ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ವಿಳಂಬ: ನೂರಾರು ಅಭ್ಯರ್ಥಿಗಳಿಗೆ ತಪ್ಪಿದ ಜಲಮಂಡಳಿ ಪರೀಕ್ಷೆ

|
Google Oneindia Kannada News

ಬೆಂಗಳೂರು, ಮಾರ್ಚ್ 21: ರೈಲು ಬರುವುದು ತಡವಾಗಿದ್ದಕ್ಕೆ 200 ಅಭ್ಯರ್ಥಿಗಳು ಜಲಮಂಡಳಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ರಾಣಿ ಚೆನ್ನಮ್ಮ ರೈಲು ನಿಗದಿತ ಸಮಯಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಿಂದ ಆಗಮಿಸಿದ ನೂರಾರು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

BWSSBಯಲ್ಲಿ ವಿವಿಧ ಹುದ್ದೆಗಳಿವೆ, ಕೂಡಲೇ ಅರ್ಜಿ ಹಾಕಿ BWSSBಯಲ್ಲಿ ವಿವಿಧ ಹುದ್ದೆಗಳಿವೆ, ಕೂಡಲೇ ಅರ್ಜಿ ಹಾಕಿ

ಬೆಳಗ್ಗೆ 10.30ಕ್ಕೆ ಪರೀಕ್ಷೆ ನಿಗದಿಯಾಗಿತ್ತು. ರಾತ್ರಿ 9.45ಕ್ಕೆ ಹುಬ್ಬಳ್ಳಿಗೆ ಬರಬೇಕಿದ್ದ ರೈಲು ತಡರಾತ್ರಿ 1.20ಕ್ಕೆ ಆಗಮಿಸಿದೆ, ಬೆಳಗ್ಗೆ 6.40ಕ್ಕೆ ಬೆಂಗಳೂರು ತಲುಪಬೇಕಿದ್ದ ರೈಲು 11.55ಕ್ಕೆ ಬಂದಿದೆ.

candidates missed the BWSSB exam because of train delay

ಬುಧವಾರ ಬೆಳಗ್ಗೆ 10.30ಕ್ಕೆ ಕಿರಿಯ ಸಹಾಯಕ ಮತ್ತು ಮೀಟರ್ ರೀಡರ್ ಹುದ್ದೆಗಳಿಗೆ ಪರೀಕ್ಷೆ ನಡೆದಿದೆ. ಆದರೆ ರೈಲು ವಿಳಂಬವಾಗಿದ್ದರಿಂದ ಬೆಳಗಾವಿ, ಬಾಗಲಕೋಟೆ, ಹಾವೇರಿ, ಧಾರವಾಡ, ಹುಬ್ಬಳ್ಳಿ ಸೇರಿ ನಾನಾ ಭಾಗಗಳ ಅಭ್ಯರ್ಥಿಗಳು ಪರೀಕ್ಷೆಯಿಂದ ದೂರ ಉಳಿದಿದ್ದಾರೆ.

ತಮ್ಮದಲ್ಲದ ತಪ್ಪಿಗೆ ಪರೀಕ್ಷೆ ಬರೆಯದಂತಾಗಿದ್ದು, ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. ಆದರೆ, ಮರು ಪರೀಕ್ಷೆ ನಡೆಸುವುದು ಅಸಾಧ್ಯ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್‌ನಿಂದ ಶಿವಮೊಗ್ಗದಿಂದ ತಿರುಪತಿಗೆ ಎಕ್ಸ್‌ಪ್ರೆಸ್ ರೈಲು ಮಾರ್ಚ್‌ನಿಂದ ಶಿವಮೊಗ್ಗದಿಂದ ತಿರುಪತಿಗೆ ಎಕ್ಸ್‌ಪ್ರೆಸ್ ರೈಲು

ಮರು ಪರೀಖ್ಷೆಗೆ ಅವಕಾಶವಿಲ್ಲ. ಇಂಥ ಸಂಗತಿಗಳು ನಡೆಯಬಹುದು ಎಂಬ ಕಾರಣಕ್ಕಾಗಿಯೇ ಒಂದು ದಿನ ಮುಂಚೆಯೇ ಆಗಮಿಸಬೇಕಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಏನು ವರದಿ ಕೊಡುತ್ತಾರೆ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

English summary
Hundreds of candidates missed the BWSSB entrance exam because of delay of Train. Candidates have requested to conduct re-exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X