ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಬಿಡೆಂಟ್ ವಿರುದ್ಧ 4,800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಆಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 4,800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಸಿಸಿಬಿ ಪೊಲೀಸರು 1 ನೇ ಸಿಸಿಎಚ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು

2016ರಲ್ಲಿ ಆರೋಪಿಗಳಾದ ಸೈಯದ್ ಫರೀದ್ ಅಹಮದ್, ಸೈಯದ್ ಅಫಾಕ್ ಅಹಮದ್, ಇರ್ಫಾನ್ ಮಿರ್ಜಾ ಆಂಬಿಡೆಂಟ್ ಕಂಪನಿ ಆರಂಭಿಸಿ ಹೆಚ್ಚಿನ ಬಡ್ಡಿ ಆಮಿಷ ಒಡ್ಡಿ 10,564 ಜನರಿಂದ 120 ಕೋಟಿ ರೂ ಸಂಗ್ರಹ ಮಾಡಿದ್ದರು.

ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

ಪ್ರಕರಣಗಳ ತನಿಖೆ ಕೈಗೊಂಡು ಆರೋಪಿಗಳಾದ ಇರ್ಫಾನ್ ಮಿರ್ಜಾ, ಮಾಜಿ ಸಚಿವ ಜನಾರ್ದನ ರೆಡ್ಡಿ, ಮೆಹಫೂಜ್ ಅಲಿ ಖಾನ್, ಬಳ್ಳಾರಿಯ ರಮೇಶ್, ಇನಾಯತ್ ಉಲ್ಲಾ ಮತ್ತು ಅಶ್ರಫ್ ಅಲಿ ಎಂಬುವವರನ್ನು ಬಂಧಿಸಲಾಗಿತ್ತು. ಎಲ್ಲ ಆರೋಪಿಗಳು ಜಾಮೀನು ಪಡೆದಿದ್ದಾರೆ.

CCB files chargesheet against ambident fraud case

ಆಂಬಿಡೆಂಟ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಸಹಾಯ ಮಾಡುವುದಾಗಿ ಆರೋಪಿ ಸೈಯದ್ ಫರೀದ್ ನಿಂದ ಜನಾರ್ದನ ರೆಡ್ಡಿ 18 ಕೆಜಿ ಚಿನ್ನ ಪಡೆದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ತನಿಖೆ ವೇಳೆ ಸಾಕ್ಷ್ಯಾಧಾರ ಸಂಗ್ರಹಿಸಿ 4,800 ಪುಟಗಳ 12 ಸಂಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

English summary
CCB police chargesheet against Ambident group and other accused in fraud case. But enforcement directorate link is not established.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X