ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರದಲ್ಲಿ ಆಕ್ರಿಲಿಕ್ ಕೋನ್ ಪೈಂಟಿಂಗ್ ಕಾರ್ಯಾಗಾರ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 22: ಬೆಂಗಳೂರಿನ ಎಲ್ಲಾ ಮಹಿಳಾ ಕಲಾಪ್ರೇಮಿಗಳಿಗೊಂದು ಆಹ್ವಾನ! ತಜ್ಞರು ನಡೆಸಿಕೊಡುವ ಆಕ್ರಿಲಿಕ್ ಕೋನ್ ಪೈಂಟಿಂಗ್ ಕಾರ್ಯಾಗಾರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದಾಗಿದೆ.

ಈ ಕಾರ್ಯಾಗಾರದಲ್ಲಿ, ಕೋನ್‍ಗಳನ್ನು ಉಪಯೋಗಿಸಿಕೊಂಡು ಆಕ್ರಿಲಿಕ್ ಪೈಂಟ್ ಮಾಡುವುದು ಮತ್ತು ಪೈಪಿಂಗ್‍ನ ಕಲೆಯನ್ನು ಕಲಿಯಬಹುದು. ನಿಮ್ಮದೇ ಸ್ವಂತ ಆಕ್ರಿಲಿಕ್ ಪೈಂಟ್ ಕೋನ್ ಅನ್ನು ಮಾಡುವುದು ಹೇಗೆಂದು ಕಲಿಯುವ ಹಾಗೂ ಇದನ್ನು ವಿವಿಧ ಮೇಲ್ಮೈಗಳಲ್ಲಿ ಅಲಂಕಾರ ಮಾಡಲು ಉಪಯೋಗಿಸುವ ಅವಕಾಶ ನಿಮಗಿದೆ. ವರ್ಲಿ, ಮಧುಬನಿ, ಹೆನ್ನಾ ಇತ್ಯಾದಿ ಸಾಂಪ್ರದಾಯಿಕ ವಿನ್ಯಾಸಗಳನ್ನೂ ನೀವು ಕಲಿತುಕೊಳ್ಳಬಹುದಾಗಿದೆ.

ಆಕ್ರಿಲಿಕ್ ಕೋನ್ ಉಪಯೋಗಿಸಿಕೊಂಡು ನಿಮ್ಮದೇ ಸ್ವಂತ ಕ್ಯಾನ್ವಾಸ್ ಸೃಷ್ಟಿಸಲು ನೀವು ಉತ್ಸುಕರಾಗಿದ್ದೀರಾ! ಹಾಗಿದ್ದರೆ ಪ್ರೊಜೆಕ್ಟ್ ಈವ್‍ಗೆ ಭೇಟಿ ನೀಡಿ. ಪ್ರವೇಶ ಶುಲ್ಕ ಇಲ್ಲ... ಸೀಮಿತ ಸಾಮಥ್ರ್ಯದ ಕಾರ್ಯಕ್ರಮ... ಸಾಮಗ್ರಿಗಳನ್ನು ಒದಗಿಸಲಾಗುತ್ತದೆ.

Excited to create your own canvas using acrylic cone! Visit Project Eve

ದಿನಾಂಕ: ಶುಕ್ರವಾರ, 24ನೇ ಆಗಸ್ಟ್, 2018

ಸಮಯ: ಸಂಜೆ 3

ಸ್ಥಳ: ಪ್ರೊಜೆಕ್ಟ್ ಈವ್, ವಿಆರ್ ಬೆಂಗಳೂರು, ವೈಟ್‍ಫೀಲ್ಡ್

ಪ್ರಾಜೆಕ್ಟ್ ಈವ್ : ರಿಲಯನ್ಸ್ ರೀಟೇಲ್‍ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ. ಬೆಂಗಳೂರಿನ ವಿಆರ್ ಬೆಂಗಳೂರು ಪ್ರಾಜೆಕ್ಟ್ ಈವ್ ಮಳಿಗೆಯು ಮುಖ್ಯವಾಗಿ, 25ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.

ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು! ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಖರೀದಿಸಿದ ವಸ್ತುಗಳು ಹೇಗಿವೆಯೆಂದು ನೋಡಲು ವಿಶಾಲವಾದ ಎರಡು ಟ್ರಯಲ್ ರೂಮ್‍ಗಳು, ಚಾರ್ಜಿಂಗ್ ಡಾಕೆಟ್‍ಗಳು ಮತ್ತು ಎಕ್ಸ್‍ಪ್ರೆಸ್ ಚೆಕ್‍ಔಟ್‍ನ ಸೌಲಭ್ಯಗಳೂ ಇಲ್ಲಿ ಲಭ್ಯ!

English summary
Calling all art loving Eves of Bengaluru! To indulge yourselves in an exclusive acrylic cone painting workshop by experts. At this workshop, learn the art of making and piping acrylic paint using cones
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X