ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಬಿಡೆಂಟ್ ಪ್ರಕರಣದಲ್ಲಿ ಅಲೋಕ್‌ಕುಮಾರ್‌ ಕರ್ತವ್ಯಲೋಪ ಎಸಗಿದ್ದಾರೆ: ರವಿಕೃಷ್ಣಾ ರೆಡ್ಡಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಆಂಬಿಡೆಂಟ್ ಪ್ರಕರಣದಲ್ಲಿ ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಅವರು ಉತ್ತಮವಾಗಿ ತನಿಖೆ ನಡೆಸಿದ್ದರೂ ಸಹ ಕೆಲವು ಕಡೆ ಗುರುತರವಾದ ಕರ್ತವ್ಯಲೋಪ ಎಸಗಿದ್ದಾರೆ ಎಂದು ಲಂಚಮುಕ್ತ ಕರ್ನಾಟಕದ ವೇದಿಕೆ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಅವರು, ಸಿಸಿಬಿ ಆಯಕ್ತ, ತನಿಖಾಧಿಕಾರಿ ಅಲೋಕ್ ಕುಮಾರ್‌ ಪ್ರಕರಣದ ತನಿಖೆ ವೇಳೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಅವರು ಹೇಳಿದರು.

ಆಂಬಿಡೆಂಟ್ ಪ್ರಕರಣ ಮುಚ್ಚಿ ಹಾಕಲು ಯತ್ನ: ರವಿಕೃಷ್ಣಾ ರೆಡ್ಡಿ ಆರೋಪ ಆಂಬಿಡೆಂಟ್ ಪ್ರಕರಣ ಮುಚ್ಚಿ ಹಾಕಲು ಯತ್ನ: ರವಿಕೃಷ್ಣಾ ರೆಡ್ಡಿ ಆರೋಪ

ಇಡಿ ತನಿಖೆಯಿಂದ ತಪ್ಪಿಸಲು ಜನಾರ್ಧನ ರೆಡ್ಡಿ ಅವರು ಲಂಚವನ್ನು ಆಂಬಿಡೆಂಟ್‌ ಸಂಸ್ಥೆ ಮಾಲೀಕರಿಂದ ಪಡೆದಿದ್ದರು ಎಂದು ತನಿಖೆ ವೇಳೆ ಗೊತ್ತಾದ ಮೇಲೆ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಕೇಸು ದಾಖಲಿಸದೆ ಆಂಬಿಡೆಂಟ್ ಪ್ರಕರಣದ ಆರನೇ ಆರೋಪಿ ಮಾಡಿರುವುದು ತಪ್ಪು ಎಂದು ಅವರು ಅಭಿಪ್ರಾಯಪಟ್ಟರು. ಇದರಿಂದ ರೆಡ್ಡಿಗೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಅನುಕೂಲವಾಯಿತು ಎಂದು ಅವರು ಹೇಳಿದರು.

ಮತದಾನದ ನಂತರ ಬಂಧಿಸಿದ್ದ ತಪ್ಪು

ಮತದಾನದ ನಂತರ ಬಂಧಿಸಿದ್ದ ತಪ್ಪು

ಉಪಚುನಾವಣೆಗೆ ಮುನ್ನವೇ ಸಾಕ್ಷ್ಯಗಳು ಸಿಕ್ಕಿದ್ದರೂ ಸಹ ಮತದಾನ ಮುಗಿದ ಮುಗಿದ ನಂತರ ಜನಾರ್ದನ ರೆಡ್ಡಿಯನ್ನು ಬಂಧಿಸಿದ್ದು ತಪ್ಪು. ಇದು ಸಹ ಕತ್ಯವ್ಯಲೋಪವೇ ಆಗಿದೆ. ಒಂದು ದಿನದಲ್ಲಿ ಆರೋಪಿ ಎಷ್ಟು ಸಾಕ್ಷ್ಯ ನಾಶ ಮಾಡಬಹುದು ಅಂತಹುದರಲ್ಲಿ ಮತದಾನ ಮುಗಿವವರೆಗೆ ಸಿಸಿಬಿ ಕಾಯ್ದಿದ್ದು ತನಿಖೆ ದೃಷ್ಠಿಯಿಂದ ಬಹು ದೊಡ್ಡ ಹಿನ್ನಡೆ ಎಂದು ಅವರು ಹೇಳಿದರು.

ಸಿಎಂಗೆ ಮಾಹಿತಿ ನೀಡುವ ಅಗತ್ಯ ಇರಲಿಲ್ಲ

ಸಿಎಂಗೆ ಮಾಹಿತಿ ನೀಡುವ ಅಗತ್ಯ ಇರಲಿಲ್ಲ

ಅಲೋಕ್‌ ಕುಮಾರ್ ಅವರು ಬೆಂಗಳೂರು ಸಿಟಿ ಕಮಿಷನರ್ ಸುನಿಲ್ ಕುಮಾರ್, ಐಜಿ ನೀಲಮಣಿ ರಾಜು, ಗೃಹಮಂತ್ರಿ ಪರಮೇಶ್ವರ್ ಅವರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡದೆ ನೇರವಾಗಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಪ್ರಕರಣದ ಮಾಹಿತಿ ಹಂಚಿಕೊಂಡಿರುವುದು ಸಹ ತಪ್ಪು ಇದು ಕರ್ತವ್ಯಲೋಪ ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು.

ಆಂಬಿಡೆಂಡ್ ಕಂಪನಿ ಹಗರಣದ ಆರೋಪಿಗಳ ವಿರುದ್ಧ ಫ್ರೆಶ್‌ ಕೇಸ್ಆಂಬಿಡೆಂಡ್ ಕಂಪನಿ ಹಗರಣದ ಆರೋಪಿಗಳ ವಿರುದ್ಧ ಫ್ರೆಶ್‌ ಕೇಸ್

ರಾಮಲಿಂಗಾ ರೆಡ್ಡಿ ಕೋನದಲ್ಲಿ ತನಿಖೆ ಮಾಡಿಲ್ಲ

ರಾಮಲಿಂಗಾ ರೆಡ್ಡಿ ಕೋನದಲ್ಲಿ ತನಿಖೆ ಮಾಡಿಲ್ಲ

ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದ ಅವಧಿಯಲ್ಲಿಯೇ ದೇವರಜೀವನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಂಬಿಡೆಂಟ್ ಕಂಪೆನಿ ವಿಚಾರವಾಗಿ ದೂರು ದಾಖಲಾಗಿತ್ತು. ಆದರೆ ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಮೌಖಿಕ ಆದೇಶದ ಮೇರೆಗೆ ತನಿಖೆ ಮಾಡಲಾಗಿರಲಿಲ್ಲ. ಅಲೋಕ್ ಕುಮಾರ್ ಅವರು ಆ ನಿಟ್ಟಿನಲ್ಲೂ ತನಿಖೆ ನಡೆಸ ಬೇಕಿದೆ. ಆದರೆ ಅವರು ಆ ಆಯಾಮದಲ್ಲಿ ತನಿಖೆ ನಡೆಸಿಲ್ಲ.

ಆಂಬಿಡೆಂಟ್ ಕಂಪಿನಿಯಿಂದ ಪಡೆದ ಹಣ ವಾಪಸ್ ನೀಡುವಂತೆ ನೋಟಿಸ್ ಆಂಬಿಡೆಂಟ್ ಕಂಪಿನಿಯಿಂದ ಪಡೆದ ಹಣ ವಾಪಸ್ ನೀಡುವಂತೆ ನೋಟಿಸ್

ಉತ್ತಮ ತನಿಖೆ ನಡುವೆ ಕೆಲವು ತಪ್ಪು

ಉತ್ತಮ ತನಿಖೆ ನಡುವೆ ಕೆಲವು ತಪ್ಪು

ಅಲೋಕ್ ಕುಮಾರ್ ಅವರು ಆಂಬಿಡೆಂಟ್ ಪ್ರಕರಣವನ್ನು ಉತ್ತಮವಾಗಿ ತನಿಖೆ ಮಾಡಿದ್ದಾರೆ ಆದರೆ ಜೊತೆಯಲ್ಲಿ ಕೆಲವು ತಪ್ಪುಗಳನ್ನೂ ಮಾಡಿದ್ದಾರೆ ಇದು ಒಟ್ಟಾರೆ ತನಿಖೆಯ ಮೇಲೆ ಪ್ರಭಾವ ಬೀರಿದೆ. ಮತ್ತು ತನಿಖೆಯ ಮೇಲೆ ಅನುಮಾನವನ್ನೂ ಮೂಡಿಸುತ್ತದೆ ಎಂದು ಅವರು ಹೇಳಿದರು.

500 ಕೋಟಿ ಆಸ್ತಿ ಒಡೆಯ ರೌಡಿ ಶೀಟರ್ ಮಿರ್ಲೆ ವರದರಾಜನ ಪೂರ್ಣ ಮಾಹಿತಿ

English summary
that activist leader Ravikrishna Reddy accused that CCB commissioner Alok Kumar delinquency in Ambident case investigation. He said he investigated well but did some mistakes that will cost the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X