ಜೂಜು ಅಡ್ಡೆ ದಾಳಿ : ಕಪಾಲಿ ಮೋಹನ್ ಗಾಗಿ ಪೊಲೀಸರಿಂದ ಶೋಧ
ಬೆಂಗಳೂರು, ಅಕ್ಟೋಬರ್ 15: ನಗರದ ಪ್ರತಿಷ್ಠಿತ ಹೊಟೆಲ್ ವೊಂದರಲ್ಲಿ ನಡೆದಿದ್ದ ವ್ಯವಸ್ಥಿತ ಜೂಜಾಟ ಜಾಲವನ್ನು ಪತ್ತೆ ಹಚ್ಚಿದ್ದ ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರು, ಮುಖ್ಯ ಆರೋಪಿ ಉದ್ಯಮಿ, ಫೈನಾನ್ಶಿಯರ್ ಕಪಾಲಿ ಮೋಹನ್ ಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.
ಉದ್ಯಮಿ ಕಪಾಲಿ ಮೋಹನ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ
ಕಪಾಲಿ ಮೋಹನ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಆರೋಪಿಗಾಗಿ ವಿವಿಧೆಡೆ ವಿಚಾರಣೆ ನಡೆಸಿದ್ದಾರೆ.
ಯಶವಂತಪುರದಲ್ಲಿರುವ ಆರ್ . ಜಿ ಹೋಟೆಲ್ ಮೇಲೆ ಭಾನುವಾರದಂದು ಸಿಸಿಬಿ ಹಿರಿಯ ಅಧಿಕಾರಿ ಗಿರೀಶ್ ನೇತೃತ್ವದ ತಂಡವು ದಾಳಿ ನಡೆಸಿತ್ತು. ನಂತರ ಕಪಾಲಿ ಮೋಹನ್ ಮನೆ ಮೇಲೆ ದಾಳಿ ನಡೆಸಿದ್ದರು. ಆದರೆ, ದಾಳಿ ಸುಳಿವು ಪಡೆದಿದ್ದ ಮೋಹನ್, ಪರಾರಿಯಾಗಿದ್ದಾರೆ.
ಜೂಜಾಟವಾಡಲು ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಗಿರಾಕಿಗಳು ಬಂದಿದ್ದಾರೆ. ಅವರನ್ನು ವಿಮಾನದಿಂದ ಕರೆಸಿಕೊಂಡು ಟೋಕನ್ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಬೆಂಗಳೂರಲ್ಲಿ ರೌಡಿಗಳ ಬಳಿಕ ಬಡ್ಡಿಕುಳಗಳ ಹೆಡೆಮುರಿ ಕಟ್ಟಿದ ಸಿಸಿಬಿ
ಜೂಜಾಟದಲ್ಲಿ ಭಾಗಿಯಾಗಿದ್ದ 47 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, 3.5 ಕೋಟಿ ರು ಮೌಲ್ಯದ ಜೂಜಾಟದ ಟೋಕನ್,9.33ಲಕ್ಷ ರು ನಗದನ್ನು ಜಪ್ತಿ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.