ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು: ಹೈಟೆಕ್ ಗಾಂಜಾ 'ಕೃಷಿಕ' ಪೊಲೀಸರ ಬಲೆಗೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 13: ಕೃಷಿಯಲ್ಲಿ ತಂತ್ರಜ್ಞಾನ ತರಬೇಕು ಎಂಬುದು ಸರ್ಕಾರ, ಕೃಷಿ ವಿವಿಗಳ ಬಹುಕಾಲದ ಆಂಬೋಣ. ಆದರೆ ಬೆಂಗಳೂರಿನಲ್ಲೊಬ್ಬ ತಂತ್ರಜ್ಞಾನ, ವಿಜ್ಞಾನ ಬಳಸಿಕೊಂಡು ಹೈಕೆಟ್ ಮಾದರಿಯಲ್ಲಿ ಗಾಂಜಾ ಬೆಳೆದಿದ್ದಾನೆ.

ಕೆಂಗೇರಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದ ಅಮರ್ತ್ಯ ರಿಷಿ ಎಂಬ ಬಿಬಿಎಂ ವಿದ್ಯಾರ್ಥಿ ಭಾರಿ ಹೈಟೆಕ್ ಆಗಿ ಗಾಂಜಾ ಬೆಳೆದಿದ್ದಾನೆ.

ಬೆಂಗಳೂರು: ಕೋಟ್ಯಂತರ ಮೌಲ್ಯದ ಮಾದಕ ವಸ್ತು ವಶ, ಭಾರಿ ಜಾಲ ಪತ್ತೆಬೆಂಗಳೂರು: ಕೋಟ್ಯಂತರ ಮೌಲ್ಯದ ಮಾದಕ ವಸ್ತು ವಶ, ಭಾರಿ ಜಾಲ ಪತ್ತೆ

ಇಂಟರ್ನೆಟ್ ಬಳಕೆಯಲ್ಲಿ ಪಳಗಿದ್ದ ಅಮರ್ತ್ಯ ರಿಷಿ ಡಾರ್ಕ್ ವೆಬ್ ಮೂಲಕ ನೆದರ್ಲ್ಯಾಂಡ್‌ ನಿಂದ ಹೈಬ್ರಿಡ್ ಗಾಂಜಾ ಬೀಜ ತರಿಸಿಕೊಂಡು. ಅದನ್ನು ಒಳಾಂಗಣದಲ್ಲಿ ಬೆಳೆಯುವ ವಿಧಾನ ಕಲಿತು, 'ಕೃಷಿ' ಶುರು ಮಾಡಿದ್ದ.

CCB Police Arrest BBM Student In Drug Peddling Case

ಒಂದು ಗಾಂಜಾ ಬೀಜಕ್ಕೆ ನಾಲ್ಕು ಸಾವಿರ ನೀಡಿ ನೆದರ್ಲ್ಯಾಂಡ್‌ನಿಂದ ಹಲವು ಗಾಂಜಾ ಬೀಜಗಳನ್ನು ತರಿಸಿಕೊಂಡಿದ್ದ. ಅವುಗಳನ್ನು ಹೂಕುಂಡದಲ್ಲಿ ಕೃತಕ ಬೆಳಕು, ಕೃತಕ ಶಾಖ ನೀಡಿ ಬೆಳೆಯುತ್ತಿದ್ದ.

ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಅಧಿಕಾರಿಗಳು ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿ ಅಮರ್ತ್ಯ ರಿಷಿ ಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಎಲ್‌ಎಸ್‌ಡಿ ಡ್ರಗ್, ಕ್ಯಾನಾಬಿಲ್ ಡ್ರಗ್‌ ಮತ್ತು ಮೂರು ಮೊಬೈಲ್ ಫೋನ್ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

CCB Police Arrest BBM Student In Drug Peddling Case

ಕೆಲವು ದಿನಗಳ ಹಿಂದಷ್ಟೆ ಡಾರ್ಕ್‌ವೆಬ್ ಮೂಲಕ ಆಫ್ರಿಕಾ ರಾಷ್ಟ್ರಗಳಿಂದ ದುಬಾರಿ ಮೌಲ್ಯದ ಮಾದಕ ವಸ್ತುವನ್ನು ಅಮೆಜಾನ್‌ ಪ್ಯಾಕ್‌ಗಳಲ್ಲಿ ತರಿಸಿಕೊಂಡು ಬೆಂಗಳೂರು, ತುಮಕೂರು ಇನ್ನತರೆ ಕಡೆ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.

ಡಾರ್ಕ್‌ವೆಬ್ ಮೂಲಕ ಮಾದಕ ವಸ್ತುವನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿರುವವರ ಸಂಖ್ಯೆ ನಗರದಲ್ಲಿ ಇತ್ತೀಚೆಗೆ ಹೆಚ್ಚಾಗಿದೆ.

English summary
CCB police arrest a BBM student in Bengaluru who cultivating Marijuvana through high technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X