ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಕಳ್ಳರಿಂದ 515 ಸ್ಮಾರ್ಟ್‌ಫೋನ್‌ ವಶಪಡಿಸಿಕೊಂಡ ಸಿಸಿಬಿ ಪೊಲೀಸ್

|
Google Oneindia Kannada News

ಬೆಂಗಳೂರು, ಆಗಸ್ಟ್ 11: ಮೊಬೈಲ್ ಮೊಬೈಲ್ ಮೊಬೈಲ್ ಯಾರಿಗೆ ಬೇಡ ಹೇಳಿ ಮೊಬೈಲ್. ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಬ್ಬರಿಗೂ ಬೇಕಿದೆ ಮೊಬೈಲ್. ಸ್ಮಾರ್ಟ್‌ ಫೋನ್ ಬಂದ ಮೇಲಂತೂ ಮೊಬೈಲ್ ವ್ಯಕ್ತಿ ಸಂಬಂಧಗಳಿಗಿಂತ ಮೊಬೈಲ್ ಆತ್ಮೀಯವಾಗಿ ಬಿಟ್ಟಿದೆ. ಅದಕ್ಕೆ ಕಳ್ಳ ಖದೀಮರು ಮೊಬೈಲ್ ಅನ್ನು ಕದಿಯೋದನ್ನೇ ಚಾಳಿ ಮಾಡಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ಮೊಬೈಲ್ ಕಳ್ಳತನ ಮಾಡುತ್ತಿದ್ದ ಬೃಹತ್ ಜಾಲವನ್ನು ಬಲೆಗೆ ಕೆಡವಿ 78 ಲಕ್ಷದ ಮೌಲ್ಯದ ಮೊಬೈಲ್‌ಗಳನ್ನು ರಿಕವರಿ ಮಾಡಿದ್ದಾರೆ.

ಸಿಸಿಬಿ ಅಧಿಕಾರಿಗಳು ಭರ್ಜರಿಯಾದ ಕಾರ್ಯಾಚರಣೆ ಮಾಡಿದ್ದಾರೆ. ‌ಮೊಬೈಲ್ ಕಳ್ಳತನ ಹೆಚ್ಚಾಗುತ್ತಿದ್ದಂತೆ ಮೊಬೈಲ್ ಸ್ನ್ಯಾಚರ್ಸ್ ಬೆನ್ನು ಬಿದ್ದ ಸಿಸಿಬಿ, ಇಬ್ಬರನ್ನು ಬಂಧಿಸಿ 515 ಮೊಬೈಲ್ ಗಳನ್ನ ವಶಕ್ಕೆ ಪಡೆದಿದ್ದಾರೆ. 78 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ರಿಕವರಿ ಮಾಡಲಾಗಿದೆ.

CCB officers Arrested 2 mobile snatchers and they 78 lakhs worth 515 mobiles recovered

ಅಫ್ಜಲ್ ಪಾಷಾ ಹಾಗು ಇಝಾರ್ ಎಂಬಿಬ್ಬರನ್ನು ಬಂಧಿಸಿರುವ ಪೊಲೀಸರು ಮೊಬೈಲ್ ಕಳ್ಳತನದ ಕೃತ್ಯಗಳ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಇಬ್ಬರು ಆರೋಪಿಗಳು ನಗರದಲ್ಲಿ ಮೊಬೈಲ್ ಗಳನ್ನ ದೋಚಿ ನಂತರ ಅದನ್ನ ಹೈದರಾಬಾದ್ ,ಮುಂಬೈ ಸೇರಿದಂತೆ ಹಲವೆಡೆ ಮಾರಾಟ ಮಾಡ್ತಿದ್ದರು. ಇನ್ನು ರೀಸೀವ್ ಮಾಡಿಕೊಂಡ ವ್ಯಕ್ತಿಗಳ ಅದನ್ನು ಸ್ಪೇರ್ ಪಾರ್ಟ್ ನ್ನಾಗಿ ಪರಿವರ್ತನೆ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

CCB officers Arrested 2 mobile snatchers and they 78 lakhs worth 515 mobiles recovered

ನಿರ್ಜನ ಪ್ರದೇಶದಲ್ಲಿ ಓಡಾಡುವವರೇ ಟಾರ್ಗೇಟ್

ನಿರ್ಜನ ಪ್ರದೇಶದಲ್ಲಿ ಓಡಾಡುವ ವ್ಯಕ್ತಿಗಳನ್ನೇ ಟಾರ್ಗೇಟ್ ಮಾಡುವ ಆರೋಪಿಗಳು ಅವರ ಮೊಬೈಲ್ ಗಳನ್ನ ಕಸಿಯುತ್ತಿದ್ದರು, ಅವರೇನಾದರೂ ವಿರೋಧ ವ್ಯಕ್ತಪಡಿಸಿದರೆ ಅವರ ಮೇಲೆಯೇ ಹಲ್ಲೆ ನಡೆಸುತ್ತಿದ್ದರು. ಇವರಿಬ್ಬರೇ ಅಲ್ಲ ಇಲ್ಲಿನ ಏಳೆಂಟು ಜನ ಹುಡುಗರ ಗ್ಯಾಂಗ್ ನೊಂದಿಗೆ ಕಾರ್ಯಾಚರಣೆಗೆ ಇಳಿದು ಮೊಬೈಲ್ ದೋಚುತ್ತಿದ್ದರು ಎನ್ನಲಾಗಿದೆ. ಚಾಮರಾಜಪೇಟೆ ,ಉಪ್ಪಾರಪೇಟೆ, ಮಾಗಡಿ ರಸ್ತೆ ,ವೈಟ್ ಫೀಲ್ಡ್ ಸೇರಿದಂತೆ ಬಹುತೇಕ ಕಡೆ ಇವರ ಮೇಲೆ ಪ್ರಕರಣಗಳಿವೆ ‌ ಇನ್ನು ಇದೇ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ , ಬಹುತೇಕ‌ಜನರು ಮೊಬೈಲ್ ಕಳ್ಳತನವಾದರೆ ದೂರನ್ನ ನೀಡೋದಿಲ್ಲ .ಈಗ ನಮಗೆ 515 ಮೊಬೈಲ್ ಸಿಕ್ಕಿದೆ ಆದರೆ 300 ರ ಆಸುಪಾಸಿನ ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿದೆ .ಹೀಗಾಗಿ ದೂರು ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.

English summary
CCB officials have done a great job. As the number of mobile phone thefts increased, CCB caught the back of mobile snatchers and arrested two persons and seized 515 mobile phones. Mobiles worth 78 lakhs have been recovered,Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X