ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಪ್ರಕೃತಿ ವಿಕೋಪ: ಸಂಪುಟ‌ ಉಪ ಸಮಿತಿ ಸಭೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 21: ರಾಜ್ಯದಲ್ಲಿ ಅತಿವೃಷ್ಟಿ ಅನಾವೃಷ್ಟಿ ಚರ್ಚೆಗೆ ಸಂಪುಟ ಉಪ ಸಮಿತಿ ಸಭೆಯನ್ನು ಮಂಗಳವಾರ ಆಯೋಜಿಸಲಾಗಿದೆ. ಕೊಡಗು ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಭಾರಿ ಮಳೆಯ ಹಾನಿ ಕುರಿತು ಕಂದಾಯ ಸಚಿವ ಆರ್‌ವಿ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಯಲಿದೆ.

ಮಳೆಯಿಂದ ಆಗಿರುವ ಹಾನಿ ಕುರಿತು ಮೂರು ದಿನಗಳಲ್ಲಿ ವರದಿ ನೀಡುವಂತೆ ಸರ್ಕಾರ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದೆ. ಆ ಕುರಿತ ಪ್ರಾಥಮಿಕ ವರದಿ ಮಂಗಳವಾರ ಸರ್ಕಾರದ ಕೈ ಸೇರುವ ಸಾಧ್ಯತೆಗಳಿದ್ದು, ಸಭೆಯಲ್ಲಿ ಹಲವು ಮಹಹತ್ವದ ತೀರ್ಮಾನ ಕೈಗೊಳ್ಳಲಾಗುತ್ತದೆ.

ಕೊಡಗಿನ ಜಲಪ್ರಳಯಕ್ಕೆ ಕೊಳ್ಳೇಗಾಲದ ಊರುಗಳು ನೀರುಪಾಲು! ಕೊಡಗಿನ ಜಲಪ್ರಳಯಕ್ಕೆ ಕೊಳ್ಳೇಗಾಲದ ಊರುಗಳು ನೀರುಪಾಲು!

ಚಿತ್ರದುರ್ಗ, ಯಾದಗಿರಿ, ರಾಯಚೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಅಭಾವದಿಂದ ಆದ ಬೆಳೆ ಹಾನಿ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮಾಹಿತಿ ಲಭ್ಯವಾಗಿದ್ದು, ಚರ್ಚೆಗೆ ಬಂದಿದೆ.

Cabinet sub committee on natural disasters will meet today

ಈಗಾಗಲೇ ಕೊಡಗು ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಜಮೀನು ನಾಶವಾಗಿದೆ, ಜನರು ಕಂಗಾಲಾಗಿದ್ದಾರೆ, ತಾವು ವಾಸಿಸುತ್ತಿದ್ದ ಪ್ರದೇಶ ಯಾವುದು ಎನ್ನುವುದರ ಕುರಿತು ಯಾವುದೇ ಕುರುಹುಗಳು ಉಳಿಯದಂತೆ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಕೆ.ಆರ್.ಎಸ್. ನೀರು: ಕಾವೇರಿ ಪ್ರವಾಹಕ್ಕೆ ಮಂಡ್ಯದಲ್ಲೂ ಆತಂಕದ ಸ್ಥಿತಿ ಕೆ.ಆರ್.ಎಸ್. ನೀರು: ಕಾವೇರಿ ಪ್ರವಾಹಕ್ಕೆ ಮಂಡ್ಯದಲ್ಲೂ ಆತಂಕದ ಸ್ಥಿತಿ

ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ, ಅವರಿಗೆ ಸಹಾಯ ಮಾಡುವ ಕುರಿತು ಅದರೊಂದಿಗೆ ಎಲ್ಲೆಲ್ಲಿ ಎಷ್ಟು ನಷ್ಟವಾಗಿದೆ ಎಂದು ಚರ್ಚಿಸಲು ಈ ಸಭೆ ಕರೆಯಲಾಗಿದೆ. ಕೇವಲ ಕೊಡಗು ಮಾತ್ರವಲ್ಲದೆ ದಕ್ಷಿಣ ಕನ್ನಡ, ಮಲೆನಾಡು, ಚಿಕ್ಕಮಗಳೂರು ಭಾಗಗಳಲ್ಲಿ ಕೂಡ ವಿಪರೀತ ಮಳೆಯಾಗಿದೆ.

English summary
State cabinet sub committee on natural disasters will meet on August 31 to discuss about rehabilitation of flood-affected people in Kodagu and other districts of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X