ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ಅಂತಿಮ ತೀರ್ಪು: ಬೆಂಗಳೂರಿಗೆ 4.75 ಟಿಎಂಸಿ ಹೆಚ್ಚುವರಿ ನೀರು

|
Google Oneindia Kannada News

ಬೆಂಗಳೂರು, ಫೆಬ್ರವರಿ 16 : ಕರ್ನಾಟಕದ ಜನತೆ ಕಾತುರದಿಂದ ಕಾಯುತ್ತಿದ್ದ ಕಾವೇರಿ ನದಿಯ ಅಂತಿಮ ತೀರ್ಪು ಹೊರಬಿದ್ದಿದೆ. ಬೆಂಗಳೂರಿಗೆ 4.75 ಹೆಚ್ಚುವರಿ ಟಿಎಂಸಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಸಿಜೆಐ ದೀಪಕ್ ಮಿಶ್ರಾ ಅವರಿದ್ದ ಪೀಠದಿಂದ ತೀರ್ಪು ಹೊರಬಿದ್ದಿದೆ.

ಕಾವೇರಿ ಅಂತಿಮ ತೀರ್ಪು: ತಮಿಳನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿಕಾವೇರಿ ಅಂತಿಮ ತೀರ್ಪು: ತಮಿಳನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ

ಬೆಂಗಳೂರಿಗೆ 4.75 ಟಿಎಂಸಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದು ಈ ಹಿಂದೆ 7.5 ಟಿಎಂಸಿ ನೀರನ್ನು ಬೆಂಗಳೂರಿಗೆ ನೀಡಲಾಗುತ್ತಿತ್ತು. 30 ಟಿಎಂಸಿ ನೀರು ಬಿಡುಗಡೆ ಮಾಡಬೇಕೆಂದು ಮನವಿ ಮಾಡಲಾಗಿತ್ತು.

Cauvery Verdict: Bengaluru to get additional 4.75 TMC, says supreme court

15 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ತೀರ್ಪನ್ನು ಮರುಪರಿಶೀಲಿಸಬಹುದು. 1892 ಹಾಗೂ 1924 ಎರಡೂ ಒಪ್ಪಂದಗಳು ಸಿಂಧು ಎಂದು ಸುಪ್ರೀಂಕೋರ್ಟ್ ಹೇಳಿದೆ. ರಾಜ್ಯದ ವಾದವನ್ನು ಸುಪ್ರೀಂಕೋರ್ಟ್ ಭಾಗಶಃ ಎತ್ತಿ ಹಿಡಿದಿದೆ. ಎರಡು ರಾಜ್ಯಗಳು ಸಮಾನ ಹಂಚಿಕೆ ತತ್ವ ಪಾಲಿಸಬೇಕು ಎಂದಿದೆ.

ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ನಗರ ಜಿಲ್ಲೆಯ 161 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಅದಕ್ಕೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಇದಕ್ಕಾಗಿ ಜಲಮಂಡಳಿಯು ನಿತ್ಯ 16.10 ದಶಲಕ್ಷ ಲೀಟರ್ ನೀರು ಪೂರೈಸಲಿದೆ.

ಸುಪ್ರೀಂ ತೀರ್ಪು ಕರ್ನಾಟಕಕ್ಕೆ ಬಿಗ್ ರಿಲೀಫ್ : ಬ್ರಿಜೇಶ್ ಕಾಳಪ್ಪಸುಪ್ರೀಂ ತೀರ್ಪು ಕರ್ನಾಟಕಕ್ಕೆ ಬಿಗ್ ರಿಲೀಫ್ : ಬ್ರಿಜೇಶ್ ಕಾಳಪ್ಪ

ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿರುವ ಕರ್ನಾಟಕ ಗೃಹ ಮಂಡಳಿಯ ಸೂರ್ಯನಗರ 1,2,3 , ಮತ್ತು 4 ನೇ ಹಂತ ಆನೇಕಲ್ ಪಟ್ಟಣ ಮತ್ತು ಸುತ್ತಮುತ್ತಲಿನ 17 ಗ್ರಾಮಗಳಿಗೆ ಕಾವೇರಿ ನೀರು ಸರಬರಾಜು ಮಾಡಲು ಸರ್ಕಾರ ಅನುಮೋದನೆ ನೀಡಿದೆ.

30 ಎಂಎಲ್ ಡಿ ನೀಡು ಹಂಚಿಕೆ: ರಾಜ್ಯ ಸರ್ಕಾರವು ಸೂರ್ಯನಗರ ವಸತಿ ಬಡಾವಣೆಗಳಿಗೆ 15 ಎಂ ಎಲ್ ಡಿ , ಆನೇಕಲ್ ಪಟ್ಟಣಕ್ಕೆ 7.5 ಎಂಎಲ್ ಡಿ ಮತ್ತು 17 ಹಳ್ಳಿಗಳಿಗೆ 7.5 ಎಂಎಲ್ ಡಿ ಸೇರಿ ಒಟ್ಟು 30 ಎಂಎಲ್ ಡಿ ಕಾವೇರಿ ನೀಡು ಹಂಚಿಕೆ ಮಾಡಿದೆ. ಕರ್ನಾಟಕ ನೀರಾವರಿ ಪ್ರದೇಶವನ್ನು ವಿಸ್ತರಣೆ ಮಾಡಲು ಸುಪ್ರೀಂಕೋರ್ಟ್ ಸೂಚಿಸಿದೆ.

English summary
Cauvery Verdict: Karnataka to get additional 14.75 TMC and 177.25 TMC of water to be released for Tamilnadu , decides Supreme court and Bengaluru will get 4.75 TMC of Cauvery water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X