ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾನೂನು ಹೋರಾಟದಲ್ಲಿ ಡಿಸಿಪಿಗೆ ಜಯ; ವರ್ಗಾವಣೆ ರದ್ದು

|
Google Oneindia Kannada News

ಬೆಂಗಳೂರು, ನವೆಂಬರ್ 05 : ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಬಿ. ರಮೇಶ್ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. ವರ್ಗಾವಣೆ ಆದೇಶವನ್ನು ಗೃಹ ಇಲಾಖೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಸೋಮವಾರ ಬಿ. ರಮೇಶ್ ವರ್ಗಾವಣೆಗೆ ತಡೆ ನೀಡಿತ್ತು. ಸಿಎಟಿ ಆದೇಶದ ಬಳಿಕ ಗೃಹ ಇಲಾಖೆ ವರ್ಗಾವಣೆಯನ್ನು ರದ್ದುಗೊಳಿಸಿದೆ. ರಾಮನಗರ ಜಿಲ್ಲಾ ಎಸ್‌ಪಿಯಾಗಿದ್ದ ಬಿ. ರಮೇಶ್‌ರನ್ನು 5 ತಿಂಗಳ ಹಿಂದೆ ಪಶ್ಚಿಮ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು.

ಡಿಸಿಪಿ ರವಿ ಚನ್ನಣ್ಣನವರ್ ಹೇಳಿದ ಮಹಿಳಾ ಐಪಿಎಸ್ ಅಧಿಕಾರಿಯ ಯಶೋಗಾಥೆ! ಡಿಸಿಪಿ ರವಿ ಚನ್ನಣ್ಣನವರ್ ಹೇಳಿದ ಮಹಿಳಾ ಐಪಿಎಸ್ ಅಧಿಕಾರಿಯ ಯಶೋಗಾಥೆ!

ಶನಿವಾರ ರಮೇಶ್‌ರನ್ನು ಕೆಎಸ್ಆರ್‌ಪಿ 9ನೇ ಬೆಟಾಲಿಯನ್ ಕಮಾಂಡೆಂಟ್ ಆಗಿ ವರ್ಗಾವಣೆ ಮಾಡಲಾಗಿತ್ತು. ಅವರ ಸ್ಥಾನಕ್ಕೆ ಎಸ್. ಗಿರೀಶ್‌ರನ್ನು ನೇಮಕ ಮಾಡಲಾಗಿತ್ತು. ಈ ಆದೇಶವನ್ನು ಬಿ. ರಮೇಶ್ ಸಿಎಟಿಯಲ್ಲಿ ಪ್ರಶ್ನೆ ಮಾಡಿದ್ದರು.

ಸಿಬಿಐ ದಾಳಿ ಮಾಡಿದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಯಾರು ಸಿಬಿಐ ದಾಳಿ ಮಾಡಿದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಯಾರು

CAT Stays Transfer OF Bengaluru West Division DCP

ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ವರ್ಷಕ್ಕೂ ಮುನ್ನವೇ ನನ್ನನ್ನು ವರ್ಗಾವಣೆ ಮಾಡಲಾಗಿದೆ. ಈ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸಿಎಟಿ ವರ್ಗಾವಣೆ ಆದೇಶಕ್ಕೆ ತಡೆ ನೀಡಿದೆ.

ಐಪಿಎಸ್ ಮಧುಕರ್ ಶೆಟ್ಟಿ ನಿಗೂಢ ಸಾವು: ತಿಪ್ಪೆ ಸಾರಿಸಿದ ತಜ್ಞರ ಸಮಿತಿ ವರದಿ ಐಪಿಎಸ್ ಮಧುಕರ್ ಶೆಟ್ಟಿ ನಿಗೂಢ ಸಾವು: ತಿಪ್ಪೆ ಸಾರಿಸಿದ ತಜ್ಞರ ಸಮಿತಿ ವರದಿ

ಬಿ. ರಮೇಶ್‌ರನ್ನು ಶನಿವಾರ ವರ್ಗಾವಣೆ ಮಾಡಲಾಗಿತ್ತು. ಭಾನುವಾರ ರಜೆ ದಿನವಾಗಿತ್ತು. ಸೋಮವಾರ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು. ಮಧ್ಯಾಹ್ನ ಅರ್ಜಿ ವಿಚಾರಣೆ ಸಿಎಟಿಯಲ್ಲಿ ನಡೆದಿತ್ತು. ಸಿಎಟಿ ಆದೇಶದ ಬಳಿಕ ಗೃಹ ಇಲಾಖೆ ವರ್ಗಾವಣೆಯನ್ನೇ ರದ್ದು ಮಾಡಿದೆ.

ಕಾನೂನೂ ಹೋರಾಟದಲ್ಲಿ ಗೆದ್ದಿರುವ ಬಿ. ರಮೇಶ್ ಪಶ್ಚಿಮ ವಿಭಾಗದ ಡಿಸಿಪಿಯಾಗಿ ಮುಂದುವರೆಯಲಿದ್ದಾರೆ. ಮುಂದಿನ ವಿಚಾರಣೆಯನ್ನು ಸಿಎಟಿ ನವೆಂಬರ್ 18ಕ್ಕೆ ಮುಂದೂಡಿದೆ.

English summary
Central Administrative Tribunal (CAT) has stayed the transfer order of B. Ramesh Deputy Commissioner of Police, West Division Bengaluru City. Home department cancelled the transfer order after CAT stay. B. Ramesh posted for west division 5 months ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X