ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೇಬಲ್ ಬಿಲ್ ಸದ್ದಿಲ್ಲದೇ ಹೆಚ್ಚಳ!

|
Google Oneindia Kannada News

Cable TV
ಬೆಂಗಳೂರು, ಜ.15 : ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ದೂರುತ್ತಿದ್ದ ಬೆಂಗಳೂರಿನ ಜನರಿಗೆ ಕೇಬಲ್ ಆಪರೇಟರ್ ಗಳು ಶಾಕ್ ನೀಡಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಕೇಬಲ್ ಬಿಲ್ ಸದ್ದಿಲ್ಲದೆ 20 ರಿಂದ 30 ರೂ. ಹೆಚ್ಚಾಗಿದೆ. ಪರಿಷ್ಕೃತ ದರ ಮಾರ್ಚ್ ತಿಂಗಳಿನಿಂದ ನಗರದಲ್ಲಿ ಜಾರಿಗೆ ಬರಲಿದೆ.

ಸುಮಾರು ಏಳು ವರ್ಷಗಳಿಂದ ಕೇಬಲ್ ಶುಲ್ಕ ಹೆಚ್ಚಳ ಮಾಡಿಲ್ಲ ಎಂದು ಸಭೆ ನಡೆಸಿದ ಬೆಂಗಳೂರು ಮಹಾನಗರ ಕೇಬಲ್ ಆಪರೇಟರ್‌ಗಳು 20ರಿಂದ 30 ರೂ. ದರವನ್ನು ಹೆಚ್ಚಿಸಿದ್ದಾರೆ. ನಗರದ ಕೆಲವು ಪ್ರದೇಶಗಳಲ್ಲಿ ನೂತನ ದರವನ್ನು ಈ ತಿಂಗಳಿನಿಂದಲೇ ಜಾರಿಗೆ ತಂದಿದ್ದು, ಮಾರ್ಚ್ ನಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ. [ಸೆಟ್‌ಟಾಪ್ ಬಾಕ್ಸ್ ಗೆ ಎಷ್ಟು ಹಣ ಕೊಟ್ಟಿದ್ದೀರಿ?]

ನಗರದ ಬನಶಂಕರಿ, ಜಯನಗರ, ಮಲ್ಲೇಶ್ವರಂ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಪರಿಷ್ಕೃತ ದರ ಈಗಾಗಲೇ ಜಾರಿಗೆ ಬಂದಿದ್ದು ಜನರು 20ರಿಂದ 30 ರೂ. ದರ ಹೆಚ್ಚು ಪಾವತಿ ಮಾಡಿದ್ದಾರೆ. ಉಳಿದ ಪ್ರದೇಶಗಳಲ್ಲೂ ನೂತನ ದರ ಹಂತ ಹಂತವಾಗಿ ಜಾರಿಗೆ ಬರಲಿದ್ದು, ಮಾರ್ಚ್ ತಿಂಗಳಿನಲ್ಲಿ ಜನರು ನೂತನ ದರ ಪಾವತಿ ಮಾಡಬೇಕಾಗುತ್ತದೆ.

ಸೇವಾ ಶುಲ್ಕ ಹಾಗೂ ಮನರಂಜನಾ ತೆರಿಗೆಯನ್ನು ಪಾವತಿಸಬೇಕಾದ ಎಂಎಸ್‌ಒಗಳು, ಅದನ್ನು ಗ್ರಾಹಕರ ಮೇಲೆ ಹೇರುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಶೇಕಡ 12.36 ರಷ್ಟು ಸೇವಾ ತೆರಿಗೆ ಹಾಗೂ ಶೇಕಡ 6ರಷ್ಟು ಮನರಂಜನಾ ತೆರಿಗೆ ಪಾವತಿ ಮಾಡಬೇಕಾಗಿದೆ. ಜೊತೆಗೆ ಏಳು ವರ್ಷಗಳಿಂದ ದರ ಹೆಚ್ಚಿಸಿಲ್ಲ ಎಂದು ಕೇಬಲ್ ಆಪರೇಟರ್ ಗಳು ದರ ಹೆಚ್ಚಳಕ್ಕೆ ಸಮರ್ಥನೆ ನೀಡಿದ್ದಾರೆ.

ಕೇಬಲ್ ಆಪರೇಟರ್ ಗಳಿಗೆ ಬೆಂಗಳೂರಿನಲ್ಲಿ ಸದ್ಯ ಗ್ರಾಹಕರು ಸರಾಸರಿ 250ರೂ ಪಾವತಿ ಮಾಡುತ್ತಿದ್ದಾರೆ. ಆದರೆ, ನೂತನ ದರದ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಹೊರಬಿದ್ದಿಲ್ಲ. 20 ಅಥವ 30 ರೂ. ಹೆಚ್ಚಳವಾಗುವುದು ಖಾತ್ರಿಯಾಗಿದೆ. ಆದ್ದರಿಂದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಿಂದ ಗ್ರಾಹಕರು ನೂತನ ದರವನ್ನು ನೀಡಲು ಸಿದ್ಧರಾಗಬೇಕಿದೆ.

English summary
Cable TV operators increased cabel bill 20 to 30 rs in Bangalore. In some part of Bangalore new price will collect form this month. New tariff will affect form March month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X