ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಸರ್ಕಾರದ ಗುಡ್‌ನ್ಯೂಸ್ :ಗೃಹ ನಿರ್ಮಾಣ ವಸ್ತುಗಳ ಬೆೆಲೆ ಇಳಿಕೆ

|
Google Oneindia Kannada News

ಬೆಂಗಳೂರು, ಮೇ21: ಕೇಂದ್ರ ಸರ್ಕಾರ ಕಟ್ಟಡ ಅಥವಾ ಗೃಹ ನಿರ್ಮಾಣ ಮಾಡುವವರಿಗೆ ಗುಡ್ ನ್ಯೂಸ್ ನೀಡಿದೆ. ಸಿಮೆಂಟ್, ಕಬ್ಬಿಣ , ಉಕ್ಕಿನ ದರದಲ್ಲಿ ಇಳಿಕೆಯಾಗು ದಿಟ್ಟ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆೆ. ಸಿಮೆಂಟ್ ಬೆಲೆಯನನ್ನು ಕಡಿಮೆ ಮಾಡಲು ಲಾಜಿಸ್ಟಿಕ್ಸ್ ಕ್ರಮಗಳ ಮೂಲಕ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಟ್ವೀಟ್ ಮಾಡಿದ್ದಾರೆ. ಎಲ್ಲಾ ನಿರ್ಧಿಷ್ಟ ವಿವರಗಳನ್ನು ಅಧಿಸೂಚನೆಯೊಂದಿಗೆ ಹೊರಡಿಸುವುದಾಗಿಯೂ ತಿಳಿಸಿದ್ದಾರೆ.

ಕಬ್ಬಿಣ ಮತ್ತು ಉಕ್ಕಿನದರದಲ್ಲೂ ಇಳಿಕೆಯಾಗಲಿದೆ

ನಾವು ಕಚ್ಚಾ ವಸ್ತು ಮತ್ತು ಕಬ್ಬಿಣ ಮತ್ತು ಉಕ್ಕಿನ ವಿಚಾರದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಕಸ್ಟಮ್ಸ್ ಸುಂಕವನ್ನು ಮಾಪನ ಮಾಡುತ್ತೇವೆ. ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಗವನನ್ನು ಕಡಿಮೆ ಮಾಡುತ್ತೇವೆ. ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನ ಮೇಲಿನ ರಫ್ತು ಸುಂಕವನ್ನು ವಿಧಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸಲ್ ಮೇಲಿನ ಸೆಸ್ ಕಡಿಮೆ ಮಾಡಿರುವ ಪರಿಣಾಮಗಳಿಂದ ಗೃಹ ನಿರ್ಮಾಣ ಸಾಮಗ್ರಿಗಳ ಬೆಲೆಯು ಇಳಿಯಲಿದೆ. ಇದರ ಜೊತೆಗೆ ಕಬ್ಬಿಣ ಮತ್ತು ಉಕ್ಕಿನ ಕಚ್ಚಾ ಸಾಮಗ್ರಿಗಳ ಆಮದು ಸುಂಕವನ್ನು ಇಳಿಸಿರೋದು. ಕಬ್ಬಿಣ ಮತ್ತುಉಕ್ಕಿನ ಉತ್ಪನ್ನಗಳ ರಫ್ತು ಸುಂಕ ವಿಧಿಸಿರೋದನ್ನು ಅವಲೋಕಿಸಿದಾಗ ಗೃಹ ನಿರ್ಮಾಣ ಸಾಮಗ್ರಿಗಳಾದ ಸಿಮೆಂಟ್ , ಕಬ್ಬಿಣ ಮತ್ತು ಉಕ್ಕಿನ ಬೆಲೆಯಲ್ಲಿ ಗಣನೀಯವಾದ ಇಳಿಕೆಯಾಗುವ ಸಾಧ್ಯತೆಗಳಿವೆ.

Calibrating customs duty on raw materials, iron & steel to reduce their prices says FM

ಕೇಂದ್ರ ಸರ್ಕಾರ ಸಿಮೆಂಟ್ , ಕಬ್ಬಿಣ, ಉಕ್ಕಿನ ಬೆಲೆಯನ್ನು ಇಳಿಕೆ ಮಾಡುವುದರಿಂದ ಬಡವ ನೆಮ್ಮದಿಯ ಸೂರನ್ನು ಕಟ್ಟಿಕೊಳ್ಳಲು ಅನುಕೂಲವಾಗಲಿದೆ. ಆದರೆ ಸಿಮೆಂಟ್, ಕಬ್ಬಿಣ, ಉಕ್ಕು ಬೆಲೆ ಎಷ್ಟು ಇಳಿಯಲಿದೆ ಅನ್ನೋದು ಕೆಲ ಸಮಯದಲ್ಲೇ ತಿಳಿಯಲಿದೆ.

Calibrating customs duty on raw materials, iron & steel to reduce their prices says FM

English summary
We are calibrating customs duty on raw materials & intermediaries for iron & steel to reduce their prices. Import duty on some raw materials of steel will be reduced. Export duty on some steel products will be levied tweets FM Nirmala Sitharaman.know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X