ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಇಂದು ಕಾವೇರಿ ನೀರು ವ್ಯತ್ಯಯ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಇಂದು ಕಾವೇರಿ ನೀರಿನ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಜಲಮಂಡಳೀಯ ತೊರೆಕಾಡನಹಳ್ಳಿ ಪಂಪಿಂಗ್ ಕೇಂದ್ರದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಭಾನುವಾರ ಮಧ್ಯಾಹ್ನದಿಂದಲೇ ನೀರು ಸರಬರಾಜು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಪಂಪಿಂಗ್ ಕೇಂದ್ರದ 2-3ನೇ ಹಂತದ ನೀರು ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಯಶವಂತಪುರ, ಮಲ್ಲೇಶ್ವರ, ಮತ್ತಿಕೆರೆ, ಗೋಕುಲ ಎಕ್ಸ್‌ಟೆನ್ಷನ್, ಮುತ್ಯಾಲನಗರ, ಆರ್‌ಟಿನಗರ, ಸುಧಾಮನಗರ, ಸದಾಶಿವನಗರ, ಹೆಬ್ಬಾಳ, ಭಾರತಿನಗರ, ಗುಟ್ಟಹಳ್ಳಿ, ಮಚಲಿಬೆಟ್ಟ, ಫ್ರೇಜರ್ ಟೌನ್, ವಿಲ್ಸನ್ ಗಾರ್ಡನ್ ಹೊಂಬೇಗೌಡನಗರ, ಶಿವಾಜಿನಗರ, ಬ್ಯಾಟರಾಯನಪುರ, ಯಲಚೇನಹಳ್ಳಿ, ಇಸ್ರೋ ಲೇಔಟ್, ಪೂರ್ಣಪ್ರಜ್ಞ ಲೇಔಟ್, ಕೆಆರ್ ಮಾರುಕಟ್ಟೆ ಸಂಪಂಗಿರಾಮನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.

cauvery water supply disrruption in different parts of bengaluru today

ಅಷ್ಟೇ ಅಲ್ಲದೆ ಬನಶಂಕರಿ 2,3ನೇ ಹಂತ, ಕುಮಾರಸ್ವಾಮಿ ಲೇಔಟ್, ಬಸವನಗುಡಿ, ಹೊಸಕೆರೆಹಳ್ಳಿ, ಪದ್ಮನಾಭನಗರ, ಜಾನ್ಸನ್ ಮಾರ್ಕೆಟ್, ಲಿಂಗರಾಜಪುರ, ಭೈರಸಂದ್ರ, ಬಿಟಿಎಂ ಲೇಔಟ್, ಹಲಸೂರು, ಶ್ರೀರಾಂಪುರ, ಬಿಟಿಎಂ ಲೇಔಟ್, ಶ್ರೀನಗರ, ಕೋರಮಂಗಲ, ಇಂದಿರಾನಗರ 1ನೇ ಹಂತ, ಈಜಿಪುರ, ಶಾಂತಿನಗರ, ಕೋರಮಂಗಲ, ರಿಚ್ಮಂಡ್ ಟವರ್ಣ, ಅಶೋಕನಗರ, ಚಿಕ್ಕಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

English summary
There are some technical glitches in TK halli pumping station, so there will be no water supply for bengaluru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X