ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ ಕೆ ಶ್ರೀಕಂಠನ್: ಸುದೀರ್ಘ ಸಂಗೀತಮಯ ಬದುಕು ಸ್ತಬ್ಧ

By Srinath
|
Google Oneindia Kannada News

Eminent Carnatic vocalist R K Srikantan passed away in Bangalore
ಬೆಂಗಳೂರು, ಫೆ 18: ದೈವದತ್ತವಾಗಿ ಬಂದಿದ್ದ ಕಂಠಸಿರಿಯೊಂದು ಶಾಶ್ವತ ಮೌನಕ್ಕೆ ಜಾರಿದೆ. ಸುದೀರ್ಘ ಸಂಗೀತಮಯ ಬದುಕು ಸ್ಥಬ್ಧವಾಗಿದೆ. ನಾಡಿನ ಹೆಸರಾಂತ ಗಾಯಕ ಪದ್ಮಭೂಷಣ ರುದ್ರಪಟ್ಟಣ ಕೃಷ್ಣಶಾಸ್ತ್ರಿ ಶ್ರೀಕಂಠನ್ ಅವರು ಬೆಂಗಳೂರಿನ ಶೇಷಾದ್ರಿಪುರಂ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ವಿಧಿವಶರಾಗಿದ್ದಾರೆ.

ಹೃದರಾಬಾದಿನಲ್ಲಿ 10 ದಿನಗಳ ಹಿಂದೆ ನಡೆದ ಸಂಗೀತ ಕಛೇರಿಯಲ್ಲಿ ಹಾಡಿದ್ದೇ ಅವರ ಅಂತಿಮ ಗಾನ. 94 ವರ್ಷದ ಇಳಿಯ ವಯಸ್ಸಿನಲ್ಲೂ ಕಛೇರಿ ನಡೆಸುತ್ತಿದ್ದಾರೆ ಎಂದು ಜನ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ವಿದ್ವಾನ್ ಆರ್ ಕೆ ಶ್ರೀಕಂಠನ್ ಅವರಿಗೆ ಶ್ವಾಸಕೋಶದ ತೊಂದರೆಯಿತ್ತು. ಹಾಗಾಗಿ, ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. (ನಡೆದಾಡುವ ಸಂಗೀತ ವಿಶ್ವಕೋಶ ಆರ್ಕೆ ಶ್ರೀಕಂಠನ್)

ರತ್ನಮಾಲಾ ಪ್ರಕಾಶ್ ಅವರ ತಂದೆ: 1920ರ ಜನವರಿ 14ರಂದು ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ ಸಂಕೇತಿ ಕುಟುಂಬದಲ್ಲಿ ಜನಿಸಿದ ಶ್ರೀಕಂಠನ್, ಮೈಸೂರು ಮಹಾರಾಜರ ಆಸ್ಥಾನದ ಸಂಗೀತ ಕಛೇರಿಯ ಕಾಯಂ ಸದಸ್ಯರಾಗಿದ್ದರು. 94 ವರ್ಷದ ಶ್ರೀಕಂಠನ್ ಅವರು ಪತ್ನಿ ಮೈತ್ರೇಯಿ ಶ್ರೀಕಂಠನ್, ಐವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ರತ್ನಮಾಲಾ ಪ್ರಕಾಶ್ ಹಾಗೂ ರುದ್ರಪಟ್ಟಣಂ ರಮಾಕಾಂತ್ ಅವರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶ್ರೀಕಂಠನ್ ಅವರ ಮಕ್ಕಳು.

ಸುದೀರ್ಘ ಸಂಗೀತಮಯ ಬದುಕು:
ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಶ್ರೀಕಂಠನ್ ಅವರು ಮೊನ್ನೆ ಮೊನ್ನೆಯವರೆಗೂ ದಿನಾ 2 ತಾಸು ಸಂಗೀತಾಭ್ಯಾಸ ಮಾಡುತ್ತಿದ್ದರು. ಅಲ್ಲದೇ, ಪ್ರತಿದಿನ 4 ಗಂಟೆಗಳ ಕಾಲ ಯುವ ಸಂಗೀತಗಾರರಿಗೆ ತರಬೇತಿ ನೀಡುತ್ತಿದ್ದರು. ಇನ್ನು ವರ್ಷಕ್ಕೆ 60ಕ್ಕೂ ಹೆಚ್ಚು ಸಂಗೀತ ಕಛೇರಿ ನಡೆಸುತ್ತಿದ್ದರು 80 ವರ್ಷದ ಸುದೀರ್ಘ ಸಂಗೀತಮಯ ಬದುಕು ಅವರದ್ದು. ಆಕಾಶವಾಣಿಯೊಂದಿಗೆ ಸುದೀರ್ಘ ಕಾಲ ಗುರುತಿಸಿಕೊಂಡಿದ್ದರು.

English summary
Rudrapatna Krishnashastri Srikantan (94) a vocalist of the Karnataka Sangeeta tradition of South Indian music passed away in Bangalore on Feb 17th night. Srikantan was born to a Sanketi family in Rudrapatna, Hassan district of Karnataka, on 14 January 1920
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X