ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಯಲ್ ಸುರೇಖಾ ಮರ್ಡರ್: ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 12: ಜೆ.ಪಿ ನಗರದ ನಿವಾಸಿ ಡೆಲ್ ಸಂಸ್ಥೆ ಉದ್ಯೋಗಿ ಪಾಯಲ್ ಸುರೇಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಸಿಬಿಐ ತಂಡ 17ನೇ ಎಸಿಎಂಎಂ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ. ಜಿಮ್ ತರಬೇತುದಾರ ಜೇಮ್ಸ್ ಕುಮಾರ್ ರೇ ಅವರನ್ನು ಕೊಲೆಗಾರ ಎಂದು ಹೆಸರಿಸಲಾಗಿದೆ.

ಪಾಯಲ್ ತಂದೆ ದೀನದಯಾಳ್ ಸುರೇಖಾ ಮತ್ತು ಆರೋಪಿ ಜೇಮ್ಸ್ ಕುಮಾರ್ ರೇ ಸಲ್ಲಿಸಿದ ಎರಡು ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾ. ಕೆ.ಎಸ್.ರಾಧಾಕೃಷ್ಣನ್ ಹಾಗೂ ನ್ಯಾ. ದೀಪಕ್ ಮಿಶ್ರ ಅವರಿದ್ದ ನ್ಯಾಯಪೀಠ ಸಿಬಿಐ ತನಿಖೆಗೆ ನಿರ್ದೇಶಿಸಿತ್ತು. ಅದರಂತೆ ತನಿಖೆ ಕೈಗೆತ್ತಿಕೊಂಡ ಸಿಬಿಐ ತಂಡಕ್ಕೆ ಜೇಮ್ಸ್ ಕುಮಾರ್ ರೇ ಮಾತ್ರ ಈ ಪ್ರಕರಣದ ಪ್ರಮುಖ ಆರೋಪಿ ಎನ್ನುವುದಕ್ಕೆ ಸೂಕ್ತ ಆಧಾರ ಸಿಕ್ಕಿದೆ. [ಕೇಸ್ ಹಿಸ್ಟರಿ: ಡೆಲ್ ಪಾಯಲ್ ಹತ್ಯೆ]

CBI files charge sheet in Payal Surekha murder case, upholds police probe

ಜೆಪಿ ನಗರ ಪೊಲೀಸರು ಮುಂಚೆ ತನಿಖೆ ಕೈಗೊಂಡು ಜೇಮ್ಸ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಎತ್ತಿ ಹಿಡಿದಿರುವ ಸಿಬಿಐ ತಂಡ ಜೇಮ್ಸ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ಕ್ಲೋಸ್ ಆದ ಕೇಸ್ ರೀ ಓಪನ್ : ಡೆಲ್ ಬಿಪಿಒ ಉದ್ಯೋಗಿ, ಜೆಪಿನಗರ ಏಳನೇ ಹಂತದ ನಿವಾಸಿ ಪಾಯಲ್ ಸುರೇಖಾ(29) ಅಮಾನುಷ ಕೊಲೆ ಕೇಸ್ ಕ್ಲೋಸ್ ಆಗಿತ್ತು. ಈ ಪ್ರಕರಣ ತನಿಖೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಷರಾ ಹಾಕಿತ್ತು. ಸಿಬಿಐ ಸಲ್ಲಿಸಿದ ಅಫಿಡವಿಟ್ ಪರಿಶೀಲಿಸಿದ ನ್ಯಾ ಆನಂದ್ ಅವರು ಎಸಿಪಿ ಜಿತೇಂದ್ರನಾಥ್ ಅವರಿಗೆ ನಿರ್ದೇಶನ ನೀಡಿ ಡಿಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ ಮುಂದುವರೆಸುವಂತೆ ಸೂಚಿಸಿದ್ದರು.

ಅಸ್ಸಾಂ ಮೂಲದ ಪಾಯಲ್ (29) ಅವರನ್ನು ಡಿ.17,2010ರಂದು ಜೆಪಿ ನಗರದ ತಮ್ಮ ಅಪಾರ್ಟ್ಮೆಂಟ್ ನಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಿಸಿಬಿ ಪೊಲೀಸರು ಜೇಮ್ಸ ಕುಮಾರ್ ರೇ ಅವರನ್ನು ನಾಲ್ಕು ದಿನದ ನಂತರ ಬಂಧಿಸಿದ್ದರು. ಅನಂತರ ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದ ರೇ ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

English summary
The Central Bureau of Investigation (CBI) on Monday filed the charge sheet in the sensational murder of Dell BPO employee Payal Surekha by asserting that the killer was indeed James Kumar Ray, a gym instructor. The charge sheet was filed before the 17th Additional Chief Metropolitan Magistrate Court here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X