India
  • search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುತ್ತಿಗೆದಾರರಿಂದ ಲಂಚ: NHAI ಅಧಿಕಾರಿ ಶ್ರೀನಿವಾಸಲು ನಾಯ್ಡು ವಿರುದ್ಧ ಸಿಬಿಐ ಎಫ್ಐಆರ್

|
Google Oneindia Kannada News

ಬೆಂಗಳೂರು, ಜೂ. 29: ದೇಶದಲ್ಲಿ ಯಾವುದೇ ಕೆಲಸಕ್ಕೂ ಲಂಚವಿಲ್ಲದೇ ಕೆಲಸವನ್ನು ಮಾಡಿಸಿಕೊಳ್ಳಲು ಅಸಾಧ್ಯವಾಗಿಬಿಟ್ಟಿದೆ. ಎಸಿಬಿ , ಲೋಕಾಯುಕ್ತ ಸಂಸ್ಥೆಗಳ ಹೊರತಾಗಿಯು ಹಲವು ಸರ್ಕಾರಿ ಏಜೆನ್ಸಿಗಳು ಕಾರ್ಯಚರಣೆಯನ್ನು ಮಾಡಿದರು ಲಂಚದ ಹಾವಳಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ.

ತಾನು ಕೆಲಸವನ್ನು ಮಾಡಿಕೊಡುವ ಸಲುವಾಗಿ ಗುತ್ತಿಗೆದಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪದಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಚಿತ್ರದುರ್ಗದ ಯೋಜನಾ ನಿರ್ದೇಶಕ ಶ್ರೀನಿವಾಸಲು ನಾಯ್ಡು ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದೆ.

ಆಂಧ್ರದ ಕಾಳಹಸ್ತಿ ಮೂಲದ ಶ್ರೀನಿವಾಸಲು ನಾಯ್ಡು ಚಿತ್ರದುರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಈತನ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 22 ರಂದು ದೇವನಹಳ್ಳಿ ಶ್ರೀನಿವಾಸಲು ನಾಯ್ಡುಎಂಬುವರ ಕಾರಿನಲ್ಲಿ 3.5 ಲಕ್ಷ ರೂ.ಪತ್ತೆ ಹಚ್ಚಿ ಹಣ ವಶಕ್ಕೆ‌‌ ಪಡೆದುಕೊಳ್ಳಲಾಗಿತ್ತು.‌ ಅದೇ ದಿನ ಬೆಂಗಳೂರಿನ‌ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ನಾಯ್ಡುಗೆ ಹಣದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದ್ದಾಗ ಸರಿಯಾಗಿ ಉತ್ತರಿಸಲಿರಲಿಲ್ಲ. ಹೀಗಾಗಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸಲಾಗುತ್ತಿದೆ.

ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಪ್ರಾಜೆಕ್ಟ್ ಮ್ಯಾನೇಜರ್

ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಪ್ರಾಜೆಕ್ಟ್ ಮ್ಯಾನೇಜರ್

ಎಫ್‌ಐಆರ್‌ನಲ್ಲಿ ಆಂಧ್ರಪ್ರದೇಶದ ಕಾಳಹಸ್ತಿ ಮೂಲದ ಶ್ರೀನಿವಾಸಲು ನಾಯ್ಡು ಚಿತ್ರದುರ್ಗದ ಎನ್‌ಎಚ್‌ಎಐನ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದಾರೆ. ತಮ್ಮ ಕಚೇರಿಯಲ್ಲಿ ಮತ್ತು ಬೆಂಗಳೂರಿನ ಪ್ರವಾಸದಲ್ಲಿರುವಾಗ ವಿವಿಧ ಗುತ್ತಿಗೆದಾರರಿಂದ ಲಂಚವನ್ನು ವಸೂಲಿ ಮಾಡುತ್ತಿದ್ದು ಮತ್ತು ಅದನ್ನು ತಮ್ಮ ಕಾರಿನಲ್ಲಿ ಸಾಗಿಸುತ್ತಿದ್ದರು ಎಂಬ ಮಾಹಿತಿ ಅಧಿಕಾರಿಗಳಿಗೆ ಬಂದಿತ್ತು. ಆಂಧ್ರದ ಕಾಳಹಸ್ತಿ ಅವರ ಹುಟ್ಟೂರಾಗಿದ್ದು ಅಲ್ಲಿಗೆ ಹಣ ಸಾಗಿಸಲು KA -16-AA-0430 ವಾಹನ‌ ಬಳಸುತ್ತಿದ್ದರು. ಆಂಧ್ರ ಗಡಿಯಲ್ಲಿ ಕೆಎ ರಿಜಿಸ್ಟರ್ ವಾಹನವನ್ನು ಟೊಯೋಟಾ ಇನ್ನೋವಾ ಹೊಂದಿರುವ ನೋಂದಣಿ ಸಂಖ್ಯೆ AP 39 LA0456 ಗೆ ಬದಲಾಯಿಸಿಕೊಂಡಿದ್ದರು. ಈ ಎಲ್ಲಾ ಮಾಹಿತಿಯನ್ನು ಕೆಲಹಾಕಿದ್ದ ಸಿಬಿಐನ ಎಸಿಬಿ ತಂಡ ಕಾರ್ಯಾಚರಣೆಯನ್ನು ನಡೆಸಿತ್ತು.

ಎಸಿಬಿ ಅಧಿಕಾರಿಗಳನ್ನು ಕಂಡು ಕಕ್ಕಾಬಿಕ್ಕಿ

ಎಸಿಬಿ ಅಧಿಕಾರಿಗಳನ್ನು ಕಂಡು ಕಕ್ಕಾಬಿಕ್ಕಿ

ಸಿಸಿಬಿಯ ಎಸಿಬಿ ತಂಡವು ಮಾಹಿತಿಯನ್ನು ಆಧರಿಸಿ ಶ್ರೀನಿವಾಸ್‌ನನ್ನು ಹಿಂಬಾಲಿಸಿಕೊಂಡು ಹೋಗಿತ್ತು. ಜೂನ್ 22ರಂದು ದೇವನಹಳ್ಳಿ ಶ್ರೀನಿವಾಸಲು ನಾಯ್ಡು ಎಂಬುವರ ಕಾರನ್ನು ಪರಿಶೀಲನೆಯನ್ನು ಮಾಡಲಾಯಿತು. ಕಾರನ್ನು ಪರಿಶೀಲಿಸಿದಾಗ 3.5 ಲಕ್ಷ ರೂ.ಪತ್ತೆಯಾಗಿತ್ತು. ಈ ಹಣವನ್ನು ವಶಕ್ಕೆ‌‌ ಪಡೆದುಕೊಳ್ಳಲಾಗಿತ್ತು.‌ ಅದೇ ದಿನ ಬೆಂಗಳೂರಿನ‌ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ನಾಯ್ಡುಗೆ ಹಣದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದ್ದಾಗ ಸರಿಯಾಗಿ ಉತ್ತರಿಸಲಿರಲಿಲ್ಲ. ಹೀಗಾಗಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಸಿಬಿಐ ನಡೆಸಲಾಗುತ್ತಿದೆ.

ಎಫ್ಐಆರ್‌ನಲ್ಲಿ ಉಲ್ಲೇಖ

ಎಫ್ಐಆರ್‌ನಲ್ಲಿ ಉಲ್ಲೇಖ

ಶ್ರೀನಿವಾಸಲು ನಾಯ್ಡು ಎಂಬ ಆರೋಪಿ ಕುಟುಂಬ ಸದಸ್ಯರು ಮತ್ತು ತಮ್ಮ ಹೆಸರಿನಲ್ಲಿ ಹಲವಾರು ಆಸ್ತಿಗಳನ್ನು ಸಂಗ್ರಹಿಸಿದ್ದಾರೆ. ಚಿತ್ತೂರು ಜಿಲ್ಲೆಯ ಶ್ರೀ ಕಾಳಹಸ್ತಿ, ಗುಂಟೂರು, ನೆಲ್ಲೂರು, ಬೆಂಗಳೂರಿನ ಯಲಹಂಕ, ಹೈದರಾಬಾದ್‌ನ ಕೋಕಾಪೇಟ್, ತೆಲಂಗಾಣ ಸೇರಿದಂತೆ ವಿವಿಧೆಡೆ ಸ್ಥಿರಾಸ್ತಿಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ, ಅಕ್ರಮವಾಗಿ ಸಂಪಾದಿಸಿದ ಹಣದ ಮೂಲಕ ತಿರುಪತಿ ಮತ್ತು ಕಾಳಹಸ್ತಿಯಲ್ಲಿರುವ ವಾಣಿಜ್ಯ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಮೂಲ ಮಾಹಿತಿಯಿಂದ ತಿಳಿದುಬಂದಿದೆ ಎಂದು ಎಫ್ಐಆರ್‌ನಲ್ಲಿ‌ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಶ್ರೀನಿವಾಸಲು ನಾಯ್ಡು ವಿರುದ್ದ ತನಿಖೆ

ಶ್ರೀನಿವಾಸಲು ನಾಯ್ಡು ವಿರುದ್ದ ತನಿಖೆ

ಶ್ರೀನಿವಾಸಲು ನಾಯ್ಡು ಚಿತ್ರದುರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಬೆಂಗಳೂರು ಸಿಬಿಐ ಎಸಿಬಿ ತಂಡದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಸಿಸಿಬಿ ಎಸಿಬಿ ತಂಡ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.

English summary
The CBI is Register an FIR against the National Highway Authority (NHAI) Chitradurga project director Srinivasalu Naidu for allegedly accepting millions of rupees from a contractor to get him to work.know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X