ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಿನಸಿ ಮಳಿಗೆಯಾಗಿ ಬದಲಾಗುತ್ತಿದೆ ಸಿದ್ಧಾರ್ಥ ಕನಸಿನ ಕೆಫೆ ಕಾಫಿ ಡೇ

|
Google Oneindia Kannada News

ಬೆಂಗಳೂರು, ನವೆಂಬರ್ 28: ಸಿದ್ಧಾರ್ಥ ಅವರ ಕನಸಿನ ಕೂಸು ಸಿಸಿಡಿ (ಕೆಫೆ ಕಾಫಿ ಡೇ) ದಿನಸಿ ಮಳಿಗೆಯಾಗಿ ಬದಲಾಗುತ್ತಿದೆ.

ಸಿದ್ಧಾರ್ಥ ಅವರ ಅಕಾಲಿಕ ಸಾವಿನ ಬಳಿಕ ಈಗ ಅವರ ಪತ್ನಿ ಮಾಳವಿಕಾ ಸಿದ್ಧಾರ್ಥ ಸಿಸಿಡಿಯ ಜವಾಬ್ದಾರಿ ವಹಿಸಿಕೊಂಡಿದ್ದು ಜಪಾನ್‌ನ ಖ್ಯಾತ ಕಂಪೆನಿಯೊಂದರ ಜೊತೆ ಸೇರಿ ಕೆಫೆಕಾಫಿ ಡೇ ಯನ್ನು ದಿನಸಿ ಮಳಿಗೆಯಾಗಿ ಬದಲಾಯಿಸುತ್ತಿದ್ದಾರೆ.

ವಿ. ಜಿ. ಸಿದ್ದಾರ್ಥ ಮಾಲಿಕತ್ವದ ಗ್ಲೋಬಲ್ ವಿಲೇಜ್ 2700 ಕೋಟಿಗೆ ಮಾರಾಟವಿ. ಜಿ. ಸಿದ್ದಾರ್ಥ ಮಾಲಿಕತ್ವದ ಗ್ಲೋಬಲ್ ವಿಲೇಜ್ 2700 ಕೋಟಿಗೆ ಮಾರಾಟ

ಕಾಫಿ ಡೇ ಎಸೆನ್ಶಿಯಲ್ಸ್‌ ದಿನಸಿ ಮಳಿಗೆಗಳು ಈಗಾಗಲೇ ಕೆಲವು ಕಾರ್ಯನಿರ್ವಹಿಸುತ್ತಿದ್ದು, ಜಪಾನ್‌ ನ ಇಂಪಾಕ್ಟ್‌ ಎಚ್‌ಡಿ ಸಂಸ್ಥೆ ಜೊತೆ ಕೈಜೋಡಿಸಿ ನಷ್ಟದಲ್ಲಿರುವ ಎಲ್ಲ ಕೆಫೆ ಕಾಫಿ ಡೇ ಗಳನ್ನು ಕಾಫಿ ಡೇ ಎಸೆನ್ಶಿಯಲ್ಸ್ ಆಗಿ ಬದಲಾವಣೆ ಮಾಡಲಾಗುತ್ತಿದೆ.

Cafe Coffee Day Shops Is Going To Be Grocery Store

ಕೆಫೆ ಕಾಫಿ ಡೇ ಸೇರಿ ಸಿದ್ಧಾರ್ಥ ಒಡೆತನದ ಸಂಸ್ಥೆಗಳು ನಷ್ಟಕ್ಕೆ ಸಿಲುಕಿದ್ದವು ಇದರಿಂದ ಮನನೊಂದಿದ್ದ ಸಿದ್ಧಾರ್ಥ ಇದೇ ಜುಲೈ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಅಗಲಿಕೆ ನಂತರ ಅವರ ಕನಸಿನ ಕೂಸು ಕಾಫಿ ಡೇ ಅನ್ನು ಉಳಿಸಿಕೊಳ್ಳುವ ಸಲುವಾಗಿ ನಷ್ಟದಲ್ಲಿರುವ ಕಾಫಿ ಡೇ ಗಳನ್ನು ದಿನಸಿ ಮಳಿಗೆಗಳನ್ನಾಗಿ ಬದಲಾವಣೆ ಮಾಡಲಾಗುತ್ತಿದೆ.

"ವಿಜಿ ಸಿದ್ದಾರ್ಥ ಆತ್ಮಹತ್ಯೆಯಲ್ಲ ಐಟಿ ಇಲಾಖೆ ಮಾಡಿದ ಕೊಲೆ"

ಶೇ 50:50 ಪಾಲುದಾರಿಕೆಯಲ್ಲಿ 'ಕಾಫಿ ಡೇ ಎಸೆನ್ಶಿಯಲ್' ಕೆಲಸ ಮಾಡಲಿದ್ದು, ಕಾಫಿ ಡೇ ಯನ್ನು ಪುನಶ್ಚೇತನ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ವ್ಯಾಪರ ಇಲ್ಲದ, ಲಾಭ ಮಾಡದ ಕಾಫಿ ಡೇ ಮಳಿಗೆಗಳನ್ನು ಕಾಫಿ ಡೇ ಎಸೆನ್ಶಿಯಲ್‌ಗಳಾಗಿ ಬದಲಾಯಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ.

ಚಿಕ್ಕಮಗಳೂರಿನ ಕಾಫಿ ಬೀಜ ಸಂಸ್ಕರಕರಣಾ ಘಟಕ ಎಬಿಸಿ ಈಗ ಕಾಫಿ ಖರೀದಿಸುತ್ತಿಲ್ಲ. ಅಷ್ಟೆ ಅಲ್ಲದೆ ಕಾಫಿ ಬೆಳೆಗಾರರಿಗೆ ನೀಡಬೇಕಿದ್ದ ಬಾಕಿಯನ್ನು ತೀರಿಸುವ ಕಾರ್ಯಗಳು ಭರದಿಂದ ಸಾಗುತ್ತಿದೆ. ಎಬಿಸಿ ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

English summary
Cafe Coffee Day shops were changing as grocery stores. CCD has joins hands with Japan company and will change CCD shops into coffee day essentials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X