• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

RR ನಗರ ಚುನಾವಣಾ ಪ್ರಚಾರದಲ್ಲಿ ಸಿಎಂ ಬಿಎಸ್ವೈ ಹೇಳಿದ್ದೇನು, ಈಗ ಮಾಡುತ್ತಿರುವುದೇನು?

|

ಬೆಂಗಳೂರು, ಜ 13: ಮುಖ್ಯಮಂತ್ರಿ ಯಡಿಯೂರಪ್ಪನವರ ಭಗೀರಥ ಪ್ರಯತ್ನದ ನಂತರ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಸಂಕ್ರಾಂತಿಯ ಮುನ್ನಾದಿನವಾದ ಬುಧವಾರದ ( ಜ 13)

ಶುಭ ಮಹೂರ್ತದಲ್ಲಿ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಯಾರು ಸಚಿವರಾಗುತ್ತಾರೆ, ಯಾರನ್ನು ಕೈಬಿಡಲಾಗುತ್ತದೆ, ಪ್ರಾಂತ್ಯಾವರು ಪ್ರಾತಿನಿಧ್ಯತೆ ಯಾವರೀತಿಯಲ್ಲಿರಲಿದೆ ಎನ್ನುವ ಎಲ್ಲಾ ಕುತೂಹಲಕ್ಕೆ ಮುಖ್ಯಮಂತ್ರಿಗಳು ತೆರೆ ಎಳೆದಿದ್ದಾರೆ.

ಪ್ರಮಾಣವಚನ ಸ್ವೀಕರಿಸುವವರ ಹೆಸರು ಪ್ರಕಟಿಸಿದ ಸಿಎಂ ಯಡಿಯೂರಪ್ಪ!

ಇಂದು ಯಾರೆಲ್ಲಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನುವ ಹೆಸರನ್ನು ಮುಖ್ಯಮಂತ್ರಿಗಳು ಈಗಾಗಲೇ ಪ್ರಕಟಿಸಿಯಾಗಿದೆ. ಹಾಲೀ ಅಬಕಾರಿ ಸಚಿವ ಎಚ್.ನಾಗೇಶ್ ಅವರಿಗೆ ರಾಜೀನಾಮೆ ನೀಡುವಂತೆ ಸಿಎಂ ಸೂಚಿಸಿದ್ದಾರೆ.

ಮುನಿರತ್ನಗೆ ಕೈ ತಪ್ಪಿದ ಸಚಿವ ಸ್ಥಾನ; ಶ್ರೀರಾಮುಲು ಹೇಳಿದ್ದೇನು?

ನಿರೀಕ್ಷೆಯಂತೆ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ, ಬಿಎಸ್ವೈ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದವರ ಪೈಕಿ ಎಂ.ಟಿ.ಬಿ ನಾಗರಾಜ್ ಮತ್ತು ಆರ್. ಶಂಕರ್ ಅವರಿಗೆ ಸಚಿವಸ್ಥಾನ ಒಲಿದಿದೆ. ಜೊತೆಗೆ, ಎಚ್.ವಿಶ್ವನಾಥ್ ಹೆಸರು ಪರಿಗಣನೆಗೇ ಬಂದಿಲ್ಲ. ಆದರೆ, ಆಶ್ಚರ್ಯ ಎನ್ನುವಂತೆ ಮುನಿರತ್ನ ಅವರ ಹೆಸರು ಪಟ್ಟಿಯಲ್ಲಿ ಇಲ್ಲದೇ ಇರುವುದು. ಬಿಎಸ್ವೈ, ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಹೇಳಿದ್ದೇನು, ಈಗ ಮಾಡುತ್ತಿರುವುದೇನು?

ಏಳು ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ, ಸಿಎಂ

ಏಳು ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ, ಸಿಎಂ

ಎಸ್.ಅಂಗಾರ, ಮುರುಗೇಶ್ ನಿರಾಣಿ, ಎಂ.ಟಿ.ಬಿ ನಾಗರಾಜ್, ಆರ್.ಶಂಕರ್, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಮತ್ತು ಸಿ.ಪಿ.ಯೋಗೀಶ್ವರ್ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಭಾರೀ ಅಂತರದಿಂದ ಗೆಲುವು ಸಾಧಿಸಿದ್ದ ಮುನಿರತ್ನ ಹೆಸರು ಇಲ್ಲ

ಭಾರೀ ಅಂತರದಿಂದ ಗೆಲುವು ಸಾಧಿಸಿದ್ದ ಮುನಿರತ್ನ ಹೆಸರು ಇಲ್ಲ

ಈ ಪಟ್ಟಿಯಲ್ಲಿ ಆರ್.ಆರ್.ನಗರ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದ ಮುನಿರತ್ನ ಅವರ ಹೆಸರು ಇಲ್ಲ. ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲ ಎನ್ನುವುದನ್ನು ಅರಿತ ಮುನಿರತ್ನ ಅವರು ಒಂದು ದಿನದ ಹಿಂದೆಯೇ ಮುಖ್ಯಮಂತ್ರಿಗಳನ್ನು ಆರ್.ಅಶೋಕ್ ಜೊತೆ ಹೋಗಿ ಭೇಟಿ ಮಾಡಿದ್ದರು. ನಕಲಿ ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ಯಕ್ಕೆ ಸಂಪುಟ ಸೇರ್ಪಡೆ ಸಾಧ್ಯವಿಲ್ಲ ಎನ್ನುವ ಮಾತನ್ನು ಸಿಎಂ ಹೇಳಿದ್ದರು ಎಂದು ಹೇಳಲಾಗುತ್ತಿದೆ.

ಆರ್.ಆರ್.ನಗರ ಉಪಚುನಾವಣೆಯ ಪ್ರಚಾರ

ಆರ್.ಆರ್.ನಗರ ಉಪಚುನಾವಣೆಯ ಪ್ರಚಾರ

ಆದರೆ, ಆರ್.ಆರ್.ನಗರ ಉಪಚುನಾವಣೆಯ ಪ್ರಚಾರದ ವೇಳೆ ಯಡಿಯೂರಪ್ಪನವರು ಮುನಿರತ್ನ ಸಚಿವರಾಗಲಿದ್ದಾರೆ ಎನ್ನುವ ಭರವಸೆಯನ್ನು ಮತದಾರರಿಗೆ ನೀಡಿದ್ದರು. ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, "ಮುನಿರತ್ನ ಬಗ್ಗೆ ಹೆಚ್ಚಿನ ವಿವರಣೆ ನಿಮಗೆ ನೀಡುವ ಅವಶ್ಯಕತೆಯಿಲ್ಲ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ, ಅವರು ಶಾಸಕರಾದ ಮೇಲೆ, ಅವರೇ ಸಚಿವರಾಗುವುದಂತೂ ನಿಶ್ಚಿತ"ಎಂದು ಯಡಿಯೂರಪ್ಪ ಹೇಳಿದ್ದರು.

  Yediyurappaಗೆ Vishwanth class ತಗೊಂಡ ಪರಿ ಇದು!! | Oneindia Kannada
  ಶಾಸಕರಾಗಿ ನೀವು ಆಯ್ಕೆ ಮಾಡುತ್ತಿಲ್ಲ, ಮಂತ್ರಿಯಾಗಿ ಆಯ್ಕೆ ಮಾಡುತ್ತೀರಿ

  ಶಾಸಕರಾಗಿ ನೀವು ಆಯ್ಕೆ ಮಾಡುತ್ತಿಲ್ಲ, ಮಂತ್ರಿಯಾಗಿ ಆಯ್ಕೆ ಮಾಡುತ್ತೀರಿ

  "ಈ ಬಾರಿ ಮುನಿರತ್ನ ಅವರನ್ನು ಶಾಸಕರಾಗಿ ನೀವು ಆಯ್ಕೆ ಮಾಡುತ್ತಿಲ್ಲ, ಮಂತ್ರಿಯಾಗಿ ಆಯ್ಕೆ ಮಾಡುತ್ತೀರಿ. ಸಚಿವರಾದ ಮೇಲೆ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ದಿಯಾಗಲಿದೆ"ಎಂದು ಯಡಿಯೂರಪ್ಪ, ಆರ್.ಆರ್.ನಗರದ ರೋಡ್ ಶೋ ವೇಳೆ ಮತದಾರರಿಗೆ ಭರವಸೆಯನ್ನು ನೀಡಿದ್ದರು. ಹಾಗಾಗಿ, ಸದ್ಯದ ಮಟ್ಟಿಗೆ ಬಿಎಸ್ವೈ ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ.

  English summary
  Cabinet Expansion: CM Yediyurappa Failed To Keep Up His Word On RR Nagar MLA Munirathna.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X