ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ರಾತ್ರಿ ಚಾಲಕನ ಹಣೆಗೆ ಗನ್ ಇಟ್ಟು ಕಾರು ದರೋಡೆ

|
Google Oneindia Kannada News

ಬೆಂಗಳೂರು, ಜನವರಿ 22: ಬೆಂಗಳೂರಲ್ಲಿ ಕಾರು ಚಲಾಯಿಸುವುದೇ ಕಷ್ಟವಾಗಿದೆ. ದರೋಡೆಕೋರರು, ಕಳ್ಳರ ಹಾವಳಿ ಹೆಚ್ಚಾಗಿದೆ.

ಖಾಸಗಿ ಕಂಪನಿ ನೌಕರರ ಹಣೆಗೆ ಗನ್ ಇಟ್ಟು ಬೆದರಿಸಿ ಸುಲಿಗೆ ಪ್ರಕರಣದಲ್ಲಿ ತಮ್ಮನ್ನು ಬಂಧಿಸಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆಸಿ ದರೋಡೆಕೋರರು ತಪ್ಪಿಸಿಕೊಂಡಿರುವ ಘಟನೆ ಪೀಣ್ಯದ ಬಳಿ ನಡೆದಿದೆ.

ಮಂಡ್ಯದಲ್ಲಿ ಮಾರ್ವಾಡಿ ಕೊಂದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳುಮಂಡ್ಯದಲ್ಲಿ ಮಾರ್ವಾಡಿ ಕೊಂದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ವರ್ಲ್ಡ್ ಟ್ರೇಡ್ ಸೆಂಟರ್‌ನ ಅಮೆಜಾನ್ ಕಂಪನಿಯ ಉದ್ಯೋಗಿ ಗಿರೀಶ್ ಎಂಬುವರೇ ದರೋಡೆಗೆ ಒಳಗಾಗಿದ್ದು, ಕೆಲಸ ಮುಗಿಸಿ ರಾತ್ರಿ ಅವರು ಮನೆಗೆ ಮರಳುವಾಗ ಈ ಅವಘಡ ನಡೆದಿದೆ.

Car Robbery In Bengaluru

ಗಿರೀಶ್ ಅವರಿಂದ ಮೊಬೈಲ್, ಹಣ ಮಾತ್ರವಲ್ಲದೆ ಕಾರನ್ನು ಸಹ ಕಳ್ಳತನ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದರು.

ಅಮೆಜಾನ್ ಕಂಪನಿ ಉದ್ಯೋಗಿ ಗಿರೀಶ್ ರಾತ್ರಿ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಅವರು ಮನೆಗೆ ಮರಳುತ್ತಿದ್ದರು. ಆಗ ನೆಲಗದರನಹಳ್ಳಿ ನೈಸ್ ರಸ್ತೆಯ ಮೇಲ್ಸೇತುವೆಯಲ್ಲಿ ಅವರ ಕಾರನ್ನು ರಾತ್ರಿ 12.30ರಲ್ಲಿ ಅಡ್ಡಗಟ್ಟಿ ನಾಲ್ವರು, ಹಣೆಗೆ ಗನ್ ಇಟ್ಟು ಕೆಳಗೆ ಇಳಿಸಿದ್ದರು.

ಆಗ ಮೊಬೈಲ್ ಮತ್ತ 17 ಸಾವಿರ ನಗದು ಕಸಿದುಕೊಂಡ ಆರೋಪಿಗಳು, ನಂತರ ಗಿರೀಶ್ ಅವರ ಸ್ವಿಫ್ಟ್‌ ಕಾರನ್ನು ಓಡಿಸಿಕೊಂಡು ಹೋಗಿ ತಪ್ಪಿಸಿಕೊಂಡಿದ್ದಾರೆ.

ಪೊಲೀಸರು ಅವರಿದ್ದ ಸುಳಿವು ಪಡೆದು ಬಂಧಿಸಲು ತೆರಳಿದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಕಾರನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ.

English summary
Man Loses His car, Mobile, cash in Robbery Near Peenya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X