ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಸಿಬಿಐ ದಾಳಿ

|
Google Oneindia Kannada News

ಬೆಂಗಳೂರು, ನವೆಂಬರ್ 23: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ನಿವಾಸದ ಮೇಲೆ ಬೆಳಗಿನ ಜಾವ ದಾಳಿ ನಡೆದಿದೆ. ದೆಹಲಿ ಮೂಲದ ಹದಿಮೂರು ಅಧಿಕಾರಿಗಳ ತಂಡ ದಾಳಿ ನಡಸಿದ್ದು ದಾಖಲೆಗಳಿಗಾಗಿ ಶೋಧ ನಡೆಸುತ್ತಿದೆ. ಪುಲಿಕೇಶೀನಗರದ ಕೋಲ್ಸ್ ಪಾರ್ಕ್ ಬಳಿ ಇರುವ ಬೇಗ್ ಮನೆಯಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.

ಬೆಳಗಿನ ಜಾವ ಇಬ್ಬರು ಮಹಿಳಾ ಅಧಿಕಾರಿಗಳು ಸೇರಿ ಸಿಬಿಐ ಅಧಿಕಾರಿಗಳ ತಂಡ ರೋಷನ್ ಬೇಗ್ ಅವರ ಮನೆ ಮೇಲೆ ದಾಳಿ ನಡೆಸಿತು. ದಾಳಿಯ ನೋಟಿಸ್ ಕೊಟ್ಟು ಮನೆ ಒಳಗೆ ಪ್ರವೇಶಿಸಿರುವ ಅಧಿಕಾರಿಗಳು, ಮನೆಯವರ ಮೊಬೈಲ್‌ ಗಳನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದಾರೆ. ಐಎಂಎ ನಿಂದ ಚಿನ್ನದ ಆಭರಣ ಹಾಗೂ ಕೋಟ್ಯಂತರ ರೂಪಾಯಿ ಬೇಗ್ ಪಡೆದ ಆರೋಫಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಿರುವ ಅಧಿಕಾರಿಗಳು ಹೆಚ್ಚುವರಿ ಸಾಕ್ಷಾಧಾರಗಳ ಸಂಗ್ರಹಕ್ಕೆ ಮುಂದಾಗಿದೆ.

ಬಹುಕೋಟಿ ಐಎಂಎ ವಂಚನೆ ಕೇಸ್: ರೋಷನ್ ಬೇಗ್ ಬಂಧಿಸಿದ ಸಿಬಿಐಬಹುಕೋಟಿ ಐಎಂಎ ವಂಚನೆ ಕೇಸ್: ರೋಷನ್ ಬೇಗ್ ಬಂಧಿಸಿದ ಸಿಬಿಐ

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ ರೋಷನ್ ಬೇಗ್ ಅವರನ್ನು ಬಂಧಿಸಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆ ಮುಂದೆ ಹಾಜರು ಪಡಿಸಿದ್ದರು. ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನ ಕ್ವಾರೆಂಟೈನ್ ಸೆಲ್‌ನಲ್ಲಿದ್ದಾರೆ. ಬಂಧನ ಆಗುತ್ತಿದ್ದಂತೆ ಇದೀಗ ಸಿಬಿಐ ದಾಳಿ ನಡೆದಿದೆ.

CBI raids former minister Roshan Baig Residence

ಐಎಂಎ ಕಂಪನಿಯಿಂದ 200 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದ ಆರಂಭಿಕ ದಿನಗಳಲ್ಲಿ ಐಎಂಎ ಸಂಸ್ಥಾಪಕ, ಸಿಇಓ ಮನ್ಸೂರ್ ಖಾನ್‌ ಅವರೇ ರೋಷನ್ ಬೇಗ್ ಅವರ ಮೇಲೆ ಆರೋಪ ಮಾಡಿದ್ದರು. ಐಎಂಎ ಕಂಪನಿಯಿಂದ ರೋಷನ್ ಬೇಗ್ ಬೇಕಾದಾಗೆಲ್ಲಾ ಹಣ ಪಡೆದಿದ್ದಾರೆ. ಅದನ್ನು ವಾಪಸು ಕೇಳಿದಾಗ ಸ್ಥಳೀಯ ರೌಡಿಗಳಿಂದ ಬೆದರಿಸಿದ್ದರು ಎಂಬ ಅಡಿಯೋ ಅಂದಿನ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರಿಗೆ ಮನ್ಸೂರ್ ಆಲಿಖಾನ್ ಅವರೇ ಕಳಿಸಿಕೊಟ್ಟಿದ್ದರು.

CBI raids former minister Roshan Baig Residence

ಐಎಂಎ ವಂಚನೆ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದಾಗ ರೋಷನ್ ಬೇಗ್ ಅವರ ಮೇಲಿನ ಆರೋಪಕ್ಕೆ ಪುಷ್ಟಿ ನೀಡುವ ಮಹತ್ವದ ದಾಖಲೆಗಳು ಲಭ್ಯವಾಗಿದ್ದವು. ರೋಷನ್ ಬೇಗ್ ಅವರ ಪುತ್ರನ ಮದುವೆಗೆ ಸುಮಾರು ಚಿನ್ನದ ಒಡವೆಗಳನ್ನು ಐಎಂಎನಿಂದ ಬೇಗ್ ಪಡೆದಿದ್ದರು. ಮಾತ್ರವಲ್ಲದೇ ಹಣವನ್ನು ಸುಹ ಪಡೆದಿದ್ದ ಬಗ್ಗೆ ದಾಖಲೆಗಳು ಲಭ್ಯವಾಗಿದ್ದವು. ಈ ಕುರಿತು ಆರೋಪಿ ಮನ್ಸೂರ್ ಆಲಿಖಾನ್ ಅವರನ್ನು ವಿಚಾರಣೆ ನಡೆಸಿದಾಗ ಹಣ ಕೇಳಿದರೆ ರೋಷನ್ ಬೇಗ್ ಅವರ ಆಪ್ತರು ಹಲ್ಲೆಗೆ ಮುಂದಾಗಿದ್ದರು ಎಂಬ ಹೇಳಿಕೆ ದಾಖಲಿಸಿದ್ದರು. ಪ್ರಕರಣ ಸಿಬಿಐ ಅಂಗಳಕ್ಕೆ ಹೋಗಿತ್ತು.

CBI raids former minister Roshan Baig Residence

Recommended Video

ಮನ್ಸೂರ್ ವಿಡಿಯೋ ಅಲ್ಲಿ ಹೇಳಿರೋದಾದ್ರು ಏನು? | Oneindia Kannada

ಐಎಂಎ ಪ್ರಕರಣದಲ್ಲಿ ಬೇಗ್ ಹೆಸರು ಕೇಳಿ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ಕಳೆದ ಉಪ ಚುನಾವಣೆ ವೇಳೆ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿದ್ದರು. ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಉತ್ಸುಕತೆ ತೋರಿ, ಕೊನೆಗೆ ಚುನಾವಣಾ ಕಣದಿಂದ ದೂರ ಸರಿದಿದ್ದರು. ಐಎಂಎ ಬ್ಲೇಡ್ ಸ್ಕೀಮ್ ಗಳ ಮೂಲಕ ಬರೋಬ್ಬರಿ 4 ಸಾವಿರ ಕೋಟಿ ವಂಚನೆ ಮಾಡಿತ್ತು.

English summary
CBI officials raid former minister Roshan Baig's residence on today. A team of 13 officers raided a house in Cole's Park, Pulikeshinagara this morning. Roshan Baig arrested by CBI officials on Yesterday and sent him to judicial custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X