ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ರೈಲಿನ ಹೆಸರು ಬದಲಾಯಿಸಲು ಟ್ವಿಟ್ಟರ್ ಅಭಿಯಾನ

|
Google Oneindia Kannada News

ಬೆಂಗಳೂರು, ಆಗಸ್ಟ್ 28: ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಲು ಟ್ವಿಟ್ಟರ್‌ನಲ್ಲಿ ಅಭಿಯಾನ ಜೋರಾಗಿಯೇ ನಡೆಯುತ್ತಿದೆ.

ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಿ ವಿಶ್ವೇರಯ್ಯ ಹೆಸರು ಅಥವಾ ಜಯಚಾಮರಾಜೇಂದ್ರ ಒಡೆಯರ್ ಹೆಸರು ಇಡಬೇಕೆಂದು ಒತ್ತಾಯ ಪ್ರಾರಂಭವಾಗಿದೆ.

ಟಿಪ್ಪು ಜಯಂತಿ ರದ್ದು: ಹೊಸ ಸರ್ಕಾರದ ಕ್ರಮಕ್ಕೆ ಯಾರು, ಏನಂದ್ರು?ಟಿಪ್ಪು ಜಯಂತಿ ರದ್ದು: ಹೊಸ ಸರ್ಕಾರದ ಕ್ರಮಕ್ಕೆ ಯಾರು, ಏನಂದ್ರು?

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಸರ್ಕಾರ ಪ್ರಾರಂಭಿಸಿದ್ದ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತು. ಹಾಗಾಗಿ ಈಗ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನೂ ಬದಲಾಯಿಸಲು ಒತ್ತಾಯ ಕೇಳಿ ಬರುತ್ತಿದೆ.

Campaign in Twitter to Rename Tippu Express Train

ಬೆಂಗಳೂರು ಮತ್ತು ಮೈಸೂರಿಗೆ ಕೊಡುಗೆ ಕೊಟ್ಟಿರುವ ವಿಶ್ವೇಶ್ವರಯ್ಯ ಅವರ ಹೆಸರು ಅಥವಾ ಒಡೆಯರ್ ಅವರ ಹೆಸರನ್ನು ರೈಲಿಗೆ ಇಡುವುದು ಸೂಕ್ತ ಎಂದು ಕೆಲವರು ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಜಯಂತಿ ರದ್ದು: ಬಿಎಸ್ವೈಗೆ ಜಮೀರ್ ಬಹಿರಂಗ ಸವಾಲುಟಿಪ್ಪು ಜಯಂತಿ ರದ್ದು: ಬಿಎಸ್ವೈಗೆ ಜಮೀರ್ ಬಹಿರಂಗ ಸವಾಲು

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಾಗಿರಲಿಲ್ಲ, ಆತ ಧರ್ಮಾಂದನಾಗಿದ್ದ ಎಂದು ಹಲವರು ಟ್ವೀಟ್ ಮಾಡಿ, ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಲು ಒತ್ತಾಯಿಸಿದ್ದಾರೆ. ಟ್ವಿಟ್ಟರ್‌ನಲ್ಲಿ #RenameTippuExpress ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.

ಟಿಪ್ಪು ಜಯಂತಿ ರದ್ದು : ಬಿಎಸ್‌ವೈ ವಚನ ಭ್ರಷ್ಟ ಎಂದು ಕಾಂಗ್ರೆಸ್ ಟ್ವೀಟ್ಟಿಪ್ಪು ಜಯಂತಿ ರದ್ದು : ಬಿಎಸ್‌ವೈ ವಚನ ಭ್ರಷ್ಟ ಎಂದು ಕಾಂಗ್ರೆಸ್ ಟ್ವೀಟ್

ಟಿಪ್ಪು ಹೆಸರನ್ನು ಉಳಿಸಿಕೊಳ್ಳುವಂತೆಯೂ ಕೆಲವರು ಇದೇ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಿದ್ದಾರೆ. ಟಿಪ್ಪು ಬ್ರಿಟೀಷರ ಪಾಳಿಗೆ ದುಸ್ವಪ್ನವಾಗಿದ್ದ, ಮೈಸೂರು ರಾಜ್ಯಕ್ಕೆ ಅವನು ನೀಡಿದ ಕೊಡುಗೆಗಳು ಅಪಾರ ಎಂದು ಟ್ವೀಟಿಸಿದ್ದಾರೆ.

English summary
A Campaign in twitter started that to rename tippu express train. saying that name the train with Vishweshwaraiah or Wodeyar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X