ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡುಂಜೋ, ಸ್ವಿಗ್ಗಿ ಹೆಸರಿನಲ್ಲಿ ಮಾದಕ ವಸ್ತು ಮನೆ ಬಾಗಿಲಿಗೆ ರವಾನೆ

|
Google Oneindia Kannada News

ಬೆಂಗಳೂರು, ಅ. 22: ಡ್ರಗ್ ಪೆಡ್ಲರ್‌ಗಳ ವಿರುದ್ಧ ಬೆಂಗಳೂರು ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಪೊಲೀಸರ ಕಣ್ಣು ತಪ್ಪಿಸಿ ವಕೀಲರಿಗೆ ಪಾರ್ಸಲ್ ರವಾನಿಸುವ ಸೋಗಿನಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದ ಹೊಸ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಸ್ವಿಗ್ಗಿ ಡೆಲಿವರಿ ಜಾಕೆಟ್ ಧರಿಸಿ ಮನೆ ಬಾಗಿಲಿಗೆ ಡ್ರಗ್ ರವಾನೆ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರವಿ ಪ್ರಕಾಶ್ ಮತ್ತು ರವಿ ಬಂಧಿತ ಅರೋಪಿಗಳು. ಇವರಿಂದ 60 ಲಕ್ಷ ರೂ. ಮೌಲ್ಯದ ಹ್ಯಾಷಿಶ್ ಆಯಿಲ್, ಎಂಡಿಎಂಎ, ಎಲ್ ಎಸ್ ಡಿ, ಎಕ್ಸಟೆಸಿ ಪಿಲ್ಸ್, ಚರಸ್ ಹಾಗೂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ದೆಹಲಿಯಲ್ಲಿ ಕೂತಿರುವ ಡ್ರಗ್ ಪೆಡ್ಲರ್‌ಗಳು ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದರು. ದೆಹಲಿಯಿಂದ ಮಾದಕ ವಸ್ತುಗಳನ್ನು ವಕೀಲರ ಹೆಸರಿನಲ್ಲಿ ಇನ್ನೊಬ್ಬ ಹೆಸರಿನ ವಕೀಲರಿಗೆ ರವಾನಿಸುವ ಸೋಗಿನಲ್ಲಿ ಕೊರಿಯರ್ ಮಾಡುತ್ತಿದ್ದರು. ಇಲ್ಲಿ ವಕೀಲರ ಹೆಸರಿಗೆ ಬರುವ ಕೊರಿಯರ್ ಸ್ವೀಕರಿಸುತ್ತಿದ್ದ ಪೆಡ್ಲರ್‌ಗಳು ಸ್ವಿಗ್ಗಿ ಆಹಾರ ಪೂರೈಕೆ ಆಪ್‌ನ ಜಾಕೆಟ್ ಧರಿಸಿ ಐಟಿ ಉದ್ಯೋಗಿಗಳಿಗೆ ರವಾನಿಸುತ್ತಿದ್ದರು.

 ದೆಹಲಿಯಿಂದ ಬೆಂಗಳೂರಿಗೆ ಸಾಗಣೆ

ದೆಹಲಿಯಿಂದ ಬೆಂಗಳೂರಿಗೆ ಸಾಗಣೆ

ಈ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ರವಿ ಹಾಗೂ ರವಿ ಪ್ರಕಾಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರೊಂದಿಗೆ ಸಂಪರ್ಕದಲ್ಲಿದ್ದ ಇತರೆ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ವಕೀಲರ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಮಾಡಿ ಮಾದಕ ವಸ್ತುಗಳನ್ನು ದೆಹಲಿಯಿಂದ ಬೆಂಗಳೂರಿಗೆ ಸಾಗಣೆ ಮಾಡಿ ಪೂರೈಸುತ್ತಿದ್ದ ಜಾಲದ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಅದರ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದೇವೆ. ಬಂಧಿತರಿಂದ 60 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ಜಾರ್ಖಂಡ್ ಮೂಲದ ಬಂಧಿತರು

ಜಾರ್ಖಂಡ್ ಮೂಲದ ಬಂಧಿತರು

ಬಂಧಿತ ಆರೋಪಿಗಳಿಬ್ಬರೂ ಜಾರ್ಖಂಡ್ ಮೂಲದವರು. ಬೆಳ್ಳಂದೂರಿನ ಪಿಜಿಯಲ್ಲಿ ವಾಸವಾಗಿದ್ದರು. ದೆಹಲಿಯ ಡ್ರಗ್ ಪೆಡ್ಲರ್ ಜತೆ ಸಂಪರ್ಕ ಹೊಂದಿದ್ದ ಇಬ್ಬರು ವ್ಯಕ್ತಿಗಳು ಬೆಂಗಳೂರಿನಲ್ಲಿ ಡ್ರಗ್ ಪೂರೈಕೆ ಮಾಡುತ್ತಿದ್ದರು. ದೆಹಲಿಯಲ್ಲಿರುವ ಡ್ರಗ್ ಪೆಡ್ಲರ್ ಡಾರ್ಕ್ ವೆಬ್ ತಾಣದಿಂದ ಮಾದಕ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ. ಹೀಗೆ ಹೊಸ ಸಂಪರ್ಕ ಜಾಲ ರೂಪಿಸಿ ಪೊಲೀಸರ ಕೈಗೆ ಸಿಗದಂತೆ ಡ್ರಗ್ ಮಾರಾಟ ಮಾಡುತ್ತಿದ್ದರು.

 APP ಮೂಲಕವೇ ಆರ್ಡರ್

APP ಮೂಲಕವೇ ಆರ್ಡರ್

APPನಲ್ಲೇ ಆರ್ಡರ್: WICKR ME, VoIP, Session ಎಂಬ ಆಪ್‌ ಗಳನ್ನು ಬಳಸಿ ಗ್ರಾಹಕರ ಜತೆ ಸಂವಹನ ಮಾಡಿ ಮಾದಕ ವ್ಯಸನಿಗಳ ಸಂಪರ್ಕ ಸಾಧಿಸುತ್ತಿದ್ದರು. ಆಧುನಿಕ ತಂತ್ರಜ್ಞಾನ ಬಳಿಸಿ ಮಾದಕ ವಸ್ತು ವಹಿವಾಟು ನಡೆಸುತ್ತಿದ್ದ ಆರೋಪಿಗಳ ಸುಳಿವು ಮಾದಕ ವಸ್ತು ಖರೀದಿದಾರರಿಗೂ ತಿಳಿಯದಂತೆ ತಂತ್ರಜ್ಞಾನ ಬಳಕೆ ಮಾಡುತ್ತಿದ್ದರು. ದೆಹಲಿ ಮೂಲದ ವ್ಯಕ್ತಿಯ ಜತೆ ನಿರಂತರ ಸಂಪರ್ಕ ಸಾಧಿಸಿ ವಕೀಲರಿಗೆ ಹುಟ್ಟು ಹಬ್ಬದ ಉಡುಗೊರೆ ರವಾನಿಸುವ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಮಾದಕ ವಸ್ತು ತರಿಸಿಕೊಂಡು, ಡುಂಜೋ, ಸ್ವಿಗ್ಗಿ ಮತ್ತಿತರ ಆಪ್‌ಗಳನ್ನು ಬಳಿಸಿ ಗ್ರಾಹಕರಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹೊಸ ರೀತಿಯ ಡ್ರಗ್ ಮಾರಾಟ ಜಾಲದಲ್ಲಿ ಶಾಮೀಲಾಗಿರುವ ಪೆಡ್ಲರ್‌ಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಜನ ಸಾಮಾನ್ಯರ ಅರಿವಿಗೆ ಬಾರದಂತೆ ಡ್ರಗ್ ಮಾರಾಟ ಮಾಡುವ ಜಾಲವನ್ನು ಪತ್ತೆ ಮಾಡಿದ ಸಿಸಿಬಿ ವಿಭಾಗದ ಎಸಿಪಿ ಕೆ.ಸಿ. ಗೌತಮ್ ಮತ್ತು ಪೊಲೀಸರ ತಂಡಕ್ಕೆ 50 ಸಾವಿರ ನಗದು ಬಹುಮಾನ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಶ್ಲಾಘಿಸಿದ್ದಾರೆ.

Recommended Video

ಛೇ!!ಟೀಮ್ ಇಂಡಿಯಾ ಸೋತಿದ್ದಕ್ಕೆ ಪಾಕಿಸ್ತಾನ ಇಷ್ಟು ಕೆಳಮಟ್ಟಕ್ಕೆ ಇಳಿಬಾರ್ದಿತ್ತು | Oneindia Kannada
ಫಾರಿನ್ ಪೋಸ್ಟ್ ಬಗ್ಗೆ ನಿಗಾ

ಫಾರಿನ್ ಪೋಸ್ಟ್ ಬಗ್ಗೆ ನಿಗಾ

ಸಾಮಾನ್ಯವಾಗಿ ಡಾರ್ಕ್ ವೆಬ್ ತಾಣದ ಮೂಲಕ ಡ್ರಗ್ ಪೆಡ್ಲರ್‌ಗಳು ಮಾದಕ ವಸ್ತುಗಳನ್ನು ತರಿಸುತ್ತಿದ್ದರು. ವಿದೇಶಿ ಅಂಚೆ ಕಚೇರಿಗಳಲ್ಲಿ ಮಾದಕ ವಸ್ತು ಇರುವ ಬಗ್ಗೆ ಪ್ರತಿ ಕೊರಿಯರ್ ಮೇಲೂ ನಿಗಾ ಇಡಲಾಗುತ್ತದೆ. ಆದ್ದರಿಂದ ವಿದೇಶದಿಂದ ಕೊರಿಯರ್ ಬಂದಿರುವ ಬಗ್ಗೆ ವಿದೇಶಿ ಅಂಚೆ ಕಚೇರಿಯ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಹೀಗೆ ಅಂಚೆ ಮೂಲಕ ಬರುವ ವಿದೇಶಿ ಕೊರಿಯರ್‌ಗಳ ಮೇಲೆ ಪೊಲೀಸರು ನಿಗಾ ಇಡುತ್ತಾರೆ. ಆದರೆ, ಸ್ಪೀಡ್ ಪೋಸ್ಟ್ ಸೇರಿದಂತೆ ಇತರೆ ಸ್ಥಳೀಯ ಯಾವ ಪೋಸ್ಟ ಗಳ ಬಗ್ಗೆ ಪೊಲೀಸರಾಗಲೀ, ಸಿಸಿಬಿ ಅಧಿಕಾರಿಗಳಾಗಲೀ ತಲೆ ಕೆಡಿಸಿಕೊಳ್ಳುವುದಿಲ್ಲ. ಇದನ್ನು ಅರಿತಿರುವ ಪೊಲೀಸರು, ಸ್ಥಳೀಯವಾಗಿ ವಕೀಲರ ಹೆಸರಿನಲ್ಲಿ ಉಡುಗೊರೆ ರವಾನಿಸುವ ಹೆಸರಿನಲ್ಲಿ ಡ್ರಗ್ ಮಾರಾಟ ಜಾಲ ಹುಟ್ಟು ಹಾಕಿದ್ದರು. ಸಿಸಿಬಿ ಪೊಲೀಸರು ಈ ಜಾಲವನ್ನು ಕೂಡ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

English summary
The CCB said that a Swiggy delivery executive who was about to deliver a parcel was apprehended. Peddlers pretending to be agents of Swiggy delivered drugs in Bengaluru. 2 arrested. Rs 60 lakh worth drugs seized. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X