ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಬ್ಬಂದಿಯನ್ನು ಬೂಟಿನಿಂದ ತುಳಿದಿದ್ದ ಪ್ರಕರಣ:ಸೆಕ್ಯುರಿಟಿ ಏಜೆನ್ಸಿಗೆ ಬೀಗ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18: ಸಿಬ್ಬಂದಿಯನ್ನು ಬೂಟಿನಿಂದ ತುಳಿದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌​.ಎಸ್​.ಆರ್​. ಲೇಔಟ್​ನ ಸೆಕ್ಯುರಿಟಿ ಫೋರ್ಸ್​ ಆ್ಯಂಡ್ ಹೌಸ್ ಕೀಪಿಂಗ್ ಸರ್ವಿಸಸ್ ಏಜೆನ್ಸಿಯ ನೋಂದಣಿಯನ್ನು ರದ್ದುಪಡಿಸಲಾಗಿದೆ.

ಸೆಕ್ಯುರಿಟಿ ಕಂಪನಿಯೊಂದರ ಮಾಲೀಕ ತನ್ನ ಸಿಬ್ಬಂದಿಯನ್ನು ಕಾಲಿನಿಂದ ತುಳಿದು ಅಮಾನವೀಯವಾಗಿ ನಡೆಸಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು.

ಬೆಂಗಳೂರು: ಮಾಲೀಕನ ಅಮಾನವೀಯ ವರ್ತನೆ ಕ್ಯಾಮರಾದಲ್ಲಿ ಸೆರೆಬೆಂಗಳೂರು: ಮಾಲೀಕನ ಅಮಾನವೀಯ ವರ್ತನೆ ಕ್ಯಾಮರಾದಲ್ಲಿ ಸೆರೆ

ಸಚಿವ ಎಸ್. ಸುರೇಶ್ ಕುಮಾರ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದ ಸುದ್ದಿಯೊಂದು ನನ್ನ ಗಮನ ಸೆಳೆದಿತ್ತು.

Case In Which The staff was Harassed Security Agency Locks

ಮಾಲೀಕರೊಬ್ಬರು ತನ್ನ ನೌಕರನನ್ನು ಬೂಟು ಕಾಲಲ್ಲಿ ಒದ್ದು ಹಾಕುವ ದೃಶ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತಷ್ಟೇ ಅಲ್ಲದೆ ಆಕ್ರೋಶ ಉಂಟು ಮಾಡಿತ್ತು. ನಾನು ಕೊಟ್ಟ ಸೂಚನೆಯ ಮೇರೆಗೆ ಬೆಂಗಳೂರು ಸೆಕ್ಯೂರಿಟಿ ಫೋರ್ಸ್ ಆ್ಯಂಡ್ ಹೌಸ್ ಕೀಪಿಂಗ್ ಸರ್ವೀಸಸ್ ಸಂಸ್ಥೆಯ ನೊಂದಣಿ ಪತ್ರವನ್ನು ರದ್ದು ಪಡಿಸಲಾಗಿರುತ್ತದೆ ಎಂದು ಟ್ವೀಟ್ ಮಾಡಿ ಆದೇಶ ಪ್ರತಿಯನ್ನೂ ಲಗತ್ತಿಸಿದ್ದಾರೆ.

ಕೆಳಗೆ ಬಿದ್ದ ಸೆಕ್ಯುರಿಟಿ ಸೂಪರ್​ವೈಸರ್ ಮುಖದ ಮೇಲೆ ಕಾಲನ್ನೊತ್ತಿ ತುಳಿಯುತ್ತಿರುವ ಮಾಲೀಕನ ವಿಡಿಯೋ ವೈರಲ್ ಆಗಿತ್ತು. 'ಆ ಸಿಬ್ಬಂದಿ ಹಿಂದಿ ಭಾಷೆಯಲ್ಲಿ ಬೇಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. ದಯವಿಟ್ಟು ಈ ಬಾರಿ ನಮ್ಮನ್ನು ಕ್ಷಮಿಸಿ. ಇನ್ನೊಮ್ಮೆ ನನ್ನ ಜೀವನದಲ್ಲಿ ಈ ರೀತಿಯ ತಪ್ಪನ್ನು ಮಾಡುವುದಿಲ್ಲ' ಎಂದು ಬೇಡಿಕೊಂಡಿದ್ದರು. ಸೆಕ್ಯುರಿಟಿ ಗಾರ್ಡ್​ ಮತ್ತು ಮಾಲೀಕ ಮೂವರೂ ಅಸ್ಸಾಂ ಮೂಲದವರು ಎನ್ನಲಾಗಿತ್ತು.

ಸಲೀಂ ಖಾನ್ ಎಂಬ ಮಾಲೀಕ ತನ್ನ ಸಿಬ್ಬಂದಿಯನ್ನು ಕೆಳಕ್ಕೆ ತಳ್ಳಿ ಕಾಲಿನಿಂದ ತುಳಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು.

English summary
In connection with the inhumane case of booting staff The registration of the Layout Security Agency has been canceled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X