ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಅಸ್ತಮಾ ಸಮಸ್ಯೆಯಿಂದ ಶೇ 30ರಷ್ಟು ಹೊರರೋಗಿಗಳ ಸಂಖ್ಯೆ ಏರಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್‌ 20: ಕಳೆದ ವಾರ ಬೆಂಗಳೂರನಲ್ಲಿ ಮಳೆ ಸುರಿದು ನಗರದಲ್ಲಿ ಅನೇಕ ಬಡಾವಣೆಗಳಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದವು. ಆದರೆ, ಇದರಿಂದಾಗಿ ನಗರದಲ್ಲಿ ಸಾಕಷ್ಟು ಹವಾಮಾನ ಬದಲಾವಣೆಯಾಗಿರುವ ಪರಿಣಾಮ ಬೆಂಗಳೂರಿನ ಕೆಲವು ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗಗಳು ಭರ್ತಿಯಾಗುತ್ತಿವೆ. ಪ್ರಮುಖವಾಗಿ ಉಸಿರಾಟದ ತೊಂದರೆ, ಕೆಮ್ಮು ಶೀತ ನೆಗಡಿ, ಅಸ್ತಮಾ, ಗಂಟಲಿನಲ್ಲಿ ಕಿರಿಕಿರಿ, ಜ್ವರ ಹೀಗೆ ಅನೇಕ ಕಾಯಲೆಗಳಿಗೆ ತುತ್ತಾಗಿರುವ ಪ್ರಕರಣಗಳು ಆಸ್ಪತ್ರೆಗಳಲ್ಲಿ ಏರಿಕೆಯಾಗುತ್ತಿದ್ದು, ಹೊರರೋಗಿ ಪ್ರಕರಣಗಳಲ್ಲಿ ಶೇ. 30ರಷ್ಟು ಏರಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ.

ನಗರಗದಲ್ಲಿ ಕಳೆದ ಒಂದೆರೆಡು ತಿಂಗಳಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ಕೆಮ್ಮು, ನೆಗಡಿ ಶೀತ, ಗಂಟಲು ಸಮಸ್ಯೆ ಜ್ವರ ಅಲ್ಲದೆ ಧೂಳಿನ ಅಲರ್ಜಿಗೆ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಒಂದರ ಮೇಲೊಂದು ಅನೇಕ ಖಾಯಲೆಗಳು ಅಂಟಿಕೊಂಡಂತೆ ಖಾಯಿಲಿಗೆ ಜನರು ತುತ್ತಾಗಿದ್ದಾರೆ. ಇನ್ನು ಉಸಿರಾಟದ ತೊಂದಿರೆ ಇರುವ ಜನರಿಗೆ ಅಲರ್ಜಿ ಕಾಣಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ ಎಂದು ವೈದ್ಯರು ಹೇಳಿಕೊಂಡಿದ್ದಾರೆ.

ಜನವರಿ ಮತ್ತು ಫೆಬ್ರುವರಿ ತಿಂಗಳನ್ನು ಹೊಲಿಸಿದರೆ ಉಸಿರಾಟದ ತೊಂದರೆ ಇರುವ ಪ್ರಕರಣಗಳು ಏಪ್ರಿಲ್‌ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ಏರಿಕೆ ಕಂಡಿವೆ. ಇನ್ನು ವೈದ್ಯರು ಹೇಳುವಂತೆ ಕೋವಿಡ್‌ ಕಡಿಮೆಯಾದಂತೆ ಜನರು ತಮ್ಮ ಆರೋಗ್ಯದ ಕಾಳಜಿ ಗಮನಹರಿಸುತ್ತಿಲ್ಲ. ಇದರಿಂದಲೂ ದಿನನಿತ್ಯವು ಕಾಡುವ ಅನೇಕ ರೋಗಗಳು ಜನರನ್ನು ಕಾಡುತ್ತಿದ್ದು ಸಾರ್ವಜನಿಕರು ಆರೋಗ್ಯದ ಕುರಿತು ತೀರಾ ಎಚ್ಚರದಿಂದ ಇರಬೇಕಾಗಿದೆ.

Cases of respiratory distress in the city A 30 percent increase in Bengaluru

ಬೆಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರಾದ ಡಾ. ಮೆನನ್‌ ಅವರು ಹೇಳುವಂತೆ, "ಮಾಸ್ಕ್‌ ಧರಿಸುವದನ್ನು ನಿಲ್ಲಿಸಬಾರದು. ಹವಾಮಾನದ ಬದಲಾವಣೆ ಹಾಗೂ ಅಲರ್ಜಿ, ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿರುವುದು ಮಾಲಿನ್ಯಕಾರಕಗಳಿಂದ ಉಂಟಾಗುತ್ತದೆ. ಅಲರ್ಜಿಯನ್ನು ಉಂಟುಮಾಡುತ್ತಿರುವ ಧೂಳಿನ ಕಣಗಳು ನಗರಗಳಲ್ಲಿ ಹೆಚ್ಚತ್ತಿದೆ. ಹೊರಗಡೆಯಿಂದ ಮನೆಗೆ ಪ್ರವೇಶಿದಾಗ ನಾವು ಸ್ಚಚ್ಛತೆಯಿಂದ ಇರಬೇಕಾಗುತ್ತದೆ. ಧೂಳು ಮತ್ತು ಹಾನಿಕಾರಕ ಕಣಗಳು ಹೆಚ್ಚಾಗಿ ನಮ್ಮ ಉಸಿರಲ್ಲಿ ಸೇರಿಕೊಂಡರೆ ಇಂತಹ ಡಸ್ಟ್‌ ಅಲರ್ಜಿಯಂತಹ ಕಾಯಿಲೆಗಳು ಹುಟ್ಟಿಕೊಂಡು ಇದರಿಂದ ಅನೇಕ ಕಾಯಿಲೆ ಹರಡುತ್ತವೆ,'' ಎಂದು ಹೇಳಿದರು.

''ಇನ್ನುಉಸಿರಾಟದ ಕಾಯಲೆಗಳಿಂದ ಗುಣವಾಗಬೇಕಾದರೆ ನಾವು ದಿನನಿತ್ಯದ ಸಮಯದಲ್ಲಿ ಪಾರ್ಕ್‌ಗಳಲ್ಲಿ ಜಾಗಿಂಗ್‌ ಮಾಡುವುದನ್ನು ನಿಲ್ಲಿಸಬಾರದು. ಈ ಅಭ್ಯಾಸವು ಇಲ್ಲದಿದ್ದರೆ ಉಸಿರಾಟದ ಅಲರ್ಜಿಯಂತಹ ಕಾಯಿಲೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ,'' ಎಂದು ವೈದ್ಯರು ತಿಳಿಸಿದರು.

Recommended Video

ಫ್ರಾಂಚೈಸಿ ಮಾಡಿಕೊಂಡ ದೊಡ್ಡ ತಪ್ಪು | Oneindia Kannada

English summary
Patients suffering from respiratory problems in Bengaluru city have been suffering from a number of ailments, including coughs, colds, colds and throat problems, and allergic reactions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X