ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕ್ಯಾನ್ಸರ್ ಇದ್ದವರೂ ಕೊರೊನಾ ಸೋಂಕಿನಿಂದ ಚೇತರಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 07: ಕ್ಯಾನ್ಸರ್‌ ರೋಗಿಗಳು ಕೂಡ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ಹಲವು ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿವೆ.

ಕಳೆದ ಎರಡು ತಿಂಗಳುಗಳಿಂದ ಫೋರ್ಟಿಸ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞರು ಕೊರೊನಾ ಸೋಂಕಿಗೊಳಗಾಗಿರುವ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯ ಕುರಿತು ಚರ್ಚೆ ನಡೆಸಿದ್ದಾರೆ.

ಕೊರೊನಾ ಸೋಂಕಿಗೊಳಗಾಗಿರುವ ರಾಜ್ಯದ ಹಲವು ಕ್ಯಾನ್ಸರ್ ರೋಗಿಗಳು ಕೂಡ ಯಾವುದೇ ಅಡ್ಡ ಪರಿಣಾಮವಿಲ್ಲದೆ, ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಬೆಳವಣಿಗೆಗಳು ಕೂಡ ಗೋಚರವಾಗಿದೆ. ಹಾಗೆಯೇ ವೈದ್ಯರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು

ಇದೇ ರೀತಿಯ ಚರ್ಚೆಯನ್ನು ವಿಕ್ರಮ್ ಆಸ್ಪತ್ರೆಯಲ್ಲಿರುವ ಕ್ಯಾನ್ಸರ್ ತಜ್ಞರೂ ಕೂಡ ನಡೆಸಿದ್ದಾರೆ. ಅಭಿದಮನಿ ಚಿಕಿತ್ಸೆಯನ್ನು ಓರಲ್ ಕೀಮೋ ಎಂದು ಬದಲಾಯಿಸಬೇಕೇ ಮತ್ತು ವಾರಕ್ಕೆ ಒಂದು ಬಾರಿ, ಮೂರು ವಾರಗಳಿಗೊಮ್ಮೆ ಮಾಡಬೇಕೇ ಎಂಬುದರ ಕುರಿತು ಚರ್ಚೆ ನಡೆಸಿದ್ದೇವೆಂದು ವಿಕ್ರಮ್ ಆಸ್ಪತ್ರೆಯ ಡಾ.ನಿತಿ ರೈಜಾಡಾ ಹೇಳಿದ್ದಾರೆ.

ಆದರೆ, ಇಲ್ಲಿಯೂ ಸಾಮಾನ್ಯ ಸೋಂಕಿತರಂತೆಯೇ ಕ್ಯಾನ್ಸರ್ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿರುವ ಬೆಳವಣಿಗೆಗಳು ಕಂಡು ಬಂದಿವೆ.

ಕೊರೊನಾ ಪೀಡಿದ ಕ್ಯಾನ್ಸರ್ ರೋಗಿಗಳಿಗೆ ಇಮ್ಯುನೊಥೆರಪಿಗಳು ನಡೆಸಿರುವುದು ಉತ್ತಮ ಫಲಿತಾಂಶಗಳನ್ನು ನೀಡಿದೆ ಎಂದು ಅಧ್ಯಯನಗಳು ತಿಳಿಸಿವೆ, ಆದರೆ, ನಾವು ಬೋನ್ ಮಾರೋ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಯನ್ನು ನಿಲ್ಲಿಸಿದ್ದೇವೆ. ಇದೀಗ ಮತ್ತೆ ಪುನರಾರಂಭಿಸುತ್ತೇವೆಂದು ಮಾಹಿತಿ ನೀಡಿದ್ದಾರ.

ವಿಭಿನ್ನ ರೀತಿಯ ಕ್ಯಾನ್ಸರ್

ವಿಭಿನ್ನ ರೀತಿಯ ಕ್ಯಾನ್ಸರ್

ಪ್ರತಿಯೊಬ್ಬ ರೋಗಿಗೂ ವಿಭಿನ್ನ ರೀತಿಯ ಕ್ಯಾನ್ಸರ್ ಇದೆ. ಶ್ವಾಸಕೋಶ ಕ್ಯಾನ್ಸರ್, ಲಿಂಫೋಮಾ, ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಗೊಳಗಾಗಿದ್ದಾರೆ. ಕೀಮೋಥೆರಪಿ ಮತ್ತು ಕೊವಿಡ್ -19 ಎರಡೂ ರೋಗಿಯ ಸ್ಥಿತಿ ಹದಗೆಡಲು ಕಾರಣವಾಗಬಹುದು ಎಂದು ತಿಳಿಯಲಾಗಿತ್ತು. ಕ್ಯಾನ್ಸರ್ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ.

ಫೋರ್ಟಿಸ್ ಆಸ್ಪತ್ರೆಯಲ್ಲಿ ನಾಲ್ವರು ಕ್ಯಾನ್ಸರ್ ರೋಗಿಗಳಿಗೆ ಸೋಂಕು

ಫೋರ್ಟಿಸ್ ಆಸ್ಪತ್ರೆಯಲ್ಲಿ ನಾಲ್ವರು ಕ್ಯಾನ್ಸರ್ ರೋಗಿಗಳಿಗೆ ಸೋಂಕು

ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಸ್ತುತ ನಾಲ್ವರು ಕ್ಯಾನ್ಸರ್ ರೋಗಿಗಳು ಸೋಂಕಿಗೊಳಗಾಗಿದ್ದು, ಇದರಲ್ಲಿ ಮೂವರು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಒಬ್ಬರು 35 ವರ್ಷ ವಯಸ್ಸಿನವರಾಗಿದ್ದಾರೆ.

ಕೊರೊನಾ ಸೋಂಕಿನಿಂದ ಚೇತರಿಕೆ

ಕೊರೊನಾ ಸೋಂಕಿನಿಂದ ಚೇತರಿಕೆ

ಆದರೀಗ ಸೋಂಕು ಪೀಡಿದ ಕ್ಯಾನ್ಸರ್ ರೋಗಿಗಳೂ ಕೂಡ ಸೋಂಕಿನಿಂದ ಸಾಮಾನ್ಯ ವ್ಯಕ್ತಿಗಳಂತೆ ಚೇತರಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೂ ಚೇತರಿಕೆ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

ಕ್ಯಾನ್ಸರ್‌ ಇಲ್ಲದ ರೋಗಿಗಳಂತೆ ಚೇತರಿಕೆ

ಕ್ಯಾನ್ಸರ್‌ ಇಲ್ಲದ ರೋಗಿಗಳಂತೆ ಚೇತರಿಕೆ

ಸೋಂಕು ಪೀಡಿದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ವೇಳೆ ಕೀಮೋಥೆರಪಿ ಮಾರ್ಪಡಿಸುವ ಕುರಿತುಂತೆ ಕೂಡ ಚರ್ಚೆ ನಡೆಸಿದ್ದೇವೆ. ಆದರೆ, ಸೋಂಕಿತರಿಗೆ ಕೀಮೋಥೆರಲಿ ಮುಂದುವರಿಸಿದ ಬಳಿಕವೂ ವೈದ್ಯಕೀಯ ವರದಿ ಕ್ಯಾನ್ಸರ್ ಇಲ್ಲದ ರೋಗಿಗಳಂತೆಯೇ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವುದು ಕಂಡು ಬಂದಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯ ವಿವೇಕ್ ಬೆಳತೂರ್ ಅವರು 'ಆಂಗ್ಲ ಪತ್ರಿಕೆ'ಯೊಂದಕ್ಕೆ ತಿಳಿಸಿದ್ದಾರೆ.

Recommended Video

ಶಾಲಾ ಕಾಲೇಜುಗಳು ಪುನರಾರಂಬದ ಬಗ್ಗೆ Sriramulu ಹೇಳಿದ್ದೇನು | Oneindia Kannada

English summary
Many cancer patients who contracted Covid-19 have recovered without complications, suggesting that they may not be at increased risk of mortality due to their condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X