾರೀ ಬೇಡಿಕೆ. ಇದನ್ನೇ ಬಂಡವಾಳ ಮಾಡಿಕೊಂಡು ಡಾರ್ಕ್ ವೆಬ್ ತಾಣದಲ್ಲಿ ಬಿಟ್ ಕಾಯಿನ್ ಮೂಲಕ ಮಾದಕ ವಸ್ತು ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 35 ಲಕ್ಷ ರೂ. ಮೌಲ್ಯದ ಎಂಡಿಎಂಎ ಎಕ್ಸೆಟೆಸಿ ಪಿಲ್, ಎಲ್ಎಸ್ ಡಿ ಸ್ಟ್ರಿಪ್ಸ್ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕೇರಳ ಮೂಲದ ಆದಿತ್ಯನ್, ಪಿ.ಬಿ, ಅಖಲ್ ಹಾಗೂ ನೈಜೀರಿಯಾ ಮೂಲದ ಜಾನ್ ಚುಕ್ವಾ ಬೆಂಗಳೂರಿನ ಅನಿಕೇತ್, ಡೊಮನಿಕ್ ಪೌಲ್ ,ಶೆರವಿನ್ ಸುಪ್ರೀತ್ ಬಂಧಿತರು. ಇವರಿಂದ 400 ಎಂಡಿಎಂಎ ಎಕ್ಸ್ ಟೆಸಿ ಮಾತ್ರೆ, 76 ಎಲ್ ಎಸ್ ಡಿ ಪೇಪರ್ ಬ್ಲಾಕ್ ಗಳು ಆರು ಮೊಬೈಲ್, ಹೊಂಡಾ ಸಿಟಿ ಕಾರು ವಶಪಡಿಸಿಕೊಳ್ಳಲಾಗಿದೆ.

ಕೋವಿಡ್ 19 ಲಾಕ್ ಡೌನ್ ನಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತುಗಳಿಗೆ ಬಹು ಬೇಡಿಕೆ ಶುರುವಾಗಿದೆ. ಟಾರ್ ಬ್ರೌಸರ್ ಹಾಗೂ ಡ್ರೀಡ್ ಜಾಲ ತಾಣದ ಮೂಲಕ ಮಾಹಿತಿ ಪಡೆದು ನಾನಾ ಆಪ್‌ ಗಳಲ್ಲಿ ಬಿಟ್ ಕಾಯಿನ್ ಮೂಲಕ ಡ್ರಗ್ ಖರೀದಿ ಮಾಡಿದ್ದರು. ಇದನ್ನು ಅಂತಾರಾಷ್ಟ್ರೀಯ ಕೊರಿಯರ್ ಮೂಲಕ ಬೆಂಗಳೂರಿಗೆ ತರಿಸಿದ್ದರು. ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ಅವಧಿಯಲ್ಲಿ ಸಾರ್ವಜನಿಕ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದು, ಈ ಸಮಯದಲ್ಲಿ ಡ್ರಗ್ ನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ಈ ಮಾದಕ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ ಹಣ ಮಾಡುತ್ತಿದ್ದರು.

   ಬೆಡ್ ರೂಮಿನ ಅಸಲಿ ಕಹಾನಿ ಬಿಚ್ಚಿಟ್ಟ Ramesh jarakiholi! | Oneindia Kannada

   ಅಂತಾರಾಷ್ಟ್ರೀಯ ಕೊರಿಯರ್ ಮೂಲಕ ಡ್ರಗ್ ತರಿಸಿದ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರು ಮಂದಿ ಡ್ರಗ್ ಪೆಡ್ಲರ್ ಗಳನ್ನು ಕಾಡುಗೋಡಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿಯೇ ಕೇಸು ದಾಖಲಿಸಿದ್ದಾರೆ.

   English summary
   CCB police busted Bitcoin drug racket in Bengaluru: CCB police have been arrested six drug peddlers in Bengaluru and seized 35 lakh worth Drug.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X