ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಬರ್ ಕ್ರೈಂ ನಿಂದ ಮಹಿಳೆಯರ ರಕ್ಷಣೆಗೆ ಕಾರ್ಟೂನು

|
Google Oneindia Kannada News

ಬೆಂಗಳೂರು, ಡಿಸೆಂಬರ್ 03: ಸೈಬರ್ ಅಪರಾಧಗಳಿಂದ ಮಹಿಳೆಯರನ್ನು ರಕ್ಷಿಸಲು ಕಾರ್ಟೂನ್ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ.

'ಭೇಟಿ ಕೋ ಬಚಾವೊ ಸೈಬರ್ ಕ್ರೈಂ ಸೇ' ಹೆಸರಲ್ಲಿ ಕಾರ್ಟೂನನ್ನು ಬಿಡುಗಡೆ ಮಾಡಿದ್ದು, ಯಾವ ರೀತಿಯ ಸೈಬರ್ ಕ್ರೈಂ ಗಳಿದ್ದು, ಅವುಗಳಿಂದ ಹೇಗೆ ಮಹಿಳೆಯರು ವಂಚನೆಗೆ ಒಳಗಾಗುತ್ತಾರೆ ಎಂಬುದನ್ನು ಚಿತ್ರಗಳ ಮೂಲಕ ತೋರಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.

Cartoon For Women Safety And Cyber Crime

ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಂಗ್, ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಚಿತ್ರಗಳನ್ನು ಕೆಟ್ಟದಾಗಿ ಬಳಸುವುದು, ಕ್ಯಾಮೆರಾ ಹ್ಯಾಕ್ ಮಾಡುವುದು, ಡೇಟಿಂಗ್ ವೆಬ್‌ಸೈಟ್ ಮೂಲಕ ವಂಚನೆ, ಕೆಲಸ ಕೊಡಿಸುವ ಹೆಸರಲ್ಲಿ ವಂಚನೆ, ಆನ್‌ಲೈನ್ ಗೇಮ್ಸ್ ಹೆಸರಲ್ಲಿ ವಂಚನೆ, ಪ್ರೊಫೈಲ್ ಹ್ಯಾಕಿಂಗ್, ಚಿತ್ರಗಳನ್ನು ಬದಲಾಯಿಸುವುದು ಇನ್ನೂ ಹಲವು ರೀತಿಯ ವಂಚನೆಗಳು ಹೇಗೆ ನಡೆಯುತ್ತವೆ ಹಾಗೂ ಅದರಿಂದ ಎಚ್ಚರಿಕೆಯಿಂದ ಇರುವುದು ಹೇಗೆ ಎಂಬುದನ್ನು ಚಿತ್ರಗಳಲ್ಲಿ ಹೇಳಲಾಗಿದೆ.

Cartoon For Women Safety And Cyber Crime

ಹಲವು ಪೊಲೀಸ್ ಉನ್ನತಾಧಿಕಾರಿಗಳು ಮತ್ತು ಕೆಲವು ಉತ್ಸಾಹಿ ಯುವರು ಸೇರಿ ಈ ಕಾರ್ಟೂನ್‌ಗಳನ್ನು ರಚಿಸಿದ್ದಾರೆ. ಕಲಾವಿದ ಅನುದೀಪ್ ಕರ್ಕೇರಾ ಅವರು ಇಲ್ಲಿನ ಕಾರ್ಟೂನುಗಳನ್ನು ರಚಿಸಿದ್ದಾರೆ.

English summary
Police release cartoon for women safety and cyber crime. Artist Anudeep Karkera Wrote cartoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X