ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

198 ವಾರ್ಡ್‌ನ ಬಿಬಿಎಂಪಿ ವಿಭಜನೆಗೆ ಸರ್ಕಾರದ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಮಾ. 20 : ಹಲವಾರು ದಿನಗಳ ಚರ್ಚೆಯ ಬಳಿಕ 198 ವಾರ್ಡ್‌ಗಳ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜನೆ ಮಾಡುವ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದೆ. ಮೂರು ಭಾಗಗಳಾಗಿ ಪಾಲಿಕೆಯನ್ನು ವಿಭಜಿಸಲು ಸಚಿವ ಸಂಪುಟ ಸಭೆ ಅಸ್ತು ಎಂದಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೆಂಗಳೂರು ಕೇಂದ್ರ, ಪೂರ್ವ ಮತ್ತು ಪಶ್ಚಿಮ ಎಂದು ಮೂರು ಪಾಲಿಕೆಗಳಾಗಿ ವಿಭಜಿಸಲು ಒಪ್ಪಿಗೆ ನೀಡಲಾಗಿದೆ. [ಬಿಬಿಎಂಪಿ ವಿಭಜನೆಯಾಗಬೇಕೆ? ನಿಮ್ಮ ಅಭಿಪ್ರಾಯ ತಿಳಿಸಿ]

ಪಾಲಿಕೆ ವಿಭಜನೆ ಕುರಿತು ಕರಡು ಅಧಿಸೂಚನೆ ಹೊರಡಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುತ್ತದೆ. ಬಿಬಿಎಂಪಿ ಪ್ರಧಾನ ಕಚೇರಿ ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆಗೆ ಸೇರಲಿದ್ದು, ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ ಕಚೇರಿ ಎಂ.ಜಿ.ರಸ್ತೆಯ ಮೇಯೊಹಾಲ್‌ನ ಹಳೇ ಪಾಲಿಕೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. [ಬಿಬಿಎಂಪಿ ವಿಭಜನೆ ಅನಿವಾರ್ಯ : ಸಮಿತಿ ವರದಿ]

BBMP

ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆ ಕಚೇರಿಯನ್ನು ವಿಜಯನಗರ ಅಥವಾ ಬ್ಯಾಟರಾಯನಪುರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮೂಲಕ 198 ವಾರ್ಡ್‌ಗಳ ಪಾಲಿಕೆ ಮೂರು ಭಾಗಗಳಾಗಿ ವಿಂಗಡನೆಯಾಗಲಿದೆ. ಹಲವಾರು ದಿನಗಳಿಂದ ಪಾಲಿಕೆ ವಿಭಜನೆ ಬಗ್ಗೆ ಚರ್ಚೆ ನಡೆದಿತ್ತು, ಸರ್ಕಾರ ಅಂತಿಮವಾಗಿ ಇದಕ್ಕೆ ಒಪ್ಪಿಗೆ ನೀಡಿದೆ. [ಪಾಲಿಕೆ ವಿಭಜನೆ, ಮೇಯರ್ ಹೇಳುವುದೇನು?]

ಚುನಾವಣೆ ಮುಂದಕ್ಕೆ : ಸದ್ಯದ ಪಾಲಿಕೆ ಸದಸ್ಯರ ಆಡಳಿತಾವಧಿ ಏ.22ಕ್ಕೆ ಕೊನೆಗೊಳ್ಳಲಿದೆ. ಪಾಲಿಕೆಯನ್ನು ವಿಭಜಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 4 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ಬಿಬಿಎಂಪಿ ಚುನಾವಣೆಯನ್ನು ಕೆಲವು ತಿಂಗಳ ಮಟ್ಟಿಗೆ ಮುಂದೂಡುವುದು ಅನಿವಾರ್ಯವಾಗಿದೆ.

ವಿಧಾನಸಭಾ ಕ್ಷೇತ್ರವೂ ಹಂಚಿಕೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೂರು ಭಾಗಗಳಾಗಿ ವಿಂಗಡನೆಯಾದರೆ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳು ಹಂಚಿ ಹೋಗಲಿವೆ. ಅದರಂತೆ ಬೆಂಗಳೂರು ಕೇಂದ್ರಕ್ಕೆ ಪದ್ಮನಾಭನಗರ, ಹೆಬ್ಬಾಳ, ಪುಲಕೇಶಿನಗರ, ಚಿಕ್ಕಪೇಟೆ, ಸರ್ವಜ್ಞನಗರ, ಬಸವನಗುಡಿ, ಜಯನಗರ, ಶಿವಾಜಿನಗರ, ಗಾಂಧಿನಗರ, ಮಲ್ಲೇಶ್ವರ, ಚಾಮರಾಜಪೇಟೆ, ಬೆಂಗಳೂರು ದಕ್ಷಿಣ, ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರಗಳು ಬರಲಿವೆ.

ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಬೊಮ್ಮನಹಳ್ಳಿ, ಸಿ.ವಿ.ರಾಮನ್‌ ನಗರ, ಶಾಂತಿನಗರ, ಬಿ.ಟಿ.ಎಂ ಲೇಔಟ್‌, ಕೆ.ಆರ್‌.ಪುರ, ಮಹದೇವಪುರ ಕ್ಷೇತ್ರಗಳು ಬರಲಿವೆ. ಬೆಂಗಳೂರು ಪಶ್ಚಿಮ ಕ್ಷೇತ್ರದ ವ್ಯಾಪ್ತಿಗೆ ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ, ಯಶವಂತಪುರ, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ, ದಾಸರಹಳ್ಳಿ, ಯಲಹಂಕ ಕ್ಷೇತ್ರಗಳು ಒಳಪಡಲಿವೆ.

English summary
Karnataka Government on Thursday finally decided to split the Bruhat Bengaluru Mahanagara Palike (BBMP). The government had recently formed an expert committee to look into the possible splitting of the 198 wards BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X