ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ನೀರಾವರಿ ನಿಗಮದ ಎಂಡಿ ಜಯಪ್ರಕಾಶ್ ಸೇವಾವಧಿ ವಿಸ್ತರಣೆಗೆ ಯತ್ನ

|
Google Oneindia Kannada News

ಬೆಂಗಳೂರು, ಮೇ. 20: ಎತ್ತಿನಹೊಳೆ ಯೋಜನೆಯನ್ನು ಹಳ್ಳ ಹಿಡಿಸಿದ ಆರೋಪ ಹೊತ್ತಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಜಯ ಪ್ರಕಾಶ್ ಎರಡು ವರ್ಷ ಸೇವಾವಧಿ ವಿಸ್ತರಿಸಿಕೊಳ್ಳಲು ಮುಂದಾಗಿದ್ದಾರೆ.

ಮೇ. 31 ರಂದು ಕೆ. ಜಯ ಪ್ರಕಾಶ್ ನಿವೃತ್ತಿ ಹೊಂದಲಿದ್ದು, ಎರಡು ವರ್ಷ ಸೇವೆಯನ್ನು ವಿಸ್ತರಿಸುವಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಮೇ 16 ರಂದು ಮಾಜಿ ಪ್ರಧಾನಿ ದೇವಗೌಡ ಅವರು ಜಯಪ್ರಕಾಶ್ ಅವರ ಸೇವಾವಧಿಯನ್ನು ಎರಡು ವರ್ಷ ವಿಸ್ತರಿಸುಂತೆ ಕೋರಿದ್ದಾರೆ.

2013 ರಿಂದ 2015 ರವರೆಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕರು ಆಗಿರುವ ಕೆ. ಜಯಪ್ರಕಾಶ್, ಎರಡೇ ಬಾರಿಗೆ 2019 ರಿಂದಲೂ ಇಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಸರ್ ಎಂ. ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಜಯ ಪ್ರಕಾಶ್, ಸರ್ಕಾರದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಸಿದ್ದಾರೆ.

Cauvery Neeravari Nigam Ltd MD K Jaiprakash seeks 2 years extension

ಹದಿನೆಂಟು ವರ್ಷ ಜಲ ಸಂಪನ್ಮೂಲ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಜಯ ಪ್ರಕಾಶ್ ಅವರ ಸೇವೆಯನ್ನು ನಾಗರಿಕ ಸೇವಾ ನಿಯಮದ ಅಡಿ ಎರಡು ವರ್ಷ ವಿಸ್ತರಿಸಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಹುದ್ದೆಯಲ್ಲಿ ಮುಂದುವರೆಸಲು ಅವಕಾಶ ನೀಡುವಂತೆ ಮಾಜಿ ಪ್ರಧಾನಿ ಕೋರಿದ್ದಾರೆ.

ಮಾಜಿ ಪ್ರಧಾನಿ ಸಹಿ ನೋಡುತ್ತಿದ್ದಂತೆ ಈ ಕಡತವನ್ನು ಮಂಡಿಸಿ ಎಂಬ ಟಿಪ್ಪಣಿಯೊಂದಿಗೆ ಪ್ರಸ್ತವಾನೆಯನ್ನು ಡಿಪಿಆರ್ ಗೆ ರವಾನಿಸಲಾಗಿದೆ. ಮಂದಿನ ಸಚಿವ ಸಂಪುಟ ಸಭೆಯಲ್ಲಿ ಜಯ ಪ್ರಕಾಶ್ ಅವರ ಅವರ ಎರಡು ವರ್ಷದ ಸೇವೆಯನ್ನು ವಿಸ್ತರಣೆ ಮಾಡಿ ಸರ್ಕಾರ ಆದೇಶ ಮಾಡುವ ಸಾಧ್ಯತೆಯಿದೆ.

Cauvery Neeravari Nigam Ltd MD K Jaiprakash seeks 2 years extension

ಎತ್ತಿನಹೊಳೆ ಯೋಜನೆಯ ಬಹುದೊಡ್ಡ ಹಗರಣ:

ಎತ್ತಿನಹೊಳೆ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿದೆ. ಈ ಅವೈಜ್ಞಾನಿಕ ಯೋಜನೆಯಿಂದ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಒಂದು ಹನಿ ನೀರು ಹರಿಯುವುದಿಲ್ಲ. ಈ ವಾಸ್ತವ ಗೊತ್ತಿದ್ದರೂ 20 ಸಾವಿರ ಕೋಟಿಯ ಯೋಜನೆಯನ್ನು ಅನುಷ್ಠಾನ ಮಾಡಿಸಿ ಎತ್ತುವಳಿಗೆ ನಾಂದಿ ಹಾಡಲಾಗಿದೆ. ಎತ್ತಿನಹೊಳೆ ಯೋಜನೆ ಅಕ್ರಮದಲ್ಲಿ ಶಾಮೀಲಾದ ಆರೋಪ ಜಯ ಪ್ರಕಾಶ್ ಅವರ ಮೇಲಿದೆ. ರಾಜಕೀಯ ನಾಯಕರ ಜತೆ ಅತ್ತುತ್ತಮ ಬಾಂಧವ್ಯ ಹೊಂದಿರುವ ಜಯ ಪ್ರಕಾಶ್ ಅವರ ಸೇವಾವಧಿಯನ್ನು ಎರಡು ವರ್ಷ ವಿಸ್ತರಣೆ ಮಾಡಿ ಪುನಃ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ಕೂರಿಸುವ ಪ್ರಯತ್ನ ನಡೆದಿದೆ. ಇದು ಸರ್ಕಾರಿ ಅಧಿಕಾರಿ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.

Recommended Video

ಬೆಂಗಳೂರಿನಲ್ಲಿ ಭಾರೀ ಮಳೆ , ಸಿದ್ದರಾಮಯ್ಯ ಹೇಳಿದ್ದೇನು | OneIndia Kannada

English summary
Cauvery Neeravari Nigam Ltd MD K Jaiprakash seeks 2 years extension as he retiring on may 31st; HD Deve Gowda writes letter to CM Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X