ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಅನುಮತಿ ಇಲ್ಲದೇ ರಸ್ತೆ ಅಗೆದರೆ ಎಫ್‌ಐಆರ್

|
Google Oneindia Kannada News

ಬೆಂಗಳೂರು, ಫೆಬ್ರವರಿ 04; ಬೆಂಗಳೂರು ನಗರದ ರಸ್ತೆ ಗುಂಡಿ ವಿಚಾರ ಸದಾ ಚರ್ಚೆಯಲ್ಲಿರುತ್ತದೆ. ರಸ್ತೆ ಸರಿ ಮಾಡಿ ಡಾಂಬಾರು ಹಾಕಿದ ಮರುದಿನವೇ ಅಗೆದು ಹಾಕಲಾಗಿರುತ್ತದೆ. ಇದಕ್ಕೆ ಕಡಿವಾಣ ಹಾಕು ಪಾಲಿಕೆ ಮುಂದಾಗಿದೆ.

ನಗರದಲ್ಲಿ ಅನುಮತಿ ಇಲ್ಲದೆ ರಸ್ತೆ ಅಗೆಯುವ ಏಜೆನ್ಸಿಗಳ ವಿರುದ್ಧ ದೂರು ದಾಖಲು ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಬೆಂಗಳೂರು; ರಸ್ತೆ ಗುಂಡಿ ತಪ್ಪಿಸುವಾಗ ಅಪಘಾತ, ಶಿಕ್ಷಕಿ ಸಾವು ಬೆಂಗಳೂರು; ರಸ್ತೆ ಗುಂಡಿ ತಪ್ಪಿಸುವಾಗ ಅಪಘಾತ, ಶಿಕ್ಷಕಿ ಸಾವು

ಅನುಮತಿ ಇಲ್ಲದೇ ರಸ್ತೆ ಅಗೆದರೆ ಜಲಮಂಡಳಿ, ಬೆಸ್ಕಾಂ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ. ಈ ಮೂಲಕ ನಗರದಲ್ಲಿನ ರಸ್ತೆ ಗುಂಡಿ ಸಮಸ್ಯೆಗೆ ಪರಿಹಾರ ಹುಡುಕಲು ಪಾಲಿಕೆ ಪ್ರಯತ್ನ ನಡೆಸಿದೆ.

ಇನ್ನೂ ಒಂದು ವಾರ ಪೀಣ್ಯ ಫ್ಲೈ ಓವರ್ ವಾಹನಗಳಿಗೆ ಬಂದ್ ಇನ್ನೂ ಒಂದು ವಾರ ಪೀಣ್ಯ ಫ್ಲೈ ಓವರ್ ವಾಹನಗಳಿಗೆ ಬಂದ್

Road

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾತನಾಡಿದ್ದು, "ಸರ್ಕಾರಿ ಏಜೆನ್ಸಿ ಎಂಬ ಕಾರಣಕ್ಕೆ ಬಿಬಿಎಂಪಿ ಅನುಮತಿ ಇಲ್ಲದೇ ಅವರು ರಸ್ತೆ ಅಗೆಯುವಂತಿಲ್ಲ. ಅನುಮತಿ ಇಲ್ಲದೇ ರಸ್ತೆ ಅಗೆಯುವ ಕೆಲಸ ಮಾಡಲಾಗುತ್ತಿದೆ" ಎಂದರು.

ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸುಪ್ರೀಂ ಒಪ್ಪಿಗೆ ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸುಪ್ರೀಂ ಒಪ್ಪಿಗೆ

"ಇದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ. ಆದ್ದರಿಂದ ಅನುಮತಿ ಇಲ್ಲದೇ ರಸ್ತೆ ಅಗೆಯುವ ಕೆಲಸ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಆಯುಕ್ತರು ಹೇಳಿದರು.

ಹೊಸದಾಗಿ ಮಾಡಿದ ರಸ್ತೆಯನ್ನು ಕೆಲವೇ ದಿನಗಳಲ್ಲಿ ಅಗೆಯಲಾಗುತ್ತದೆ. ಈ ಕುರಿತು ಜನರು ಬಿಬಿಎಂಪಿಗೆ ಸದಾ ದೂರು ಹೇಳುತ್ತಿದ್ದರು. ಆದ್ದರಿಂದ ಕಾನೂನು ಕ್ರಮದ ಮೂಲಕ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಮುಂದಾಗಿದೆ.

ಹೈಕೋರ್ಟ್ ಅಸಮಾಧಾನ; ಬೆಂಗಳೂರಿನ ರಸ್ತೆ ಗುಂಡಿ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. 2015ರಲ್ಲಿ ಕೋರಮಂಗಲದ ನಿವಾಸಿ ವಿಜಯ್ ಮೆನನ್ ಬೆಂಗಳೂರಿನ ರಸ್ತೆ ದುಸ್ಥಿತಿಗಳ ಕುರಿತು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಏಜೆನ್ಸಿಗಳ ನಡುವೆ ಇರುವ ಸಮನ್ವಯತೆ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.

ಇಂದು ರಸ್ತೆ ರಿಪೇರಿ ಮಾಡಲಾಗುತ್ತದೆ, ನಾಳೆ ಮತ್ತೆ ಅಗೆಯಲಾಗುತ್ತದೆ ಏಕೆ ಹೀಗೆ?. ಪಾಲಿಕೆ ಮತ್ತು ಇತರೆ ನಗರಾಡಾಳಿತ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲವೇ?. ಪಾಲಿಕೆ ಅನುಮತಿ ಇಲ್ಲದೆ ರಸ್ತೆ ಅಗೆಯುವ ಸಂಸ್ಥೆಗಳ ವಿರುದ್ಧ ಏನು ಕ್ರಮ ಕೈಗೊಂಡಿದೆ? ಎಂದು ಬಿಬಿಎಂಪಿಯನ್ನು ಕೋರ್ಟ್ ಪ್ರಶ್ನೆ ಮಾಡಿತ್ತು.

ಬಿಬಿಎಂಪಿ ಮುಖ್ಯ ಇಂಜಿನಿಯರ್‌ ಜೈಲಿಗೆ ಕಳಿಸಿದರೆ ಬುದ್ಧಿ ಬರುತ್ತದೆ, ಆತನೇ ಬೆಂಗಳೂರಿನ ರಸ್ತೆಗಳ ದುಸ್ಥಿತಿಗೆ ಕಾರಣ ಎಂದು ಹೇಳಿದ್ದ ನ್ಯಾಯಾಲಯ ಮುಂದಿನ ವಿಚಾರಣೆ ವೇಳೆಗೆ ಇಂಜಿನಿಯರ್ ಖುದ್ದು ಹಾಜರಾಗುವಂತೆ ಸೂಚನೆ ನೀಡಿತ್ತು.

ಫೆಬ್ರವರಿ 7ರಂದು ಈ ಅರ್ಜಿಯ ವಿಚಾರಣೆ ಪುನಃ ನಡೆಯಲಿದೆ. ಪ್ರತಿ ಮಳೆಗೆ ಸಹ ಬೆಂಗಳೂರಿನ ರಸ್ತೆ ಗುಂಡಿ ಬೀಳುತ್ತದೆ ಎಂದರೆ ಯಾವ ತಂತ್ರಜ್ಞಾನ ಬಳಸಿ ರಸ್ತೆ ರಿಪೇರಿ ಮಾಡುತ್ತಿದ್ದೀರಿ ಎಂದು ಬಿಬಿಎಂಪಿಗೆ ಕೋರ್ಟ್ ಪ್ರಶ್ನಿಸಿತ್ತು.

ಮುಂದಿನ ವಿಚಾರಣೆ ವೇಳೆ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಬಿಬಿಎಂಪಿಗೆ ಕೋರ್ಟ್ ಸೂಚನೆ ನೀಡಿದೆ. ರಸ್ತೆ ಗುಂಡಿ ಮುಚ್ಚಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ವಿವರಣೆ ನೀಡಲಿದೆ.

ಜನವರಿ 30ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಸವಾರ ರಸ್ತೆ ಗುಂಡಿ ತಪ್ಪಿಸಲು ಹೋದಾಗ ಹಿಂಭಾಗದಲ್ಲಿ ಕುಳಿತಿದ್ದ ಶಿಕ್ಷಕಿ ಶರ್ಮಳಾ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಘಟನೆ ಬಳಿಕ ಸ್ಥಳೀಯರು ಸ್ಥಳದಲ್ಲಿ ಪ್ರತಿಭಟನೆ ಮಾಡಿದ್ದರು. ಜಲಮಂಡಳಿ ಪೈಪ್ ಹಾಕಲು ರಸ್ತೆ ಅಗೆದು ಹಾಗೆ ಬಿಡಲಾಗಿತ್ತು.

ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಸಹ ಈ ಬಗ್ಗೆ ಪ್ರತಿಭಟನೆ ನಡೆಸಿದ್ದರು. ಬಳಿಕ ಬಿಬಿಎಂಪಿ ಮತ್ತೆ ಗುಂಡಿಯನ್ನು ಮುಚ್ಚಿತ್ತು. ಹೀಗೆ ಜಲಮಂಡಳಿ ಪೈಪ್‌ ಆಳವಡಿಕೆ, ಬೆಸ್ಕಾಂ ಕೇಬಲ್ ಅಳವಡಿಕೆಗಾಗಿಯೇ ರಸ್ತೆ ಅಗೆಯಲಾಗುತ್ತಿದೆ.

English summary
Bruhat Bengaluru Mahanagara Palike (BBMP) has instructed officials to file cases against agencies who digging up roads without permission from BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X