ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀಸಾ ನಿಯಮ ಉಲ್ಲಂಘನೆ: 7 ವಿದೇಶಿಗರ ಬಂಧನ, ನಕಲಿ ನೋಟು ವಶ

|
Google Oneindia Kannada News

ಬೆಂಗಳೂರು, ಆಗಸ್ಟ್ 04: ವೀಸಾ ನಿಯಮ ಉಲ್ಲಂಘಸಿ ಅಕ್ರಮವಾಗಿ ವಾಸವಾಗಿದ್ದ ವಿದೇಶಿಗರ ಮನೆಗಳ ಮೇಲೆ ಬೆಂಗಳೂರು ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ಏಳು ಜನರನ್ನು ಬಂಧಿಸಿದ್ದಾರೆ.

ಹೆಣ್ಣೂರು, ಬಾಗಲೂರು, ಮತ್ತು ಕೊತ್ತನೂರು ಪ್ರದೇಶಗಳಲ್ಲಿ 20 ಮಂದಿ ಆಫ್ರಿಕಾದ ಪ್ರಜೆಗಳು ಕಾನೂನು ಬಾಹಿರವಾಗಿ ವಾಸವಿರುವುದು ಕಂಡು ಬಂದಿದ್ದು, ಅವರಿಂದ ಭಾರತ, ಅಮೇರಿಕ, ಮತ್ತು ಯುಕೆ ದೇಶಗಳ ನಕಲಿ ನೋಟುಗಳು ಹಾಗೂ ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ.

ಕ್ವಾರಂಟೈನ್‌ಗೆ ಒಳಗಾದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ಕ್ವಾರಂಟೈನ್‌ಗೆ ಒಳಗಾದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌

ಬೆಂಗಳೂರು ಅಪರಾಧ ವಿಭಾಗದ ಪೊಲೀಸರ ತಂಡವೂ 120 ಅಧಿಕಾರಿಗಳೊಂದಿಗೆ ಇಂದು ಮುಂಜಾನೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಹೆಣ್ಣೂರು, ಬಾಗಲೂರು, ಮತ್ತು ಕೊತ್ತನೂರು ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ವಾಸವಿದ್ದ ವಿದೇಶಿಗರ ಮನೆ ಮೇಲೆ ದಾಳಿ ಮಾಡಿ, 85 ವಿದೇಶಿಯರನ್ನು ತಪಾಸಣೆ ಮಾಡಲಾಗಿದೆ. ಈ ವೇಳೆ 20 ಮಂದಿ ಆಫ್ರಿಕಾದ ಪ್ರಜೆಗಳು ನಕಲಿ ಪಾಸ್ ಪೋರ್ಟ್ & ವೀಸಾ ಹೊಂದಿರುವುದು ಕಂಡು ಬಂದಿದೆ.

CCB Bengaluru arrested seven foreign nationals without valid passports and visa

ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ಇವರ ಬಳಿ ವಶಪಡಿಸಿಕೊಂಡಿರುವ ವಸ್ತುಗಳ ಆಧಾರದ ಮೇಲೆ ಇವರುಗಳು ಸೈಬರ್ ಅಪರಾಧಗಳನ್ನು ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

English summary
Central Crime Branch-Bengaluru conducted raids at 35 locations in hennuru, baglur and othanur area today morning and arrested seven foreign nationals without valid passports and visa, fake currency also recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X