ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಕ್ತದೊತ್ತಡ, ಮಧುಮೇಹದಿಂದ ಮಾತ್ರವಲ್ಲ ಮಾಲಿನ್ಯದಿಂದಲೂ ಹೃದಯಾಘಾತ

|
Google Oneindia Kannada News

ಬೆಂಗಳೂರು, ನವೆಂಬರ್ 2: ಬೆಂಗಳೂರಿನಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ, ಈ ಪ್ರಕರಣಗಳಿಗೆ ಮಾಲಿನ್ಯವೇ ನೇರ ಕಾರಣ ಎನ್ನಲಾಗುತ್ತಿದೆ. ಕಳೆದ ಎಂಟು ತಿಂಗಳಲ್ಲಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 1,127 ಹೃದಯಾಘಾತ ಪ್ರಕರಣಗಳು ದಾಖಲಾಗಿವೆ.

ಅಧಿಕ ರಕ್ತದೊತ್ತಡ ಅಥವಾ ಮಧುಮೇಹ ಸಮಸ್ಯೆ ಇರುವವರಿಗೆ ಹೃದಯಾಘಾತ ಸಾಮಾನ್ಯ ಆದರೆ ವಾಯುಮಾಲಿನ್ಯವೇ ಇದಕ್ಕೆ ಕಾರಣ ಎನ್ನುವ ವರದಿ ಈಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ.

ಉಪಚುನಾವಣೆ: ಬಿಜೆಪಿಗೆ ಭರ್ಜರಿ ಶಾಕ್‌ ಕೊಟ್ಟ ಡಿ.ಕೆ.ಬ್ರದರ್ಸ್‌ ಉಪಚುನಾವಣೆ: ಬಿಜೆಪಿಗೆ ಭರ್ಜರಿ ಶಾಕ್‌ ಕೊಟ್ಟ ಡಿ.ಕೆ.ಬ್ರದರ್ಸ್‌

ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರನ್ನು ಒಳಗೊಂಡ ಕ್ಲೈಮೇಟ್ ಟ್ರೆಂಡ್ಸ್ ಎಂಬ ತಂಡದ ಅಧ್ಯಯನದ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಕೇವಲ ಹೃದಯ ಸಂಬಂಧಿ ಕಾಯಿಲೆ ಮಾತ್ರವಲ್ಲದೆ ಕೆಮ್ಮು, ನಿರಂತರ ಶೀತ, ಅಸ್ತಮಾ, ಜ್ವರ ಇನ್ನಿತರೆ ಕಾಯಿಲೆಗಳೂ ಇವೆ.

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಳೆದ 5 ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಶೇ. 22ರಷ್ಟು ಹೆಚ್ಚಳವಾಗಿದೆ. ಇವರಲ್ಲಿ ಬಹುತೇಕರು 40 ವರ್ಷ ಒಳಗಿನವರು. ಆದರೆ ಬಹುತೇಕ ಪ್ರಕರಣಗಳು ವಾಯು ಮಾಲಿನ್ಯದಿಂದಾಗಿಯೇ ಹೃದಯಾಘಾತ ಸಂಭವಿಸಿದೆ ಎನ್ನುವ ಮಾಹಿತಿಯನ್ನು ಒತ್ತಿ ಹೇಳುತ್ತಿವೆ.

ಚಂದ್ರಶೇಖರ್ ಬಿಜೆಪಿ ತೊರೆಯೋದು ಬಿಎಸ್ ವೈಗೆ ಮೊದಲೇ ಗೊತ್ತಿತ್ತಾ?!ಚಂದ್ರಶೇಖರ್ ಬಿಜೆಪಿ ತೊರೆಯೋದು ಬಿಎಸ್ ವೈಗೆ ಮೊದಲೇ ಗೊತ್ತಿತ್ತಾ?!

ಹಾಗಾದರೆ ಈ ಎಲ್ಲಾ ಪ್ರಕರಣಗಳು ಮಾಲಿನ್ಯದಿಂದಲೇ ಆಗಿದ್ದು ಎನ್ನುವುದಕ್ಕೆ ಪುರಾವೆ ಏನು ಎಂದರೆ ಕ್ಲೈಮೇಟ್ ಟ್ರೆಂಡ್ಸ್ ನ ಡಾ. ಪಾಟೀಲ ಕೊಟ್ಟಿರುವ ಉತ್ತರ ಇದು.. ಕಳೆದ ವರ್ಷ ಪ್ರಾಯೋಗಿಕವಾಗಿ 1200 ರೋಗಿಗಳ ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದೆವು ಅದರಲ್ಲಿ ಕೇವಲ ಶೇ.10ರಷ್ಟು ಮಾತ್ರ ಅಧಿಕ ರಕ್ತದೊತ್ತಡ ಮತ್ತು ಶೇ.10ರಷ್ಟು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಉಳಿದ ಶೇ.80ರಷ್ಟು ರೋಗಿಗಳಿಗೆ ಯಾವುದೇ ಗಂಭೀರ ಕಾಯಿಲೆಗಳು ಇರಲಿಲ್ಲ. ಶೇ.48ರಷ್ಟು ಮಂದಿ ಮಾತ್ರ ಧೂಮಪಾನ ಮಾಡುತ್ತಿದ್ದರು.ಇದಕ್ಕೆ ಕಾರಣ ಹುಡುಕಿದಾಗ ವಾಯು ಮಾಲಿನ್ಯದಿಂದ ಹೆಚ್ಚು ಮಂದಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.

ವಿಪರೀತ ಟ್ರಾಫಿಕ್‌ ಕೂಡ ಒಂದು ಕಾರಣ

ವಿಪರೀತ ಟ್ರಾಫಿಕ್‌ ಕೂಡ ಒಂದು ಕಾರಣ

ಬೆಂಗಳೂರಿನ ಟ್ರಾಫಿಕ್ ಕೂಡ ಹೃದಯಾಘಾತಕ್ಕೆ ಬಲವಾದ ಕಾರಣವಾಗಿದೆ. ಸಾಮಾನ್ಯವಾಗಿ ಬೈಕ್‌ಗಳಲ್ಲಿ ಸಂಚರಿಸುವವರು ಮಾಸ್ಕ್ ಧರಿಸಬೇಕು ಎಂದು ವೈದ್ಯರು ಹೇಳಿದ್ದರೂ ಕೂಡ ಯಾರು ಕೂಡ ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ. ಬಿಎಂಟಿಸಿ ವಾಯು, ವಜ್ರ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಸ್‌ಗಳಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದು ಒಳಿತು. ಟ್ರಾಫಿಕ್‌ನಲ್ಲಿ ಗಂಟೆ ಗಟ್ಟಲೆ ಎಲ್ಲಾ ವಾಹನಗಳು ಒಂದೇ ಕಡೆ ನಿಂತು ಹೊಗೆಯನ್ನು ಉಗುಳುತ್ತವೆ.

ಮರದ ಎಲೆಗಳನ್ನು ಸುಟ್ಟಾಗ ಮೀಥೇನ್ ಉತ್ಪತ್ತಿ

ಮರದ ಎಲೆಗಳನ್ನು ಸುಟ್ಟಾಗ ಮೀಥೇನ್ ಉತ್ಪತ್ತಿ

ಮರದ ಎಲೆಗಳ ಜತೆ, ಪ್ಲಾಸ್ಟಿಕ್ ಸುಟ್ಟಾಗ ಹಾನಿಕಾರಕ ಮೀಥೇನ್ ಉತ್ಪತ್ತಿ ಮರದ ಎಲೆಗ ಜತೆ ಪ್ಲಾಸ್ಟಿಕ್ ಇನ್ನಿತರೆ ವಸ್ತುಗಳನ್ನು ಸುಟ್ಟಾಗ ಅದರಿಂದ ಮೀಥೇನ್, ಕಾರ್ಬನ್ ಮೋನಾಕ್ಸೈಡ್, ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈಆಕ್ಸೈಡ್ ಉತ್ಪತ್ತಿಯಾಗಿ ಗಾಳಿಯನ್ನು ಸೇರುತ್ತದೆ. ಜಾತಕಾ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ತ್ಯಾಜ್ಯ ಸುಡುವ ಕ್ರಮದ ವಿರುದ್ಧ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ. ಆದರೂ ಇನ್ನೂ 40 ವಾರ್ಡ್ ಗಳಿಗಿಂತಲೂ ಹೆಚ್ಚು ಪ್ರದೇಶಗಳಲ್ಲಿ ತ್ಯಾಜ್ಯವನ್ನು ಸುಡುವ ಪದ್ಧತಿಯನ್ನು ಇನ್ನೂ ಬಿಟ್ಟಿಲ್ಲ.ಇದರಿಂದ ಪೌರಕಾರ್ಮಿಕರಿಗೂ ತೊಂದರೆ ಉಂಟಾಗಲಿದೆ.

ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್ ನಡೆಯ ಬಗ್ಗೆ ಯಾರು, ಏನಂದರು? ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್ ನಡೆಯ ಬಗ್ಗೆ ಯಾರು, ಏನಂದರು?

ಆಟೋ, ಕ್ಯಾಬ್‌ ಡ್ರೈವರ್‌ಗಳೇ ಹೆಚ್ಚು

ಆಟೋ, ಕ್ಯಾಬ್‌ ಡ್ರೈವರ್‌ಗಳೇ ಹೆಚ್ಚು

2017ರ ಏಪ್ರಿಲ್ ನಲ್ಲಿ 40 ವರ್ಷದೊಳಗಿನವರು 1 ಸಾವಿರ ಮಂದಿ ದಾಖಲಾಗಿದ್ದರು.ಇವರಲ್ಲಿ ಕ್ಯಾಬ್ ಮತ್ತು ಆಟೋ ಡ್ರೈವರ್ ಗಳ ಸಂಖ್ಯೆಯೇ ಹೆಚ್ಚು ಎಂದು ತಿಳಿದುಬಂದಿದೆ. ಕಳೆದ 17 ವರ್ಷಗಳಲ್ಲಿ ಮಕ್ಕಳಲ್ಲಿ ಅಸ್ತಮಾ ಸಂಖ್ಯೆ ಶೇ.25ರಷ್ಟು ಹೆಚ್ಚಳವಾಗಿದೆ.

ಕೆಲವು ಉಪಯುಕ್ತ ಸಲಹೆಗಳು

ಕೆಲವು ಉಪಯುಕ್ತ ಸಲಹೆಗಳು

ಹೃದಯಾಘಾತಗಳಿಗೆ ಒಳಗಾಗುವ ಸಾಧ್ಯತೆಯಿರುವವರು ಈ ಕೆಳಕಂಡ ಕ್ರಮವನ್ನು ಕೈಗೊಳ್ಳಬೇಕು: ಜೀವನಶೈಲಿಯಲ್ಲಿ ಬದಲಾವಣೆ
-ಆಹಾರವು ಆರೋಗ್ಯಪೂರ್ಣವಾಗಿದ್ದು, ಕೊಬ್ಬು ಮತ್ತು ಉಪ್ಪಿನ ಪ್ರಮಾಣ ಕಡಿಮೆಯಿರಬೇಕು. ನಾರಿನಂಶ ಹಾಗೂ ಸಂಕೀರ್ಣ ಪಿಷ್ಟಗಳು ಹೆಚ್ಚಿರುವ ಆಹಾರವನ್ನು ಸೇವಿಸಬೇಕು.
-ತೂಕ ಹೆಚ್ಚಿರುವವರು, ತೂಕ ಇಳಿಸಬೇಕು.
-ದೈಹಿಕ ಚಟುವಟಿಕೆ, ಕಸರತ್ತುಗಳನ್ನು ದಿನಂಪ್ರತಿ ಮಾಡಬೇಕು.
-ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಡಯಾಬಿಟೀಸ್, ಹೆಚ್ಚಿನ ರಕ್ತದೊತ್ತಡ ಹಾಗೂ ಹೆಚ್ಚಿನ ಕೊಲ್ಲೆಸ್ಟ್ರಾಲ್ ಹೊಂದಿರುವವರು ಸೂಕ್ತವಾದ ಔಷಧವನ್ನು ಸೇವಿಸುವ ಮೂಲಕ ಈ ಕಾಯಿಲೆಗಳನ್ನು ಹತೋಟಿಯಲ್ಲಿಡಬೇಕು.

English summary
Air pollution may be behind more heart attacks than we think. of heart attacks in the study population were due to exposure to air pollution.Bengaluru is witnessing High number of Heart attack due to air pollution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X