ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕದ 'ಅಕ್ಕ' ನವರ ಅಕ್ಕರೆಗೆ ಮನಸೋತ ಅಂಬರೀಷ

By Mahesh
|
Google Oneindia Kannada News

ಬೆಂಗಳೂರು, ಸೆ. 29: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ನ್ಯಾಯಕ್ಕಾಗಿ ಮಂಡ್ಯದ ಜನತೆ ಪ್ರತಿಭಟನೆ ನಿರತರಾಗಿದ್ದಾಗ ಮಂಡ್ಯದ ಗಂಡು ಎಲ್ಲಿದ್ದರು? ವಿಷಯ ತಿಳಿದ ಮೇಲೂ ಅಮೆರಿಕದಲ್ಲೇ ಏಕೆ ನೆಲೆಸಿದ್ದರು? ಎಂಬ ಪ್ರಶ್ನೆಗಳಿಗೆ ಬುಧವಾರ ವಿಸ್ತಾರವಾಗಿ ಉತ್ತರ ಸಿಕ್ಕಿದೆ.

ಅಕ್ಕ ಸಮ್ಮೇಳನದ ಬಗ್ಗೆ ಹೊಗಳಿಕೆ: ಕಳೆದ ಹದಿನೈದು ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿರುವ ಕನ್ನಡಿಗರು 'ಅಕ್ಕ' ಸಮ್ಮೇಳನಕ್ಕೆ ನನ್ನನ್ನು ಕರೆಯುತ್ತಿದ್ದರು. ಆದರೆ, ನನಗೆ ಹೋಗಲು ಆಗಿರಲಿಲ್ಲ. ನನಗೀಗ ವಯಸ್ಸು 64. ನಾನು ಈ ವಯಸ್ಸಿನಲ್ಲಿ ಅಮೆರಿಕಕ್ಕೆ ಮೋಜು ಮಾಡಲು ಹೋಗಿರ್ಲಿಲ್ಲ. ಕನ್ನಡ ಜನತೆಯ ಆಸೆ, ಆಕಾಂಕ್ಷೆಯನ್ನ ತಲುಪಿಸಲು ಹೋಗಿದ್ದೆ.[ ದಯವಿಟ್ಟು ಕ್ಷಮಿಸಿ ಎಂದು ಕನ್ನಡಿಗರ ಮುಂದೆ ಕೈಮುಗಿದ ಅಂಬಿ]

ಅಮೇರಿಕಾದ ಮೂರು ಕನ್ನಡ ಬಳಗಕ್ಕೆ ನಾನು ಒಪ್ಪಿಕೊಂಡಿದ್ದೆ. ಅಟ್ಲಾಂಟಿಕ್ ಸಿಟಿ, ಫೀನಿಕ್ಸ್ ಮತ್ತು ಬಾಲ್ಟಿಮೋರ್ ನ ಎಲ್ಲಾ ಕನ್ನಡಿಗರು ಬಹಳ ಸಂತೋಷ ವ್ಯಕ್ತಪಡಿಸಿದ್ದರು. ನನ್ನ ಜೊತೆ ಅನೇಕ ಕಲಾವಿದರು ಭಾಗವಹಿಸಿದ್ದರು. ಅದಕ್ಕೆ ನನ್ನ ಸಹನಟರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಅವರ ಬಿಜಿ ಶೆಡ್ಯೂಲ್ ಏನೇ ಇದ್ದರೂ, ನನಗಾಗಿ ಬಂದು 'ಅಂಬಿ ವೈಭವ' ಕಾರ್ಯಕ್ರಮವನ್ನ ಮಾಡಿದರು. ಅಮೆರಿಕ ಕನ್ನಡಿಗರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ.ಎಂದರು.

Cauvery Dispute Mandya MLA Ambareesh Press conference AKKA USA

ಕಾವೇರಿ ವಿವಾದ ಹೊಸದಲ್ಲ. ತುಂಬಾ ವರ್ಷಗಳಿಂದ ನಡೆಯುತ್ತಿದೆ. ಕರ್ನಾಟಕಕ್ಕೆ ಹೀಗೆ ಪದೇ ಪದೇ ಅನ್ಯಾಯ ಆಗುತ್ತಿರುವುದು ದುರಾದೃಷ್ಟಕರ. ಇದು ನಮ್ಮ ದೌರ್ಭಾಗ್ಯ.

ಖಳನಟನಾಗಿ, ಪೋಷಕ ನಟನಾಗಿ, ನಾಯಕ ನಟನಾಗಿ ಇವತ್ತಿನ ದಿನ ಅಬ್ದುಲ್ ಕಲಾಂ ಮುಂದೆ ನಿಂತು ಪ್ರಮಾಣ ವಚನ ಸ್ವೀಕರಿಸಿ, ಇಲ್ಲಿ ಬಂದು ಸಚಿವ ಸಂಪುಟದಲ್ಲಿ ಕೆಲಸ ಮಾಡಿದ್ದೀನಿ. ಅಧಿಕಾರಕ್ಕಾಗಿ ಅಥವಾ ಹಣದ ಆಸೆಗಾಗಿ ನಾನು ಕೆಲಸ ಮಾಡಿಲ್ಲ.

ನೂರು ಜನ ರಾಜಕಾರಣಿಗಳು ಬಂದರೂ ಕಾವೇರಿ ಸಮಸ್ಯೆ ಬಗೆಹರಿಸಲು ಸಾಧ್ಯ ಇಲ್ಲ. ಎರಡೂ ರಾಜ್ಯಗಳ ರೈತರಿಗೆ ಬಿಟ್ಟುಬಿಟ್ಟರೆ ಸಮಸ್ಯೆ ಸುಲಭವಾಗಿ ಮುಗಿದುಹೋಗುತ್ತದೆ ಅಂತ 2006ರಲ್ಲಿ ಪ್ರಧಾನ ಮಂತ್ರಿಗಳಿಗೆ ನಾನು ಹೇಳಿದ್ದೆ.

ಪ್ರಕೃತಿಗೆ ಬ್ಯಾರೋಮೀಟರ್ ಫಿಕ್ಸ್ ಮಾಡಲು ಸಾಧ್ಯ ಇಲ್ಲ. 1924 ಅಗ್ರೀಮೆಂಟ್ ಬಗ್ಗೆ ನನಗೆ ಸಮ್ಮತ ಇಲ್ಲ. ದುಡ್ಡು ಆಗಿದ್ದರೆ ಬ್ಯಾಂಕ್ ನಿಂದ ಸಾಲ ಮಾಡಿ ತರಬಹುದು. ಆದ್ರೆ ನೀರನ್ನ ಸಾಲ ತರೋಕೆ ಆಗಲ್ಲ. ನೀರನ್ನ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಮಳೆ ಬಾರದೇ ಇರುವಾಗ ಡಿಸ್ಟ್ರೆಸ್ ಫಾರ್ಮುಲಾ ಜಾರಿಗೆ ತರಬೇಕು.

ಬೇಕಾದಷ್ಟು ಜನ ನನ್ನ ಮೇಲೆ ತುಂಬಾ ಮಾತನಾಡಿದ್ದಾರೆ. ಮಾತನಾಡುವವರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ನಮ್ಮ ಮನಸ್ಸಲ್ಲಿ ಇರುವುದನ್ನ ನಾವು ಹೇಳಬಹುದು ಅಷ್ಟೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ಬಂದಿರುವ ಬಗ್ಗೆ ಕೂಡ ನಾನು ಉತ್ತರ ಕೊಡಲು ತಯಾರಿಲ್ಲ.

ನಾನು ಇವತ್ತಿನ ಈ ಮಟ್ಟಕ್ಕೆ ಬರಬೇಕಾದರೆ ಮಂಡ್ಯ ಜನತೆಯ ಆಶೀರ್ವಾದ, ಅಭಿಮಾನ, ಪ್ರೀತಿ ಕಾರಣ. ಅವರ ಮೇಲೆ ಗೌರವ ನನಗೆ ಇದ್ದೇ ಇದೆ. ಹನುಮಂತನ ತರಹ ನಾನು ಎದೆ ಬಗಿದು ತೋರಿಸಲು ಸಾಧ್ಯವಿಲ್ಲ.

ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ನಾನು ಭಾಗವಹಿಸದೇ ಇರಲು ಕಾರಣ ಏನಪ್ಪಾ ಅಂದ್ರೆ ಕನ್ನಡಿಗರ ಪ್ರೀತಿ, ವಿಶ್ವಾಸ, ಆಸೆ. ಅದಕ್ಕಾಗಿ ನಾನು ಅಮೇರಿಕಾಗೆ ಹೋಗಿದ್ದೇ ಹೊರತು ಮೋಜು ಮಾಡಲು ಅಲ್ಲ. ಐಷಾರಾಮಿ ಜೀವನ ಮಾಡಲು ಹೋಗಿರ್ಲಿಲ್ಲ. ಕಾವೇರಿ ಹೋರಾಟದಲ್ಲಿ ನಾನು ಭಾಗವಹಿಸಲಿಲ್ಲ ಎಂಬ ದುಃಖ ಕೂಡ ನನ್ನಲ್ಲಿ ಇದೆ ಎಂದಿದ್ದಾರೆ.

English summary
Cauvery Dispute : Mandya MLA Ambareesh during his Press conference said Kannada associations in USA(AKKA) are doing very good job in uplifting the Kannada culture we need to encourage them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X